Published on: September 24, 2023
ಹಸಿರು ಪಟಾಕಿ ನಿಷೇಧ
ಹಸಿರು ಪಟಾಕಿ ನಿಷೇಧ
ಸುದ್ದಿಯಲ್ಲಿ ಏಕಿದೆ? ಹಸಿರು ಪಟಾಕಿ ಬಳಕೆ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಬೆಂಬಲ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಬೇರಿಯಂ ಬಳಸಿ ತಯಾರಿಸುವ ಹಸಿರು ಪಟಾಕಿಗಳ ಬಳಕೆಗೆ ಕೋರಿ ಸಲ್ಲಿಸಿದ ಮನವಿಯನ್ನೂ ದೇಶದ ಅತ್ಯುನ್ನತ ಕೋರ್ಟ್ ತಿರಸ್ಕರಿಸಿದೆ.
ಮುಖ್ಯಾಂಶಗಳು
- ಈ ಹಿಂದೆ ದೆಹಲಿಯಲ್ಲಿ ಪಟಾಕಿ ತಯಾರಿಕೆ, ಸಂಗ್ರಹ, ಮಾರಾಟ ಹಾಗೂ ಸಿಡಿಸುವಿಕೆಯ ಮೇಲೆ ಸಮಗ್ರ ನಿಷೇಧ ಹೇರಿರುವ ದೆಹಲಿ ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು.
- ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 2018ರ ಸುಪ್ರೀಂ ಕೋರ್ಟ್ ಆದೇಶದ ನಂತರ ಸಾಂಪ್ರದಾಯಿಕ ಪಟಾಕಿಗಳನ್ನು ನಿಷೇಧಿಸಲಾಗಿದೆ. ಸಾಕಷ್ಟು ಸಂಶೋಧನೆಗಳನ್ನು ಮಾಡಲಾಗಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಅನುಮತಿಸಲಾಗಿದೆ.
ಏನಿದು ಹಸಿರು ಪಟಾಕಿ?
- ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುವ, ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೆಡ್ ಹೊರಚೆಲ್ಲುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಪರಿಗಣಿಸಲಾಗುತ್ತದೆ.
ಹೆಚ್ಚು ಮಾಲಿನ್ಯವಲ್ಲದ ಈ ಪಟಾಕಿ ಕೇವಲ ಶೇ30ರಷ್ಟು ಪ್ರಮಾಣದ ಹೊಗೆಯನ್ನು ಹೊರಹಾಕುತ್ತದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಪ್ರಯೋಗಾಲಯದ ಮೂಲಕ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. - ಸಾಮಾನ್ಯ ಪಟಾಕಿಗಳನ್ನು ನೈಟ್ರೇಟ್ ಮತ್ತು ಬೇರಿಯಂಗಳು ಕಂಡು ಬರುತ್ತವೆ. ಈ ರಾಸಾಯನಿಕಗಳು ಹಸಿರು ಪಟಾಕಿಗಳಲ್ಲಿ ಇರುವುದಿಲ್ಲ.
- ಈ ಹಸಿರು ಪಟಾಕಿಗಳು ಸ್ಪೋಟಿಸಿದಾಗ ನೀರಿನ ಆವಿ ಮತ್ತು ಹೊಗೆ ಹೊರ ಹಾಕುವುದನ್ನು ದುರ್ಬಲಗೊಳಿಸುತ್ತದೆ. ಇದರಲ್ಲಿ ಸುರಕ್ಷಿತ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಇರುತ್ತದೆ.