Published on: November 10, 2022

ಆರೋಗ್ಯ ಅಮೃತ ಯೋಜನೆ

ಆರೋಗ್ಯ ಅಮೃತ ಯೋಜನೆ

ಸುದ್ದಿಯಲ್ಲಿ ಏಕಿದೆ?

ಹಳ್ಳಿಗರ ಆರೋಗ್ಯ ಸುರಕ್ಷತೆಯ ಕಾರಣಕ್ಕೆ ಸೋಂಕು ರಹಿತ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡುವುದಕ್ಕೆ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಯೋಜನೆಯನ್ನು ಈ ವರ್ಷಾಂತ್ಯದೊಳಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ವತಿಯಿಂದ ರಾಜ್ಯದ 14ಜಿಲ್ಲೆಗಳ 114 ತಾಲೂಕಗಳ 2816 ಗ್ರಾಂ.ಪಂ ಗಳಲ್ಲಿ ಈ ಯೋಜನೆಯನ್ನು ಕಳೆದ ವರ್ಷ ಜಾರಿಗೊಳಿಸಲಾಗಿತ್ತು. ಇದರ ಯಶಸ್ಸು ಆಧರಿಸಿ, ಈಗ ಉಳಿದ 17 ಜಿಲ್ಲೆಗಳಲ್ಲೂ ಅನುಷ್ಟಾನಗೊಳಿಸಲಾಗುತ್ತಿದೆ.
  • ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಅಗತ್ಯ ಅನುದಾನ ಒದಗಿಸಲಿದೆ. ಯೋಜನೆಗೆ ಜಿಲ್ಲಾ ಪಂಚಾಯಿತಿಗಳ ಡಿಡಿಒಗಳ ಖಾತೆಗೆ ಖಜಾನೆ 2 ತಂತ್ರಾಂಶದ ಮೂಲಕ ಅನುದಾನ ಬಿಡುಗಡೆ ಮಾಡಲಾಗುತ್ತದೆ.

ಉದ್ದೇಶ

  • ಗ್ರಾಮೀಣ ಜನತೆಯ ಆರೋಗ್ಯವಂತ ಜೀವನ ಶೈಲಿಗೆ ಒತ್ತು ನೀಡುವ ಮತ್ತು ಗ್ರಾಮೀಣ ಜನರ ರೋಗದ ಹೊರೆ ತಗ್ಗಿಸುವ ಉದ್ದೇಶವನ್ನು ಹೊಂದಿದೆ.

ಯೋಜನೆಯ ವಿವರ

  • ಜನರ ಆರೋಗ್ಯ ತಪಾಸಣೆ ಮಾಡಲು ಆಶಾ ಕಾರ್ಯಕರ್ತೆಯರಿಗೆ ಪೂರಕ ತರಭೇತಿ ನೀಡಲಾಗಿದೆ.
  • ಪ್ರತಿ ಗ್ರಾಮ ಪಂಚಾಯಿತಿಗೂ ಒಂದೊಂದು ಆರೋಗ್ಯ ಕಿಟ್ (ಉಪಕರಣಗಳು, ಉಪಭೋಗ್ಯ ವಸ್ತುಗಳು, ಮತ್ತು ಬ್ಯಾಗ)ಗಳನ್ನು ವಿತರಿಸಲಾಗುವುದು.
  • ಗ್ರಾಂ.ಪಂ. ಕಚೇರಿ ಇಲ್ಲವೇ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತದೆ.
  • ಮಕ್ಕಳಿಂದ ವೃದ್ಧರವರೆಗೆ ಎಲ್ಲ ವರ್ಗದವರು ತಪಾಸಣೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು.
  • ರಕ್ತದ ಕೊರತೆ, ರಕ್ತದೊತ್ತಡ, ಮಧುಮೇಹ,ಅಪೌಷ್ಟಿಕತೆ ಇತ್ಯಾದಿ ಸಮಸ್ಯೆಗಳಿರುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ