Published on: March 25, 2023
ಚುಟುಕು ಸಮಾಚಾರ : 25 ಮಾರ್ಚ್ 2023
ಚುಟುಕು ಸಮಾಚಾರ : 25 ಮಾರ್ಚ್ 2023
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಮಹಾತ್ಮಾ ಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಹಾಗೂ ಪಂಚತಂತ್ರ 2.0, ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ, ತೆರಿಗೆ ಸಂಗ್ರಹದ ಪಿಓಎಸ್ ಉಪಕರಣಗಳ ಲೋಕಾರ್ಪಣೆ ಮತ್ತು ಜಲಶಕ್ತಿ ಆಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
- ಅತ್ಯುತ್ತಮ ಜಿಲ್ಲಾ ಪಂಚಾಯತ್ ಪುರಸ್ಕಾರದ ಮೊದಲ ಬಹುಮಾನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ (15 ಲಕ್ಷ ರೂ.), ದ್ವಿತೀಯ ಬಹುಮಾನ ಶಿವಮೊಗ್ಗ ಜಿ.ಪಂ. (12.50 ಲಕ್ಷ ರೂ), ತೃತೀಯ ಬಹುಮಾನ ಬಳ್ಳಾ ರಿ, ಬಾಗಲಕೋಟೆ ಜಿ.ಪಂ. (ತಲಾ 10 ಲಕ್ಷ ರೂ.) ಗೆದ್ದುಕೊಂಡಿವೆ
- ಬೆಂಗಳೂರಿನಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ, ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು
- ಬೆಂಗಳೂರಿನ ವೈಟ್ ಫೀಲ್ಡ್ನಿಂದ ಕೃಷ್ಣರಾಜಪುರವರೆಗಿನ “ನಮ್ಮ ಮೆಟ್ರೋ” ಮಾರ್ಗ ಬೆಂಗಳೂರು ಮೆಟ್ರೋ ಹಂತ 2 ರ ರೀಚ್ -1 ವಿಸ್ತರಣಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸುಮಾರು 4,250 ಕೋಟಿ ರೂ.ಗಳ ವೆಚ್ಚದಲ್ಲಿನಿರ್ಮಿಸಲಾಗಿದೆ. ಅದಲ್ಲದೇ ನಮ್ಮ ಮೆಟ್ರೋ ದೆಹಲಿಯ ನಂತರ ಎರಡನೇ ಸ್ಥಾನ ಕೂಡ ಪಡೆದುಕೊಂಡಿದೆ. ದೇಶದಲ್ಲಿಅತೀ ದೊಡ್ಡಸಂಪರ್ಕ ಜಾಲ ಹೊಂದಿರುವ ಮೆಟ್ರೋ ದೆಹಲಿಯಲ್ಲಿದ್ದುಎರಡನೇ ಸ್ಥಾನವನ್ನು ಹೈದರಾಬಾದ್ ಪಡೆದುಕೊಂಡಿತ್ತು. ಮೂರನೇ ಸ್ಥಾನದಲ್ಲಿಬೆಂಗಳೂರು ಇತ್ತು. ಇದೀಗ ಕೆಆರ್ ಪುರಂನಿಂದ ವೈಟ್.ಫೀಲ್ಡ್ ತನಕ ಹೊಸ ಲೈನ್ ಬಿಡುಡೆ ಆಗುತ್ತಿದ್ದುಅದರ ಉದ್ದ 13.71 ಕಿಮೀಗಳಷ್ಟಿದೆ. ಈ ಹಿನ್ನಲೆಯಲ್ಲಿಬೆಂಗಳೂರು ಹೈದರಾಬಾದನ್ನು ಹಿಂದಿಕ್ಕಿ ಮೆಟ್ರೋ ವಿಚಾರದಲ್ಲಿ ನಂ.2 ಆಗಿ ಹೊರ ಹೊಮ್ಮಲಿದೆ. • ದೆಹಲಿ – 345 ಕಿ.ಮಿ • ನಮ್ಮ ಮೆಟ್ರೋ – 69.71ಕಿ.ಮಿ • ಹೈದರಾಬಾದ್- 69.1 ಕಿ.ಮಿ • ಚೆನ್ನೈ- 54.65 ಕಿ.ಮಿ • ಕೊಲ್ಕತ್ತಾ- 47 ಕಿ.ಮಿ.