Published on: August 31, 2023
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ
ಸುದ್ದಿಯಲ್ಲಿ ಏಕಿದೆ? ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)ಯನ್ನು ಸದುಪಯೋಗ ಮಾಡಿಕೊಂಡ ದೇಶದ ಒಟ್ಟು ಜನ್ ಧನ್ ಖಾತೆಗಳ ಸಂಖ್ಯೆ 50 ಕೋಟಿ ಗಡಿ ದಾಟಿದ್ದು, ಶೇ 56ರಷ್ಟು ಖಾತೆಗಳನ್ನು ಮಹಿಳೆಯರು ಹೊಂದಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಮುಖ್ಯಾಂಶಗಳು
- ಒಟ್ಟು ತೆರೆಯಲಾದ ಖಾತೆಗಳಲ್ಲಿ ಶೇ. 67ರಷ್ಟು ಖಾತೆಗಳನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ. ಈ ಖಾತೆಗಳಲ್ಲಿನ ಒಟ್ಟು ಠೇವಣಿಗಳು ರೂ. 2.03 ಲಕ್ಷ ಕೋಟಿಗಿಂತ ಹೆಚ್ಚಿದ್ದು , ಸುಮಾರು 34 ಕೋಟಿ ರೂಪಾಯಿ ಪಾಸ್ ಬುಕ್ ಖಾತೆಗಳೊಂದಿಗೆ ಉಚಿತವಾಗಿ ನೀಡಲಾಗಿದೆ.
- ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಖಾತೆಗಳಲ್ಲಿನ ಸರಾಸರಿ ಬ್ಯಾಲೆನ್ಸ್ ರೂ. 4,076 ಮತ್ತು ಇವುಗಳಲ್ಲಿ 5.5 ಕೋಟಿಗೂ ಹೆಚ್ಚು ಜನರು ನೇರ ಲಾಭ ವರ್ಗಾವಣೆಯನ್ನು (ಡಿಬಿಟಿ) ಪಡೆಯುತ್ತಿದ್ದಾರೆ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ(PMJDY)
- ಪ್ರಾರಂಭ: ಆಗಸ್ಟ್ 28, 2014 ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಬ್ಯಾಂಕ್ ಖಾತೆ ಇಲ್ಲದ ಜನರಿಗೆ ಇದು ನೆರವಾಗಿದೆ.
- ಯೋಜನೆಯು ಭಾರತೀಯ ನಾಗರಿಕರಿಗೆ ಮುಕ್ತವಾಗಿರುವ ಭಾರತ ಸರ್ಕಾರದ ಆರ್ಥಿಕ ಸೇರ್ಪಡೆ ಕಾರ್ಯಕ್ರಮವಾಗಿದೆ,
- ಇದು ಬ್ಯಾಂಕ್ ಖಾತೆಗಳು, ಹಣ ರವಾನೆಗಳು, ಕ್ರೆಡಿಟ್, ವಿಮೆ ಮತ್ತು ಪಿಂಚಣಿಗಳಂತಹ ಹಣಕಾಸು ಸೇವೆಗಳಿಗೆ ಕೈಗೆಟುಕುವ ಪ್ರವೇಶವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
- ಖಾತೆದಾರರಿಗೆ ಕನಿಷ್ಠ ಬ್ಯಾಲೆನ್ಸ್‌ನ (ಶೂನ್ಯ ಬ್ಯಾಲೆನ್ಸ್) ಅಗತ್ಯವಿಲ್ಲದೆ ಬ್ಯಾಂಕ್ ಖಾತೆಯನ್ನು ಹೊಂದುವ ಅವಕಾಶವಿದೆ.
- ರೂ. 2 ಲಕ್ಷದ ಅಂತರ್ನಿರ್ಮಿತ ಅಪಘಾತ ವಿಮೆಯೊಂದಿಗೆ ಉಚಿತ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ರೂ. 10,000 ವರೆಗಿನ ಓವರ್‌ಡ್ರಾಫ್ಟ್ ಸೌಲಭ್ಯದಂತಹ ಬಹು ಪ್ರಯೋಜನಗಳನ್ನು ಇದು ನೀಡುತ್ತದೆ.
ಕರ್ನಾಟಕದಲ್ಲಿ ಜನಧನ್ ಖಾತೆಗಳು
- ಪ್ರಧಾನ ಮಂತ್ರಿ ಜನ–ಧನ್ ಯೋಜನೆಯಡಿ ಕರ್ನಾಟಕದಲ್ಲಿ ಈವರೆಗೆ 1,74,72,330 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಈ ಪೈಕಿ 1,24,98,492 ಖಾತೆಗಳು ಸಕ್ರಿಯವಾಗಿವೆ. 76,77,573 ಮಂದಿ ಪುರುಷರು ಹಾಗೂ 97,94,757 ಮಹಿಳೆಯರು ಖಾತೆ ತೆರೆದಿದ್ದಾರೆ’. ರಾಜ್ಯದಲ್ಲಿ ಮಹಿಳೆಯರ ಜನ–ಧನ್ ಖಾತೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. 2017ರ ಮಾರ್ಚ್ ತಿಂಗಳಲ್ಲಿ ಮಹಿಳೆಯರ ಖಾತೆ 50.09 ಲಕ್ಷ ಇತ್ತು. 2023ರ ಫೆಬ್ರುವರಿಗೆ 97.95 ಲಕ್ಷಕ್ಕೆ ಹೆಚ್ಚಳ ಆಗಿದೆ.