Published on: June 6, 2023

ಅಗ್ನಿ 1 ಬ್ಯಾಲಿಸ್ಟಿಕ್ ಕ್ಷಿಪಣಿ

ಅಗ್ನಿ 1 ಬ್ಯಾಲಿಸ್ಟಿಕ್ ಕ್ಷಿಪಣಿ

ಸುದ್ದಿಯಲ್ಲಿ ಏಕಿದೆ? ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಗ್ನಿ-1 ಅಥವಾ ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ

ಮುಖ್ಯಾಂಶಗಳು

  • ಅಗ್ನಿ-1 ಕ್ಷಿಪಣಿಯನ್ನು ಒಡಿಶಾದ ಕರಾವಳಿಯ ಬಂಗಾಳಕೊಲ್ಲಿಯಲ್ಲಿ ಅಬ್ದುಲ್ ಕಲಾಂ ಬೆಟಾವರ್ ಮೊಬೈಲ್ ಲಾಂಚರ್‌ನಿಂದ ಉಡಾಯಿಸಲಾಗಿದೆ.

ಉದ್ದೇಶ

  • ಸಮುದ್ರ ಆಧಾರಿತ ಈ ಕ್ಷಿಪಣಿಯ ಪರೀಕ್ಷಾ ಪ್ರಯೋಗವು ಯಾವುದೇ ರೀತಿಯ ಶತ್ರುಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ತಲೆದೋರುವ ಅಪಾಯಗಳನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ. ಆ ಮೂಲಕ ಈ ಸಾಮರ್ಥ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಗೊಂಡಿದೆ.
  • ಇದೊಂದು ಸುಲಭವಾಗಿ ಒಯ್ಯಬಲ್ಲ ಕ್ಷಿಪಣಿಯಾಗಿದ್ದು, ಇದು ಅತ್ಯಂತ ಚಲನಶೀಲ ಕ್ಷಿಪಣಿ ಎನಿಸುತ್ತದೆ. ಆದ್ದರಿಂದ ಶತ್ರುಗಳಿಗೆ ಇದನ್ನು ಗುರಿಯಾಗಿಸಿ ದಾಳಿ ನಡೆಸುವುದು ಶತ್ರುಗಳಿಗೂ ಕಷ್ಟಕರವಾಗುತ್ತದೆ.

ಹಿನ್ನೆಲೆ

  • 1980ರ ದಶಕದ ಪೂರ್ವಭಾಗದಲ್ಲಿ, ಇಂಟಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್‌ಮೆಂಟ್ ಪ್ರೋಗ್ರಾಮ್ (ಐಜಿಎಂಡಿಪಿ) ಯೋಜನೆಯನ್ನು ಡಾ. ಕಲಾಂ ಅವರ ನೇತೃತ್ವದಲ್ಲಿ ಆರಂಭಿಸಲಾಯಿತು. ಭಾರತದ ಕ್ಷಿಪಣಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಕಲಾಂ ಅವರ ಪಾತ್ರ ಅತ್ಯಂತ ಮಹತ್ತರವಾಗಿದೆ. ಅಗ್ನಿ ಕ್ಷಿಪಣಿ ಸರಣಿಯೂ ಸಹ ಈ ಕಾರ್ಯಕ್ರಮದ ಭಾಗವಾಗಿದ್ದು, ಇಂದಿಗೂ ಭಾರತ ಇದರ ವಿವಿಧ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದೆ.

ಕ್ಷಿಪಣಿಯ ವೈಶಿಷ್ಟ್ಯಗಳು

  • ಅಗ್ನಿ-1 ಕ್ಷಿಪಣಿಯನ್ನು ಮೊದಲ ಬಾರಿಗೆ 2002ರಲ್ಲಿ ಪರೀಕ್ಷಾರ್ಥವಾಗಿ ಉಡಾವಣೆಗೊಳಿಸಲಾಯಿತು. ಆ ಬಳಿಕ ಅದನ್ನು 11 ಬಾರಿ ಪರೀಕ್ಷಾ ಪ್ರಯೋಗ ನಡೆಸಲಾಯಿತು.
  • ಅಗ್ನಿ-1 ಒಂದು ಏಕ ಹಂತದ, ಘನ ಇಂಧನ ಕ್ಷಿಪಣಿಯಾಗಿದೆ.
  • ಈ ಕ್ಷಿಪಣಿ 700-900 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.
  • ಅಗ್ನಿ-1 ಬಹುತೇಕ 1,000 ಕೆಜಿಯಷ್ಟು ಅಣ್ವಸ್ತ್ರ ಸಿಡಿತಲೆಯನ್ನು ಒಯ್ಯಬಲ್ಲದು. ಇದು ಭಾರತಕ್ಕೆ ಉತ್ತಮ ಅಣ್ವಸ್ತ್ರ ವಾಹಕವನ್ನು ಒದಗಿಸಿದೆ.
  • ಅಗ್ನಿ-1ರ ಇತ್ತೀಚಿನ ಅಭಿವೃದ್ಧಿಯಲ್ಲಿ ನೂತನ ಮಾರ್ಗದರ್ಶನ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದು ಹೆಚ್ಚು ನಿಖರತೆ ಹೊಂದಿದೆ, ಮತ್ತು ಹೆಚ್ಚಿನ ನಾಶದ ಸಾಮರ್ಥ್ಯದ ಸಿಡಿತಲೆಗಳನ್ನು ಒಯ್ಯಬಲ್ಲದಾಗಿದೆ.
  • ಅಗ್ನಿ-1 ಕ್ಷಿಪಣಿ ಭಾರತದ ಪರಮಾಣು ನಿರೋಧಕ ಶಕ್ತಿಯ ಪ್ರಮುಖ ಅಂಗವಾಗಿದ್ದು, ಈ ಪ್ರದೇಶದಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
  • ಈ ಕ್ಷಿಪಣಿ 15 ಮೀಟರ್ ಉದ್ದವಿದ್ದು, 12 ಟನ್ ಭಾರವಿದೆ.
  • ಇದು ರಸ್ತೆಯಲ್ಲಿ ಕೊಂಡೊಯ್ಯಬಲ್ಲ ಕ್ಷಿಪಣಿಯಾಗಿದ್ದು, ಇದನ್ನು ವಿವಿಧ ಪ್ರದೇಶಗಳಿಂದ ಉಡಾವಣೆಗೊಳಿಸಬಹುದು.
  • ಇದು ಭಾರತದ ಕ್ಷಿಪಣಿ ನಿರೋಧಕ ವ್ಯವಸ್ಥೆಯ ಭಾಗವಾಗಿದ್ದು, ಇದನ್ನು ಭಾರತೀಯ ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್ಎಫ್‌ಸಿ) ಬಳಸುತ್ತದೆ.

ನಿಮಗಿದು ತಿಳಿದಿರಲಿ

  • ಕಳೆದ ಎರಡು ದಶಕಗಳಿಂದ, ಭಾರತವು ವಿವಿಧ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳು ಮತ್ತು ಸಂಬಂಧಿತ ವೇದಿಕೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ತನ್ನ ಯುದ್ಧ ಮತ್ತು ಶಸ್ತ್ರಾಸ್ತ್ರ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ.
  • ಭಾರತವು ‘ಅಗ್ನಿ’ ಉಪಕ್ರಮದ ಅಡಿಯಲ್ಲಿ ವಿವಿಧ ರೀತಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದೆ. 2022 ಡಿಸೆಂಬರ್‌ನಲ್ಲಿ ಭಾರತವು ಅಗ್ನಿ-5 ಅಥವಾ ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿತ್ತು. ಈ ಕ್ಷಿಪಣಿಯು 5,000 ಕಿಮೀ ದೂರದ ಗುರಿಗಳನ್ನು ಮುಟ್ಟಬಲ್ಲದು. ಅಗ್ನಿ 1 ರಿಂದ 4 ಕ್ಷಿಪಣಿಗಳು 700 ಕಿಮೀ ನಿಂದ 3,500 ಕಿಮೀ ವ್ಯಾಪ್ತಿಯನ್ನು ಹೊಂದಿವೆ ಮತ್ತು ಅದೇ ಕ್ಷಿಪಣಿಗಳನ್ನು ಈಗಾಗಲೇ ಮಿಲಿಟರಿ ನಿಯೋಜಿಸಲಾಗಿದೆ.