Published on: November 2, 2022

ಜಮ್ಶೆಡ್ ಜೆ ಇರಾನಿ

ಜಮ್ಶೆಡ್ ಜೆ ಇರಾನಿ

ಸುದ್ದಿಯಲ್ಲಿ ಏಕಿದೆ?

ಪದ್ಮಭೂಷಣ ಪಡೆದ, ಸ್ಟೀಲ್ ಮ್ಯಾನ್ ಆಫ್ ಇಂಡಿಯಾ (ಭಾರತದ ಉಕ್ಕಿನ ಮನುಷ್ಯ) ಖ್ಯಾತಿಯ ಜಮ್ಶೆಡ್‌ ಜೆ ಇರಾನಿ ಅವರು ನಿಧನರಾದರು.

ಮುಖ್ಯಾಂಶಗಳು

  • ಜನನ: ಜಿಜಿ ಇರಾನಿ ಮತ್ತು ಖೋರ್ಶೆಡ್‌ ಇರಾನಿ ದಂಪತಿಯ ಮಗನಾಗಿ 1936ರ ಜೂನ್‌ 2ರಂದು ನಾಗ್ಪುರದಲ್ಲಿ ಜನಿಸಿದ್ದರು.
  • ವಿದ್ಯಾಭ್ಯಾಸ: ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ 1956ರಲ್ಲಿ ಬಿಎಸ್‌ಸಿ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ 1958ರಲ್ಲಿ ಭೂವಿಜ್ಞಾನ ವಿಷಯದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದರು.
  • ಬಳಿಕ ಜೆಎನ್ ಟಾಟಾ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡ್‌ ತೆರಳಿ ಶೆಫಿಲ್ಡ್‌ ವಿಶ್ವವಿದ್ಯಾಲಯದಲ್ಲಿ ಲೋಹಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (1960) ಮತ್ತು ಪಿಎಚ್‌ಡಿ (1963) ಪೂರ್ಣಗೊಳಿಸಿದ್ದರು.
  • ವೃತ್ತಿ: ಇಂಗ್ಲೆಂಡ್‌ನ ಶೆಫೀಲ್ಡ್‌ನಲ್ಲಿರುವ ‘ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಸಿಯೇಷನ್‌’ಗೆ ಸೇರುವ ಮೂಲಕ 1963ರಲ್ಲಿ ವೃತ್ತಿ ಜೀವನ ಆರಂಭಿಸಿದರು.
  • ಬಳಿಕ ಸಂಶೋಧನೆ ಮತ್ತು ಅಭಿವೃದ್ಧಿಯ ಉಸ್ತುವಾರಿ ನಿರ್ದೇಶಕರ ಸಹಾಯಕರಾಗಿ ‘ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿ’ಗೆ (ಈಗ ಟಾಟಾ ಸ್ಟೀಲ್) ಸೇರುವ ಮೂಲಕ 1968ರಲ್ಲಿ ಭಾರತಕ್ಕೆ ವಾಪಸ್ ಆದರು.
  • 1978ರಲ್ಲಿ ಜನರಲ್‌ ಸೂಪರಿಂಟೆಂಡೆಂಟ್‌, 1979ರಲ್ಲಿ ಪ್ರಧಾನ ವ್ಯವಸ್ಥಾಪಕರು ಮತ್ತು 1985ರಲ್ಲಿ ಟಾಟಾ ಸ್ಟೀಲ್‌ ಅಧ್ಯಕ್ಷ ಸ್ಥಾನಕ್ಕೇರಿದರು.
  • 1988ರಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು. 1992ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿ 2001ರಲ್ಲಿ ನಿವೃತ್ತರಾಗುವ ವರೆಗೆ ಕರ್ತವ್ಯ ನಿರ್ವಹಿಸಿದ್ದರು.