Published on: July 30, 2023
ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರ
ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರ
ಸುದ್ದಿಯಲ್ಲಿ ಏಕಿದೆ? ದೆಹಲಿಯ ಪ್ರಗತಿ ಮೈದಾನದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂತರರಾಷ್ಟ್ರೀಯ ಪ್ರದರ್ಶನ ಹಾಗೂ ಸಮ್ಮೇಳನ ಕೇಂದ್ರ(ಐಇಸಿಸಿ)ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು
ಮುಖ್ಯಾಂಶಗಳು
- ‘ದೆಹಲಿಯು ಅತ್ಯಾಧುನಿಕ ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರವನ್ನು ಪಡೆದಿದೆ.
- 123 ಎಕರೆ ಪ್ರದೇಶದ ಪ್ರಗತಿ ಮೈದಾನದಲ್ಲಿ ನಿರ್ಮಾಣವಾಗಿರುವ ಐಇಸಿಸಿ, ಭಾರತದ ಅತಿದೊಡ್ಡ ಪ್ರದರ್ಶನ ಹಾಗೂ ಸಮ್ಮೇಳನ ಕೇಂದ್ರವಾಗಿದೆ.
- ಈ ಸಭಾಂಗಣವು ಏಕ ಕಾಲಕ್ಕೆ ಸುಮಾರು 7 ಸಾವಿರ ಮಂದಿ ಕೂರುವ ಸಾಮರ್ಥ್ಯ ಹೊಂದಿದೆ.
- ಸೆಪ್ಟೆಂ ಬರ್ನಲ್ಲಿ ನಡೆಯಲಿರುವ ಜಿ–20 ಸಮಾವೇ ಶ ಈ ಕೇಂ ದ್ರದಲ್ಲಿ ನಡೆಯಲಿದೆ.
- ವೆಚ್ಚ: ರೂ. 25,703 ಕೋಟಿ
ಉದ್ದೇಶ
- ವಿಶ್ವದ ಎಲ್ಲ ಜನರನ್ನು ಕರೆ ತರುವ ಮೂಲಕ ಇದು ಭಾರತದ ಸಮ್ಮೇಳನ ಪ್ರವಾಸೋದ್ಯಮವನ್ನು(ಕಾನ್ಫರೆನ್ಸ್ ಟೂರಿಸಮ್) ಉತ್ತೇಜಿಸುತ್ತದೆ. ಕೇಂದ್ರದ ಆರ್ಥಿಕ ಮತ್ತು ಪ್ರವಾಸೋದ್ಯಮ ಸಂಬಂಧಿತ ಯೋಜನೆಗಳು ಇದರಿಂದ ಲಾಭಹೊಂದಲಿವೆ.