Published on: April 16, 2023

ಮಾವು ಗ್ರೇಡಿಂಗ್ ಘಟಕ

ಮಾವು ಗ್ರೇಡಿಂಗ್ ಘಟಕ

ಸುದ್ದಿಯಲ್ಲಿ ಏಕಿದೆ? ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಾವು ಗ್ರೇಡಿಂಗ್ ಘಟಕವನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರಾರಂಭಿಸಲಾಗುತ್ತಿದೆ.

ಮುಖ್ಯಾಂಶಗಳು

  • ಸಹಕಾರ: ಮಾವು ಅಭಿವೃದ್ಧಿ ಮಂಡಳಿ ಸಹಕಾರದೊಂದಿಗೆ ಜಿಲ್ಲಾ ಮಾವು ಮತ್ತು ತೆಂಗು ರೈತ ಉತ್ಪಾದಕ ಸಂಸ್ಥೆಯು ಈ ಘಟಕ ಸ್ಥಾಪನೆ ಮಾಡುತ್ತಿದೆ.
  • ಈ ಘಟಕವು ಮಾವಿನ ಕಾಯನ್ನು ಅದರ ಗಾತ್ರ ಹಾಗೂ ಬಣ್ಣದ ಆಧಾರದ ಮೇಲೆ ವಿವಿಧ ಬಗೆಯಲ್ಲಿ ವಿಂಗಡಿಸುವ ಸಾಮರ್ಥ್ಯ ಹೊಂದಿದೆ.

ಗ್ರೇಡಿಂಗ್ ಹೇಗೆ ಮಾಡಲಾಗುತ್ತದೆ?

  • ಮಾರುಕಟ್ಟೆಗೆ ಬರುವ ಮಾವಿನ ಕಾಯಿಗಳನ್ನು ಅದರ ತೂಕದ ಆಧಾರದ ಮೇಲೆ 150 ಗ್ರಾಂ , 200 ಗ್ರಾಂ , 250 ಗ್ರಾಂ. ಹೀಗೆ ನಾಲ್ಕು ಗಾತ್ರಗಳಲ್ಲಿ ವಿಂಗಡಿಸುವ ಸಾಮರ್ಥ್ಯವನ್ನು ಈ ಘಟಕವು ಹೊಂದಿದೆ.
  • ಮಾವಿನ ಬಣ್ಣವನ್ನು ಆಧರಿಸಿ ಅದು ಎಷ್ಟು ಮಾಗಿದೆ ಎಂಬುದನ್ನೂ ಅಳೆಯಲಿದ್ದು, ಅದರ ಆಧಾರದ ಮೇಲೆಯೂ ಉತ್ಪನ್ನವನ್ನು ವರ್ಗೀಕರಿಸುವ ಸಾಮರ್ಥ್ಯ ಈ ಯಂತ್ರಗಳಿಗೆ ಇರಲಿದೆ.
  • ‘ದೇಶದ ಕೆಲವು ಕಡೆಗಳಲ್ಲಿ ಈ ವರ್ಗೀಕರಣ ತಂತ್ರಜ್ಞಾನ ಬಳಕೆಯಲ್ಲಿ ಇದೆ. ಹಣ್ಣಿನ ಗಾತ್ರದ ಆಧಾರದ ಮೇಲೆ ಹೆಚ್ಚಾಗಿ ಈ ಗ್ರೇಡಿಂಗ್ ಪ್ರಕ್ರಿಯೆ ನಡೆಯುತ್ತ ಬಂದಿದೆ. ಜೊತೆಗೆ ಹುಳುಕು, ಕಪ್ಪು ಬಣ್ಣದಿಂದ ಕೂಡಿದ ಕಾಯಿಗಳನ್ನು ಈ ಪ್ರಕ್ರಿಯೆಯಲ್ಲಿಯೇ ತೆಗೆಯಲಾಗುತ್ತದೆ. ಇದರಿಂದ ಉತ್ಪನ್ನವನ್ನು ಎ, ಬಿ, ಸಿ ದರ್ಜೆಗೆ ವಿಂಗಡಿಸಬಹುದಾಗಿದೆ’

ಪ್ರಯೋಜನಗಳು

  • ಈಚಿನ ವರ್ಷಗಳಲ್ಲಿ ಮಾವಿನ ಧಾರಣೆ ಆಗಾಗ್ಗೆ ಕುಸಿಯುತ್ತಲೇ ಇದೆ. ಬೆಳೆಗಾರರು ಕೊಯ್ಲು ಸಂದರ್ಭದಲ್ಲಿ ಅನುಸರಿಸುವ ಅವೈಜ್ಞಾನಿಕ ಕ್ರಮಗಳಿಂದಾಗಿಯೂ ಉತ್ಪನ್ನದ ಮೌಲ್ಯ ಕಡಿಮೆ ಆಗುತ್ತಿದೆ. ಐಒಎಸ್ ಆ್ಯಪ್ ಉತ್ಪನ್ನವನ್ನು ವರ್ಗೀಕರಿಸಿ ಅದರ ಗುಣಮಟ್ಟಕ್ಕೆ ತಕ್ಕಂತೆ ಮಾರಿದ್ದೇ ಆದಲ್ಲಿ ಅದರಿಂದ ರೈತರಿಗೆ ಹೆಚ್ಚಿನ ಬೆಲೆ ದೊರೆಯಲಿದೆ.
  • ರಫ್ತಿಗೂ ಅನುಕೂಲ: ರಾಮನಗರ ಜಿಲ್ಲೆಯಲ್ಲಿ ಬೆಳೆಯುವ ಒಟ್ಟು ಮಾವಿನ ಪೈಕಿ ಶೇ 70ರಷ್ಟು ಅಲ್ಫಾನ್ಸೊ ಅರ್ಥಾತ್ ಬಾದಾಮಿ ತಳಿಯದ್ದಾಗಿದೆ. ಮಾವಿನಲ್ಲಿಯೇ ಅತ್ಯಂತ ಸ್ವಾದಿಷ್ಟ ತಳಿಯಾಗಿರುವ ಈ ಹಣ್ಣು ಅನೇಕ ವಿಶೇಷತೆಗಳನ್ನೂ ಹೊಂದಿದ್ದು, ರಫ್ತು ಗುಣಮಟ್ಟದ್ದಾಗಿದೆ. ಜಾಗತಿಕವಾಗಿಯೂ ಇದಕ್ಕೆ ಬೇಡಿಕೆ ಇದೆ. ಹಣ್ಣನ್ನು ಮಾರುಕಟ್ಟೆಯಲ್ಲಿಯೇ ವಿಂಗಡಿಸಿ ಮಾರುವುದರಿಂದ ಅದಕ್ಕೆ ಉತ್ತಮ ಬೆಲೆ ಜೊತೆಗೆ ರಫ್ತಿನ ಅವಕಾಶವೂ ಹೆಚ್ಚಲಿದೆ.
  • ರಾಜ್ಯ–ಹೊರ ರಾಜ್ಯಗಳ ವರ್ತಕರನ್ನು ಆಕರ್ಷಿಸಲು ಇದರಿಂದ ಸಾಧ್ಯ ಆಗಲಿದೆ.
  • ಮಾರುಕಟ್ಟೆಯಲ್ಲಿ ಗ್ರೇಡಿಂಗ್ಗೆ ತಕ್ಕಂತೆ ಬೆಲೆ ದೊರೆತಲ್ಲಿ ರೈತರಿಗೆ ಅನುಕೂಲ ಆಗಲಿದೆ. ಮಾವು ಜೊತೆಗೆ ಸೀಬೆ, ಸಪೋಟ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು ಇದರಿಂದ ವರ್ಗೀಕರಿಸಬಹುದು. ರೈತರಿಗೆ ಅತಿ ಕಡಿಮೆ ವೆಚ್ಚದಲ್ಲಿ ಸೇವೆ ಸಿಗಲಿದೆ. ಬೈರಾಪಟ್ಟಣದಲ್ಲಿ ಮಾವು ಸಂಸ್ಕರಣಾ ಘಟಕ ತಲೆ ಎತ್ತಿದ ಬಳಿಕ ಅಲ್ಲಿಗೆ ಸ್ಥಳಾಂತರಿಸುವ ಯೋಜನೆ ಇದೆ’.

ನಿಮಗಿದು ತಿಳಿದಿರಲಿ

  • ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳಲ್ಲಿ ರಾಮನಗರಕ್ಕೆ ಎರಡನೇ ಸ್ಥಾನವಿದ್ದು, 70 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಉತ್ಪನ್ನ ಬೆಳೆಯಲಾಗುತ್ತಿದೆ. ವಾರ್ಷಿಕ ಸರಾಸರಿ 1.5 ಲಕ್ಷ ಟನ್ನಿಂದ ಹಿಡಿದು 2 ಲಕ್ಷ ಟನ್ವರೆಗೂ ಉತ್ಪನ್ನ ಸಿಗುತ್ತಿದೆ.