Published on: October 11, 2022
ನೊಬೆಲ್ ಪ್ರಶಸ್ತಿಗಳು 2022
ನೊಬೆಲ್ ಪ್ರಶಸ್ತಿಗಳು 2022
ಶಾಂತಿ ಪ್ರಶಸ್ತಿ
- ಬೆಲಾರಸ್ನ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಬಿಲಿಯಾಟ್ಸ್ಕಿ :ಬೆಲಾರಸ್ನ ಅಲೆಸ್ ಬಿಲಿಯಾಟ್ಸ್ಕಿ 1980 ರ ದಶಕದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಚಳವಳಿಯ ಪ್ರಾರಂಭಿಕರಲ್ಲಿ ಒಬ್ಬರಾಗಿದ್ದರು ಮತ್ತು ಪ್ರಜಾಪ್ರಭುತ್ವ ಮತ್ತು ಶಾಂತಿಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
- ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್: ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್ ರಷ್ಯಾದಲ್ಲಿ ರಾಜಕೀಯ ದಬ್ಬಾಳಿಕೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಮಾಹಿತಿಯನ್ನು ಸಂಗ್ರಹಿಸಿದೆ ಮತ್ತು ವ್ಯವಸ್ಥಿತಗೊಳಿಸಿದೆ.
- ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್: ಕೈವ್ನಲ್ಲಿರುವ ಸಿವಿಲ್ ಲಿಬರ್ಟೀಸ್ ಕೇಂದ್ರವು ಉಕ್ರೇನ್ನಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಮುನ್ನಡೆಸುತ್ತಿದ್ದು, ಉಕ್ರೇನಿಯನ್ ನಾಗರಿಕ ಸಮಾಜವನ್ನು ಬಲಪಡಿಸುವ ನಿಲುವನ್ನು ತೆಗೆದುಕೊಂಡಿದೆ ಮತ್ತು ಉಕ್ರೇನ್ ಅನ್ನು ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವವನ್ನಾಗಿ ಮಾಡಲು ಪಣತೊಟ್ಟಿದೆ.
ಸಾಹಿತ್ಯ ಪ್ರಶಸ್ತಿ
- ಫ್ರೆಂಚ್ನ ಬರಹಗಾರ್ತಿ ಅನ್ನಿ ಎರ್ನಾಕ್ಸ್ ಪಡೆದುಕೊಂಡಿದ್ದಾರೆ.
- 82 ವರ್ಷದ ಅನ್ನಿ ಎರ್ನಾಕ್ಸ್, 30 ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಎರ್ನಾಕ್ಸ್ ಲಿಂಗ, ಭಾಷೆ ಮತ್ತು ವರ್ಗಕ್ಕೆ ಸಂಬಂಧಿಸಿದಂತೆ ಬಲವಾದ ಅಸಮಾನತೆಗಳಿಂದ ಗುರುತಿಸಲಾದ ಜೀವನವನ್ನು ಸ್ಥಿರವಾಗಿ ಮತ್ತು ವಿವಿಧ ಕೋನಗಳಿಂದ ಶೋಧಿಸುತ್ತಾರೆ ಎಂದು ನೊಬೆಲ್ ಸಮಿತಿ ಹೇಳಿದೆ.
ರಾಸಾಯನ ವಿಜ್ಞಾನ ವಿಭಾಗ
- ಅಮೇರಿಕಾದ ಕ್ಯಾರೊಲಿನ್ ಆರ್ ಬರ್ಟೊಝಿ ಮತ್ತು ಕೆ ಬ್ಯಾರಿ ಶಾರ್ಪ್ಲೆಸ್ ಮತ್ತು ಡೆನ್ಮಾರ್ಕಿನ ಮಾರ್ಟೆನ್ ಮೆಲ್ಡಾಲ್ ರಾಸಾಯನ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿಗಳಾಗಿದ್ದು, ಕ್ಲಿಕ್ ಕೆಮಿಸ್ಟ್ರಿ ಹಾಗೂ ಬಯೋಆರ್ಥೋಗನಲ್ ಕೆಮಿಸ್ಟ್ರಿಯ ಅಭಿವೃದ್ಧಿಗಾಗಿ ಈ ಗೌರವಕ್ಕೆ ಭಾಜನರಾಗಿದ್ದಾರೆ. ಎರಡು ನೊಬೆಲ್ ಪ್ರಶಸ್ತಿಗಳನ್ನು ಪಡೆದ 5 ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬ್ಯಾರಿ ಶಾರ್ಪ್ಲೆಸ್ ಭಾಜನರಾಗಿದ್ದಾರೆ. ಶಾರ್ಪೆಲ್ಸ್ ಅವರಿಗೆ 2001 ರಲ್ಲಿ ಮತ್ತು 2022 ರಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಬಂದಿದೆ.
ಭೌತಶಾಸ್ತ್ರ ವಿಭಾಗ :
- ಅಲೈನ್ ಆಸ್ಪೆಕ್ಟ್, ಜಾನ್ ಎಫ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ವಿಜ್ಞಾನಿಗಳಾಗಿದ್ದು, ಕ್ವಾಂಟಮ್ ಮಾಹಿತಿ ವಿಜ್ಞಾನದ ಪ್ರವರ್ತಕರಾಗಿದ್ದಕ್ಕಾಗಿ ಹಾಗೂ ಎಂಟಾಂಗಲ್ಡ್ ಫೋಟಾನ್ ಗಳೊಂದಿಗಿನ ಪ್ರಯೋಗಕ್ಕೆ ಸಂಬಂಧಿಸಿದ ಕೆಲಸಗಳನ್ನು ಗುರುತಿಸಿ ನೋಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
ವೈದ್ಯಕೀಯ ಕ್ಷೇತ್ರ :
- ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ (ಪ್ಯಾಲಿಯೊಜೆನೊಮಿಕ್ಸ್ ಕ್ಷೇತ್ರ)
- ಪ್ಯಾಲಿಯೊಜೆನೊಮಿಕ್ಸ್ ಅಳಿವಿನಂಚಿನಲ್ಲಿರುವ ಜಾತಿಗಳಲ್ಲಿನ ಜೀನೋಮಿಕ್ ಪುನರ್ನಿರ್ಮಾಣ ಮತ್ತು ವಿಶ್ಲೇಷಣೆಯ ಆಧಾರದ ಮಾಹಿತಿಯನ್ನು ಹೊಂದಿರುವ ವಿಜ್ಞಾನದ ಕ್ಷೇತ್ರವಾಗಿದೆ.