Published on: January 2, 2023
ನಿರುದ್ಯೋಗ ದರ
ನಿರುದ್ಯೋಗ ದರ
ಸುದ್ದಿಯಲ್ಲಿ ಏಕಿದೆ? ಭಾರತದ ನಿರುದ್ಯೋಗ ದರವು ಡಿಸೆಂಬರ್‌ನಲ್ಲಿ ಶೇಕಡಾ 8.3 ಕ್ಕೆ ಏರಿದ್ದು, ಇದು 16 ತಿಂಗಳುಗಳಲ್ಲಿ ಅತ್ಯಧಿಕ ದರವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿ ಅಂಶಗಳು ತಿಳಿಸಿವೆ.
ಮುಖ್ಯಾಂಶಗಳು
- ಇದರಲ್ಲಿ ನಗರ ನಿರುದ್ಯೋಗ ದರವು ಹಿಂದಿನ ತಿಂಗಳಿನ ಶೇಕಡಾ 8.96 ರಿಂದ ಡಿಸೆಂಬರ್‌ನಲ್ಲಿ ಶೇಕಡಾ 10.09 ಕ್ಕೆ ಏರಿದೆ.
- ಆದರೆ ಗ್ರಾಮೀಣ ನಿರುದ್ಯೋಗ ದರವು ಶೇಕಡಾ 7.55 ರಿಂದ ಶೇಕಡಾ 7.44 ಕ್ಕೆ ಇಳಿದಿದೆ ಎಂದು ಅಂಕಿಅಂಶ ತೋರಿಸಿದೆ.
- ಡಿಸೆಂಬರ್‌ನಲ್ಲಿ, ನಿರುದ್ಯೋಗ ದರವು ಹರಿಯಾಣದಲ್ಲಿ ಶೇಕಡಾ 37.4 ಕ್ಕೆ ಏರಿತು. ನಂತರ ರಾಜಸ್ಥಾನದಲ್ಲಿ 28.5 ಶೇಕಡಾ ಮತ್ತು ದೆಹಲಿಯಲ್ಲಿ 20.8 ಶೇಕಡಾ ಆಗಿದೆ.
ಹಿಂದಿನ ಅಂಕಿಅಂಶಗಳ ಮಾಹಿತಿ:
- ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಸಂಗ್ರಹಿಸಿದ ಮತ್ತು ನವೆಂಬರ್‌ನಲ್ಲಿ ಬಿಡುಗಡೆಯಾದ ಪ್ರತ್ಯೇಕ ತ್ರೈಮಾಸಿಕ ಮಾಹಿತಿಯ ಪ್ರಕಾರ ನಿರುದ್ಯೋಗ ದರವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದಲ್ಲಿ 7.6 ಶೇಕಡಾಕ್ಕೆ ಹೋಲಿಸಿದರೆ ಶೇಕಡಾ 7.2 ಕ್ಕೆ ಇಳಿದಿದೆ ಎಂದು ತೋರಿಸಿದೆ.
ಹೊಸ ಉದ್ಯೋಗಾವಕಾಶಗಳ ಕೊರತೆ :
- ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರಸ್ತುತ ಈ ಬೆಳವಣಿಗೆ ಮತ್ತು ಕೋವಿಡ್ ಪ್ರಕರಣಗಳ ಹಠಾತ್ ಏರಿಕೆಯಿಂದಾಗಿ ಮುಂಬರುವ ತಿಂಗಳುಗಳಲ್ಲಿ ಯಾವುದೇ ಗಮನಾರ್ಹ ಹೊಸ ಉದ್ಯೋಗಾವಕಾಶಗಳ ಕಂಡು ಬರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ನಿರುದ್ಯೋಗ ದರ ಎಂದರೇನು?
- ಉದ್ಯೋಗ ಮಾಡಲು ಸಬಲರಾಗಿದ್ದರೂ ಕೂಡಾ ಯಾವುದೇ ಉದ್ಯೋಗವಿಲ್ಲದೆ ಇರುವ ಜನ ಸಂಖ್ಯೆಯ ಪ್ರಮಾಣವನ್ನು ನಾವು ನಿರುದ್ಯೋಗ ದರ ಎಂದು ಕರೆಯುತ್ತೇವೆ.
- ಪ್ರಸ್ತುತ ದೇಶದಲ್ಲಿ ಆರ್ಥಿಕ ಸ್ಥಿತಿ ಹೇಗಿರುತ್ತದೆ ಎಂಬ ಆಧಾರದಲ್ಲಿ ನಿರುದ್ಯೋಗ ದರವು ಏರಿಳಿತವಾಗುತ್ತದೆ. ಆರ್ಥಿಕತೆಯು ಕುಗ್ಗಿದ್ದಾಗ ನಿರುದ್ಯೋಗ ದರವು ಹೆಚ್ಚಾಗುತ್ತದೆ, ಆರ್ಥಿಕ ಸ್ಥಿತಿ ಸುಧಾರಿಸಿದಾಗ ನಿರುದ್ಯೋಗ ದರವು ಕಡಿಮೆಯಾಗುತ್ತದೆ. ಆದರೆ ಒಇಸಿಡಿ ಪ್ರಕಾರ ಭಾರತದಲ್ಲಿ ಆರ್ಥಿಕ ಬೆಳವಣಿಗೆಯಾದರೂ ಕೂಡಾ ನಿರುದ್ಯೋಗ ದರ ಮಾತ್ರ ಏರಿಕೆಯಾಗುತ್ತದೆ.
ನಿರುದ್ಯೋಗ ದರದ ಲೆಕ್ಕಾಚಾರ ಹೇಗೆ?
- ನಿರುದ್ಯೋಗಿಗಳು/ಒಟ್ಟು ಕಾರ್ಮಿಕರು× 100 ಎಂಬ ಲೆಕ್ಕಾಚಾರವನ್ನು ಮಾಡಿ ನಿರುದ್ಯೋಗ ದರವನ್ನು ಪತ್ತೆಹಚ್ಚಲಾಗುತ್ತದೆ.
ದೇಶದಲ್ಲಿ ನಿರುದ್ಯೋಗ ದರ
- ಜುಲೈ-ಸೆಪ್ಟೆಂಬರ್‌ನಲ್ಲಿ ತ್ರೈಮಾಸಿಕದಲ್ಲಿ ಭಾರತದಲ್ಲಿ ಮಹಿಳೆಯರ ನಿರುದ್ಯೋಗ ದರವು ಶೇಕಡ 11.6ರಿಂದ ಶೇಕಡ 9.4ಕ್ಕೆ ಇಳಿದಿದೆ. ಪುರುಷರ ನಿರುದ್ಯೋಗ ದರವು ಶೇಕಡ 9.3ರಿಂದ ಶೇಕಡ 6.6ಕ್ಕೆ ಇಳಿದಿದೆ. ರಾಜಸ್ಥಾನದಲ್ಲಿ ಅಧಿಕ ನಿರುದ್ಯೋಗ ದರ ಹಾಗೂ ಛತ್ತೀಸ್‌ಗಢದಲ್ಲಿ ಕಡಿಮೆ ನಿರುದ್ಯೋಗ ದರವಿದೆ. ಕರ್ನಾಟಕದಲ್ಲಿ ಪ್ರಸ್ತುತ ಶೇಕಡ 3.8ರಷ್ಟು ನಿರುದ್ಯೋಗ ದರವಿದೆ.