Published on: December 12, 2022
ಕಾಲರ್‌ನೇಮ್ ಐಡಿ
ಕಾಲರ್‌ನೇಮ್ ಐಡಿ
ಸುದ್ದಿಯಲ್ಲಿ ಏಕಿದೆ? ಪದೇ ಪದೇ ಕರೆ ಮಾಡಿ ಕಿರಿಕಿರಿ ಉಂಟು ಮಾಡುವ ಸಾಲದ ಆಫರ್ ಕೊಡುವ ಕರೆಗಳು, ಅನ್ಯರ ಹೆಸರಲ್ಲಿ ವಂಚನೆಗೆ ಯತ್ನಿಸುವ ಕರೆಗಳನ್ನು ತಡೆಗಟ್ಟಲು ಕೇಂದ್ರ ಸರಕಾರ ಮುಂದಾಗಿದೆ. ಈ ಸಂಬಂಧ ದೇಶದ ಎಲ್ಲ ಹೊಸ ಮೊಬೈಲ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವ ನೂತನ ‘ಕಾಲರ್ ಐಡಿ’ಯ ಅಳವಡಿಕೆ ಹಾಗೂ ಬಳಕೆಯಲ್ಲಿರುವ ಫೋನ್‌ಗಳಿಗೆ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾದ ಆ್ಯಪ್ ಬಿಡುಗಡೆ ಮಾಡಲಿದೆ.
ಮುಖ್ಯಾಂಶಗಳು
- ಸದ್ಯ ಬಳಕೆಯಲ್ಲಿರುವ ಖಾಸಗಿ ಕಾಲರ್ ಐಡಿ ಆ್ಯಪ್‌ಗಳಾದ ಟ್ರೂಕಾಲರ್ , ಭಾರತ್ ಕಾಲರ್ ಐಡಿ ಅಥವಾ ಆ್ಯಂಟಿ ಸ್ಪ್ಯಾಮ್ ಆ್ಯಪ್‌ಗಳ ಮಾದರಿಯಲ್ಲೇ ಟೆಲಿಕಾಂ ಇಲಾಖೆಯಿಂದ ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದಿಂದ ಆಸಕ್ತ ಕಂಪನಿಗಳು ಹಾಗೂ ವ್ಯಕ್ತಿಗಳ ಸಹಯೋಗಕ್ಕೆ ವೆಬ್‌ಸೈಟ್‌ನಲ್ಲಿ ಕನ್ಸಲ್ಟೇಶನ್ ಪೇಪರ್ ಲಭ್ಯವಾಗಿಸಿದೆ.
- ದೇಶದಲ್ಲಿ114 ಕೋಟಿಗೂ ಅಧಿಕ ವೈರ್‌ಲೆಸ್ ಬಳಕೆದಾರರಿದ್ದು, ವಿಶ್ವದಲ್ಲೇ 2ನೇ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಸರಕಾರಿ ‘ಟ್ರೂಕಾಲರ್’
- ಕರೆ ಸ್ವೀಕೃತಿಯಾದ ಕೂಡಲೇ , ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಸಂಗ್ರಹವಾಗಿರದಿದ್ದರೂ ಕರೆ ಮಾಡಿರುವವರ ‘ಐಡಿ (ಹೆಸರು, ಊರು)’ ಮೊಬೈಲ್ ಪರದೆ ಮೇಲೆ ಬಿತ್ತರಗೊಳ್ಳಲಿದೆ. ಖಾಸಗಿ ಕಾಲರ್ ಐಡಿ ಆ್ಯಪ್‌ಗಳಲ್ಲಿ ಬಿತ್ತರಗೊಳ್ಳುವ ಮೊಬೈಲ್ ಸಂಖ್ಯೆಯ ಮಾಹಿತಿಯು ನಿಖರವಾಗಿರುವುದಿಲ್ಲ. ಮೊಬೈಲ್ ಬಳಕೆದಾರರ ಅಭಿಪ್ರಾಯ ಆಧರಿಸಿಯೇ ‘ಐಡಿ’ ಬಿತ್ತರಗೊಳ್ಳುತ್ತದೆ. ಹಾಗಾಗಿ ವಂಚನೆಗೆ ಅವಕಾಶವಿದೆ. ಸರಕಾರದ ಕಾಲರ್ ಐಡಿಯಲ್ಲಿ ಈ ರೀತಿ ಆಗಲು ಅವಕಾಶ ಇರುವುದಿಲ್ಲ ಎಂದಿದ್ದಾರೆ.