Published on: March 8, 2023
ಎಂಆರ್‌ಎಸ್‌ಎಎಮ್ ಮಧ್ಯಮ ಶ್ರೇಣಿಯ ಕ್ಷಿಪಣಿ
ಎಂಆರ್‌ಎಸ್‌ಎಎಮ್ ಮಧ್ಯಮ ಶ್ರೇಣಿಯ ಕ್ಷಿಪಣಿ
ಸುದ್ದಿಯಲ್ಲಿ ಏಕಿದೆ? ಯುದ್ಧನೌಕೆಯಿಂದ ವಾಯು ಪ್ರದೇಶಕ್ಕೆ ಗುರಿಯಿಟ್ಟು ಉಡಾಯಿಸಬಹುದಾದ ಮಧ್ಯಮ ಶ್ರೇಣಿಯ ಕ್ಷಿಪಣಿ (MRSAM) –ಯನ್ನು ಭಾರತದ ವಾಯುಪಡೆಯು ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.
ಮುಖ್ಯಾಂಶಗಳು
- ಈ ಪರೀಕ್ಷೆಯನ್ನು ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆ ಐಎನ್‌ಎಸ್ ವಿಶಾಖಪಟ್ಟಣಂನಿಂದ ನಡೆಸಲಾಯಿತು ಮತ್ತು ಇದು ಹಡಗು ವಿರೋಧಿ ಕ್ಷಿಪಣಿಯಾಗಿದ್ದು ಅದು ಶತ್ರು ಹಡಗುಗಳನ್ನು ನಿಮಿಷಗಳಲ್ಲಿ ಹೊಡೆದುರುಳಿಸುವ ಶಕ್ತಿ ಹೊಂದಿದೆ
- ಪರೀಕ್ಷೆಯ ಸಮಯದಲ್ಲಿ, MRSAM ಅತ್ಯಂತ ನಿಖರತೆಯಿಂದ ಗುರಿಯನ್ನು ತಲುಪಿತು .
ಪರೀಕ್ಷೆಯ ಉದ್ದೇಶ: ‘ಆ್ಯಂಟಿ–ಶಿಪ್ ಮಿಸೈಲ್’ಗಳನ್ನು ಎದುರಿಸಬಲ್ಲ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆಯೇ ಎಂಬುದನ್ನು ಮೌಲ್ಯೀಕರಿಸುವುದಕ್ಕಾಗಿ ಪರೀಕ್ಷೆ ನಡೆಸಯಲಾಯಿತು. ಆತ್ಮನಿರ್ಭರ ಭಾರತ ಮಾಡುವ ನಿಟ್ಟಿನಲ್ಲಿ ಇರುವ ಬದ್ಧತೆಯನ್ನು ಇದು ಸಾಬೀತು ಮಾಡಿದೆ.
ಅಭಿವೃದ್ಧಿ: ಡಿಆರ್‌ಡಿಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜಂಟಿಯಾಗಿ ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಉತ್ಪಾದನೆ : ಎಂಆರ್‌ಎಸ್‌ಎಎಮ್ ಅನ್ನು ಸರ್ಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ನಲ್ಲಿ ಹೈದರಾಬಾದ್‌ನಲ್ಲಿ ಉತ್ಪಾದಿಸುತ್ತಿದೆ.
MRSAM
- ಇದನ್ನು ಸೆಪ್ಟೆಂಬರ್ 2021 ರಲ್ಲಿ IAF ಫ್ಲೀಟ್‌ಗೆ ಸೇರಿಸಲಾಯಿತು.
ಕ್ಷಿಪಣಿಯ ವಿಶೇಷತೆ
- 360 ಡಿಗ್ರಿ ಸುತ್ತುವ ಮೂಲಕ ಗಾಳಿಯಲ್ಲಿ ಬರುವ ಬಹು ಗುರಿ ಅಥವಾ ಶತ್ರುಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಬಲ್ಲದು.
- ಈ ಕ್ಷಿಪಣಿಯು 70 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಯಾವುದೇ ಕ್ಷಿಪಣಿ, ಯುದ್ಧ ವಿಮಾನ, ಹೆಲಿಕಾಪ್ಟರ್, ಡ್ರೋನ್, ಕಣ್ಗಾವಲು ವಿಮಾನ ಮತ್ತು ವೈಮಾನಿಕ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
- ಶತ್ರುಗಳ ಸರಿಯಾದ ಮಾಹಿತಿ ಪಡೆಯಲು ಯುದ್ಧ ನಿರ್ವಹಣಾ ವ್ಯವಸ್ಥೆ, ರಾಡಾರ್ ಸಿಸ್ಟಮ್, ಮೊಬೈಲ್ ಲಾಂಚರ್ ಸಿಸ್ಟಮ್, ಅಡ್ವಾನ್ಸ್ಡ್ ಲಾಂಗ್ ರೇಂಜ್ ರಾಡಾರ್, ರಿಲೋಡರ್ ವೆಹಿಕಲ್ ಮತ್ತು ಫೀಲ್ಡ್ ಸರ್ವಿಸ್ ವೆಹಿಕಲ್ ಇತ್ಯಾದಿಗಳನ್ನು ಇದರಲ್ಲಿ ಸೇರಿಸಲಾಗಿದೆ.
ಐಎನ್ಎಸ್ ವಿಶಾಖಪಟ್ಟಣಂ
- ಪರಮಾಣು, ಜೈವಿಕ ಹಾಗೂ ರಾಸಾಯನಿಕ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬಲ್ಲ ಭಾರತದ ಅತಿದೊಡ್ಡ ಸಮರ ನೌಕೆಯಾಗಿದೆ.
- ನಿರ್ಮಾಣ ವೆಚ್ಚ : 29.600 ಕೋಟಿ
- ಪ್ರಸ್ತುತ ಭಾರತದಲ್ಲಿರುವ ಸಮರ ನೌಕೆಗಳಲ್ಲೇ ಇದು ಅತಿ ದೊಡ್ಡ ಸಮರ ನೌಕೆಯಾಗಿದೆ.
- ತೂಕ: 7,300 ಟನ್
- ಮುಂಬೈನ ಡಾಕ್ ಯಾರ್ಡ್ ನಲ್ಲಿ ತಯಾರಿಸಲಾಗಿದೆ.
- ನೌಕೆಗೆ 127 ಎಂಎಂನ ದೊಡ್ಡ ಗನ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದು ಈ ವರೆಗಿನ ಭಾರತದ ಅತಿದೊಡ್ಡ ಗನ್ ವ್ಯವಸ್ಥೆಯಾಗಿದೆ. ಇದಲ್ಲದೆ ಈ ಸಮರ ನೌಕೆಗೆ ಇಸ್ರೇಲಿ ಬಹುವಿಧ ಸರ್ವೇಕ್ಷಣಾ ಮತ್ತು ಅಪಾಯ ಎಚ್ಚರಿಕೆ ವ್ಯವಸ್ಥೆ ಇರುವ ರಾಡಾರ್ ಅನ್ನು ಅಳವಡಿಸಲಾಗಿದ್ದು, ಅತಿ ದೂರದಲ್ಲಿ ಬರುತ್ತಿರುವ ಶತ್ರುಪಾಳಯದ ಕ್ಷಿಪಣಿಗಳನ್ನು ಗುರುತಿಸಿ ಆಗಸದಲ್ಲಿಯೇ ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
- ನವೆಂಬರ್ 2021 ರಲ್ಲಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.