Published on: April 16, 2023
ಚುಟುಕು ಸಮಾಚಾರ : 15 ಏಪ್ರಿಲ್ 2023
ಚುಟುಕು ಸಮಾಚಾರ : 15 ಏಪ್ರಿಲ್ 2023
- ಕರ್ನಾಟಕ ರಾಜ್ಯದಲ್ಲೇ ಪ್ರಥಮ ಗೋಲ್ಡ್ ಕ್ಲಸ್ಟರ್ ಅನ್ನು ಹಾಸನದಲ್ಲಿ ಆರಂಭಿಸಲು ಯೋಜಿಸಲಾಗಿದೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ಗೋಲ್ಡ್ ಕ್ಲಸ್ಟರ್ ತೆರೆಯಲು ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಅನುದಾನ : ಕೇಂದ್ರ ಮತ್ತು ರಾಜ್ಯ ಸರಕಾರ ಶೇ.80 ಬಂಡವಾಳ ನೀಡಿದರೆ ಸೊಸೈಟಿ ಶೇ.20 ರಷ್ಟು ಬಂಡವಾಳ ತೊಡಗಿಸಬೇಕಾಗುತ್ತದೆ.
- ಮೊದಲ ಬಾರಿಗೆ ಮಾವು ಗ್ರೇಡಿಂಗ್ ಘಟಕವನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರಾರಂಭಿಸಲಾಗುತ್ತಿದೆ. ಸಹಕಾರ: ಮಾವು ಅಭಿವೃದ್ಧಿ ಮಂಡಳಿ ಸಹಕಾರದೊಂದಿಗೆ ಜಿಲ್ಲಾ ಮಾವು ಮತ್ತು ತೆಂಗು ರೈತ ಉತ್ಪಾದಕ ಸಂಸ್ಥೆಯು ಈ ಘಟಕ ಸ್ಥಾಪನೆ ಮಾಡುತ್ತಿದೆ. ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳಲ್ಲಿ ರಾಮನಗರಕ್ಕೆ ಎರಡನೇ ಸ್ಥಾನವಿದ್ದು, 70 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಉತ್ಪನ್ನ ಬೆಳೆಯಲಾಗುತ್ತಿದೆ.
- ಗ್ರಾಮೀಣ ಜನರಿಗೆ ಮಾನಸಿಕ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಮನ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.ದೇಶಾದ್ಯಂತ ಈ ಯೋಜನೆ ಜಾರಿಗೊಳಿಸಲು ಉದ್ದೇಶಿಸಿದ್ದು, ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕಾಗಿ ರಾಜ್ಯದ ಹಾಸನ ಜಿಲ್ಲೆಯ ಬೇಲೂರು ಮತ್ತು ಉತ್ತರಾಖಂಡದ ಫಿಧೋರಗಡ ಜಿಲ್ಲೆಯ ಮುನ್ಸಿಯಾರಿ ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ಎನ್ಜಿಒ ಆಶ್ರಯ ಹಸ್ತ ಟ್ರಸ್ಟ್ (ಎಎಚ್ಟಿ) ಸಹಯೋಗದಲ್ಲಿ ‘ನಮನ್’ ಮಾನಸಿಕ ಆರೋಗ್ಯ ಕಾರ್ಯಕ್ರಮ ರೂಪಿಸಲಾಗಿದೆ. ಈ ಸಂಬಂಧ ಒಡಂಬಡಿಕೆಗೆ ನಿಮ್ಹಾನ್ಸ್ ಮತ್ತು ಎಎಚ್ಟಿ ಸಹಿ ಹಾಕಿದವು.
- ಎರವಿಕುಲಂ ರಾಷ್ಟ್ರೀಯ ಉದ್ಯಾನವನ (ENP), ಮುನ್ನಾರ್ನಲ್ಲಿರುವ ನೀಲಗಿರಿ ತಹರ್ನ ನೈಸರ್ಗಿಕ ಆವಾಸಸ್ಥಾನವಾಗಿದೆ, ಈ ಉದ್ಯಾನವನದೊಳಗೆ ಫೆರ್ನೇರಿಯಂ ಪಾರ್ಕ್ ಅನ್ನು ಸ್ಥಾಪಿಸಲಾಗಿದೆ. ಗಿರಿಧಾಮದಲ್ಲಿ ಇಂತಹ ಜರೀಗಿಡ ಸಂಗ್ರಹವನ್ನು ಸ್ಥಾಪಿಸಿರುವುದು ಇದೇ ಮೊದಲು. ಇದನ್ನು ಆರ್ಕಿಡೇರಿಯಂ ಬಳಿ ಸ್ಥಾಪಿಸಲಾಗಿದೆ. ಉದ್ಯಾನದ ಒಳಗಿನ ಮರಗಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜರೀಗಿಡಗಳಿವೆ’.ಜರೀಗಿಡಗಳು ಆರೋಗ್ಯಕರ ಕಾಡುಗಳ ಪರಿಸರ ಸೂಚಕವಾಗಿವೆ ಮತ್ತು ಪರಿಸರ ಆರೋಗ್ಯವನ್ನು ತಿಳಿಯಲು ಸಹಾಯ ಮಾಡುತ್ತವೆ.