Published on: June 6, 2023
ಚುಟುಕು ಸಮಾಚಾರ : 5 ಜೂನ್ 2023
ಚುಟುಕು ಸಮಾಚಾರ : 5 ಜೂನ್ 2023
- ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿ ತಯಾರಿಸಲಾದ ಶುದ್ಧ ಜೇನುತುಪ್ಪವನ್ನು ನೇರವಾಗಿ ಜನರ ಕೈಸೇರುವಂತೆ ಮಾಡಲು ಅರಣ್ಯ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ.ಮಹತ್ವಾಕಾಂಕ್ಷಿ ಮನಸ್ಸಿನಯುವಕರ ಸಹಭಾಗಿತ್ವದಲ್ಲಿ ವನ್ಯಜೀವಿ ಸಂರಕ್ಷಣೆ (SWAYAM) ಎಂಬ ಪರಿಕಲ್ಪನೆಯನ್ನು ರೂಪಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈ ಮೂಲಕ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಜೀವನ ಸುಧಾರಣೆಯ ಕೆಲಸಕ್ಕೆ ಕೈ ಹಾಕಿದ್ದಾರೆ.
- ಹೊಸದಾಗಿ ಕಟ್ಟಿರುವ ಸಂಸತ್ ಭವನದಲ್ಲಿ ಕರ್ನಾಟಕದ ಸ್ಥಳಗಳಾದ ಕೊಪ್ಪಳ, ಮಸ್ಕಿ, ಹಾಗೂ ರಾಂಪುರದ ಬಳಿಯಿರುವ ಅಶೋಕ ಸಿದ್ದಾಪುರ ಗ್ರಾಮದ ಹೆಸರನ್ನು ನಮೂದಿಸಲಾಗಿದೆ. ಹೊಸದಾಗಿ ಕಟ್ಟಿರುವ ಸಂಸತ್ ಭವನದಲ್ಲಿ ಸಾಮ್ರಾಟ್ ಅಶೋಕನು ಆಳಿದ ಅಖಂಡ ಭಾರತದ ಭೌಗೋಳಿಕ ಭಾಗವನ್ನು ತೋರಿಸುವ ಭೂಪಟವನ್ನು ಅಳವಡಿಸಲಾಗಿದೆ. ಈ ಭೂಪಟದಲ್ಲಿ ಅಶೋಕನ ಶಿಲಾಶಾಸನಗಳು ದೊರೆತಿರುವ ಸ್ಥಳಗಳು ಹಾಗೂ ಕೆಲ ಪ್ರಮುಖ ಪಟ್ಟಣಗಳ ಹೆಸರನ್ನು ಬರೆಯಲಾಗಿದೆ.
- ಪ್ರತಿ ವರ್ಷ ಜೂನ್ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಪರಿಸರ ದಿನಾಚರಣೆಯ 50ನೇ ವಾರ್ಷಿಕೋತ್ಸವವೂ ಹೌದು. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. 2023ರ ಥೀಮ್: ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು’ ಆಗಿದೆ.
- ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿರುವ ಐಐಎಸ್ಸಿ ಬೆಂಗಳೂರು ಮತ್ತು ತಮಿಳುನಾಡಿನ ಐಐಟಿ ಮದ್ರಾಸ್ ಶಿಕ್ಷಣ ಸಂಸ್ಥೆಗಳು ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಎಂದು ವರದಿಯೊಂದು ಹೇಳಿದೆ. ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಫ್ರೇಮ್ವರ್ಕ್ (NIRF) ಈ ಬಗ್ಗೆ ವರದಿ ನೀಡಿದ್ದು, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಐಐಟಿ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಎಂದು ಘೋಷಿಸಿದೆ. ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ರ್ಯಾಂಕಿಂಗ್ ಪಟ್ಟಿಯಲ್ಲಿ ಐಐಎಸ್ಸಿ ತನ್ನ ಅಗ್ರ ಪಟ್ಟ ಕಾಯ್ದುಕೊಂಡಿದೆ. ನಂತರದ ಸ್ಥಾನದಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಂತರದ ಸ್ಥಾನಗಳನ್ನು ಪಡೆದಿವೆ.