ಜ್ವಾಲಾಮುಖಿ ಸ್ಫೋಟ
ಜ್ವಾಲಾಮುಖಿ ಸ್ಫೋಟ
ಸುದ್ದಿಯಲ್ಲಿ ಏಕಿದೆ? ಇಂಡೊನೇಷ್ಯಾದ ಮೌಂಟ್ ಮೆರಪಿಯಲ್ಲಿ ಜ್ವಾಲಾಮುಖಿಗಳು ಸ್ಫೋಟಗೊಂಡ ಪರಿಣಾಮ ಅನಿಲದ ದಟ್ಟ ಹೊಗೆ ಆವರಿಸಿದೆ ಮತ್ತು ಲಾವಾ ಹೊರಸೂಸಿದೆ.
ಮೌಂಟ್ ಮೆರಾಪಿ:
- ಇಂಡೋನೇಷ್ಯಾದ 130 ಸಕ್ರಿಯ ಜ್ವಾಲಾಮುಖಿಗಳಲ್ಲಿ ಮೆರಾಪಿ (ಬೆಂಕಿಯ ಪರ್ವತ) ಅತ್ಯಂತ ಸಕ್ರಿಯವಾಗಿದೆ.
- ಇದು 2,911 ಮೀಟರ್ ಗಳಷ್ಟು ಎತ್ತರವಿದೆ
- ಇದು ಜಾವಾ ದ್ವೀಪದ ಮಧ್ಯಭಾಗ ಮತ್ತು ಇಂಡೋನೇಷ್ಯಾದ ಸಾಂಸ್ಕೃತಿಕ ರಾಜಧಾನಿ ಯೋಗ್ಯಕರ್ತಾ ಬಳಿ ಇದೆ.
- ಮೆರಾಪಿಯನ್ನು ಜಾವಾನೀಸ್ ಭಾಷೆಯಲ್ಲಿ “ಬೆಂಕಿಯ ಪರ್ವತ” ಎಂದು ಹೆಸರಿಸಲಾಗಿದೆ.
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿಗಳು:
- ಇಂಡೋನೇಷ್ಯಾ ಪೆಸಿಫಿಕ್ ರಿಂಗ್ ಆಫ್ ಫೈರ್(ಅಗ್ನಿ ವೃತ್ತ)ನಲ್ಲಿದೆ.
- ರಿಂಗ್ ಆಫ್ ಫೈರ್, ಇದನ್ನು ಸರ್ಕಮ್-ಪೆಸಿಫಿಕ್ ಬೆಲ್ಟ್ ಎಂದೂ ಕರೆಯಲಾಗುತ್ತದೆ, ಇದು ಪೆಸಿಫಿಕ್ ಮಹಾಸಾಗರದ ಉದ್ದಕ್ಕೂ ಇರುವ ಒಂದು ಮಾರ್ಗವಾಗಿದೆ, ಇದು ಸಕ್ರಿಯ ಜ್ವಾಲಾಮುಖಿಗಳು ಮತ್ತು ಆಗಾಗ್ಗೆ ಭೂಕಂಪಗಳಿಂದ ನಿರೂಪಿಸಲ್ಪಟ್ಟಿದೆ.
ಜ್ವಾಲಾಮುಖಿಗಳು
ಪರಿಚಯ
- ಭೂಮಿಯ ಆಂತರಿಕ ಆಸ್ಥಿರತೆ ಹಾಗೂ ಸಂಕೀರ್ಣತೆಗಳನ್ನು ಪ್ರತಿಬಿಂಬಿಸುವ ಲಕ್ಷಣಗಳಲ್ಲಿ ಜ್ವಾಲಾಮುಖಿಗಳು ಅತಿ ಮುಖ್ಯವಾದವು ಭೂಮಿ ಆಂತರಿಕ ವಸ್ತುಗಳು ಜ್ವಾಲಾಮುಖಿಗಳಿಂದ ಭೂ ಮೇಲ್ಮೈಗೆ ತಲುಪಿ ಇದರಿಂದ ಮೇಲ್ಮೈಯಲ್ಲಿ ವಿಶಿಷ್ಟ ಬಗೆಯ ಸ್ವರೂಪಗಳು ನಿರ್ಮಿತವಾಗುತ್ತವೆ ಇದರಿಂದಾಗಿಯೇ ಜ್ವಾಲಾಮುಖಿಗಳನ್ನು ಭೂ ಆಂತರಿಕ ವಸ್ತುಗಳು ಹೊರಬೀಡುವ ಭೂಮಿಯ ಚಿಮಣಿಗಳೆಂದು ಕರೆಯುವರು ಭೂಮಿಯ ಆಂತರಿಕ ರಚನೆಯನ್ನು ಅಧ್ಯಯನ ಮಾಡಲು ಜ್ವಾಲಾಮುಖಿಗಳು ಮುಖ್ಯ ನಿದರ್ಶನಗಳಾಗಿವೆ.
- ಭೂಮಿಯು ಅಂತರಾಳದಿಂದ ಲಾವಾರಸವು ಶಿಲಾಚೂರು, ನೀರಾವಿ, ಅನಿಲ ಮತ್ತು ಬೂದಿಗಳೊಡನೆ ದ್ವಾರದ ಮೂಲಕ ಹೊರಹೊಮ್ಮುವುದನ್ನು ಜ್ವಾಲಾಮುಖಿ ಎಂದು ಕರೆಯುತ್ತಾರೆ. ಈ ಕಾರ್ಯದಲ್ಲಿ ಭೂಗರ್ಭದಿಂದ ಘನ ದ್ರವ ಅನಿಲ ವಸ್ತುಗಳು ಆಂತರಿಕ ಒತ್ತಡದಿಂದ ಭೂ ಮೇಲ್ಮೈನ ಕಡೆಗೆ ಹೊರದೂಡಲ್ಪಡುತ್ತವೆ.
- ಜ್ವಾಲಾಮುಖಿ ಅಧ್ಯಯನವನ್ನು ಜ್ವಾಲಾಮುಖಿ ಶಾಸ್ತ್ರ ಎಂದು ಕರೆಯಲಾಗುತ್ತದೆ.
- ಲಾವಾರಸವು ಭೂ ಅಂತರಾಳದಲ್ಲಿದ್ದರೆ ಅದನ್ನು ಮ್ಯಾಗ್ಮಾ ಎಂದು ಕರೆಯಲಾಗುತ್ತದೆ ಅದು ಭೂ ಮೇಲ್ಮೈಗೆ ಬಂದಾಗ ಅದನ್ನು ಲಾವಾ ರಸ ಎಂದು ಕರೆಯಲಾಗುತ್ತದೆ
ಜ್ವಾಲಾಮುಖಿಗೆ ಕಾರಣಗಳು
ಭೂ ಅಂತರಾಳದ ಅಧಿಕ ಉಷ್ಣಾಂಶ ಮತ್ತು ಒತ್ತಡ: ಭೂ ಮೇಲ್ಮೆಯಿಂದ ಅಂತರಾಳಕ್ಕೆ ಹೋದಂತೆ ಪ್ರತಿ 32 ಮೀಟರ್ ಆಳಕ್ಕೆ 1 ಸೆಂಟಿಮೀಟರ್ ಉಷ್ಣಾಂಶವು ಹೆಚ್ಚಾಗುವುದು ಈ ಪ್ರಮಾಣದಲ್ಲಿ ಸುಮಾರು 68 ಕಿಲೋಮೀಟರ್ ಆಳದಲ್ಲಿ ಎಲ್ಲಾ ಶಿಲಾವಸ್ತುಗಳು ಅಧಿಕ ಉಷ್ಣಾಂಶದ ಪರಿಣಾಮವಾಗಿ ಕರಗಿ ದ್ರವೀಕರಿಸಲ್ಪಡುತ್ತವೆ. ಇದನ್ನು ಲಾವಾರಸ ಅಥವಾ ಶಿಲಾಪಾಕ(LAVA OR MAGMA) ಎಂದು ಕರೆಯುವರು. ಇದು ನೀರಾವಿಯನ್ನು ಸಹ ಒಳಗೊಂಡಿದ್ದು ಜಿಗುಟಾದ ದ್ರವ ರೂಪದಲ್ಲಿದ್ದು ಹೆಚ್ಚು ಒತ್ತಡದಿಂದ ಕೂಡಿರುವುದು ಲಾವಾರಸವೂ ಸುತ್ತಲಿನ ಶಿಲೆಗಳಿಗಿಂತ ಹಗುರವಾಗಿದ್ದು ಮೇಲೇರುವುದು. ಆ ಭಾಗದ ಶಿಲಾಗೋಳ ವಲಯವು ತೆಳುವಾಗುತ್ತಾ ಭದ್ರಗೊಂಡು ಅಂತಿಮವಾಗಿ ಶಿಲಾಸ್ತರವು ಭೇದಿಸಲ್ಪಟ್ಟು ಲಾವ ರಸವು ಹೊರ ಬೀಳುವುದು
ನೀರಾವಿಯ ಒತ್ತಡ: ಶಿಲಾಗೋಳದ ಅತ್ಯಂತ ಆಳದಲ್ಲಿರುವ ಅಂತರ್ಜಲವು ಅಧಿಕ ಉಷ್ಣತೆಯಿಂದ ಆವಿಯಾಗಿ ಪರಿವರ್ತನೆಗೊಂಡು ಅದು ಹೊರಬರುವುದಕ್ಕೆ ಮಾರ್ಗವಿಲ್ಲದೆ ಶೇಖರ ಗೊಳ್ಳುತ್ತದೆ ಇದರಿಂದ ಒಳ ಒತ್ತಡವು ಹೆಚ್ಚಾಗಿ ಭೂಕುಸಿತ, ಸ್ತರಭಂಗ, ಮಡಿಕೆ ಇತ್ಯಾದಿಗಳಿಂದ ಅಭದ್ರ ಶಿಲಾಸ್ತರಗಳಲ್ಲಿ ಬಿರುಕುಗಳು ಉಂಟಾಗಿ ಆವಿಯು ಹೊರ ಬರುವಾಗ ಶಿಲಾಪಾಕವು ಸಹ ಹೊರಹೊಮ್ಮುವುದು ಹೀಗೆ ಜ್ವಾಲಾಮುಖಿಗಳು ಉಂಟಾಗುತ್ತವೆ.
ಭೂ ಮೇಲ್ಮೆಯ ವಿರೂಪಣೆ
ಭೂ ಮೇಲ್ಮೆಯ ವಿರೂಪಣೆಯಲ್ಲಿ ಉಂಟಾಗುವ ಮಡಿಕೆ ಸ್ತರಭಂಗ ಮೊದಲಾದ ವಿಚಿತ್ರ ಘಟನೆಗಳಿಂದಾಗಿ ಕೆಲವು ವೇಳೆ ಜ್ವಾಲಾಮುಖಿಗಳು ಸಂಭವಿಸುತ್ತವೆ ಇವುಗಳಿಂದ ಶಿಲಾಗೋಳದಲ್ಲಿ ಆಳವಾದ ಬಿರುಕುಗಳು ಉಂಟಾಗಿ ಅವುಗಳ ಮೂಲಕ ಲಾವಾರಸವೂ ಹೊರಹೊಮ್ಮುವುದು.
ಸಾಗರ ಮೇಲ್ಮೈ ವಿಸ್ತಾರಗೊಳ್ಳುವಿಕೆ
ಎರಡೂ ವಿಭಾಗಗಳು ಪರಸ್ಪರ ದೂರ ಸರಿಯುವ ಸೀಮಾ ರೇಖೆಯ ಬಳಿ ಶಿಲಾಗೋಳ ಪದರದ ಗಾತ್ರ ಅತಿ ತೆಳುವಾಗಿರುವುದು. ಇದರಿಂದ ಇಂತಹ ಅಭದ್ರ ವಲಯಗಳಲ್ಲಿ ಲಾವಾರಸವೂ ಹೊರಹೊಮ್ಮುವುದು
ಜ್ವಾಲಾಮುಖಿ ಸ್ಫೋಟಗಳು ಸಾಮಾನ್ಯವಾಗಿ ಹೆಚ್ಚಿದ ಭೂಕಂಪನ ಚಟುವಟಿಕೆಯಿಂದ ಉಂಟಾಗುತ್ತವೆ.
ಪರಿಸರದ ಮೇಲೆ ಜ್ವಾಲಾಮುಖಿ ಸ್ಫೋಟದ ಪರಿಣಾಮ:
- ಜ್ವಾಲಾಮುಖಿ ಸ್ಫೋಟಗಳು ಭೂಮಿಯ ಮೇಲ್ಮೈಯಲ್ಲಿ ಹೊಸ ಬಂಡೆಯನ್ನು ರೂಪಿಸಲು ಕಾರಣವಾಗಿವೆ.
- ಜ್ವಾಲಾಮುಖಿ ಸ್ಫೋಟಗಳ ಸಮಯದಲ್ಲಿ ವಾತಾವರಣಕ್ಕೆ ಬಿಡುಗಡೆಗೊಂಡ ಅನಿಲಗಳು ಮತ್ತು ಧೂಳಿನ ಕಣಗಳು ಹವಾಮಾನದ ಮೇಲೆ ಪ್ರಭಾವ ಬೀರುತ್ತವೆ.
- ಭೂಮಿಯ ಇತಿಹಾಸದಲ್ಲಿ ವಿಪರೀತ ಪ್ರಮಾಣದ ಜ್ವಾಲಾಮುಖಿ ಸಂಭವಿಸಿದಾಗ, ಹಸಿರುಮನೆ ಅನಿಲಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುವಲ್ಲಿ ಜ್ವಾಲಾಮುಖಿಗಳು ಲಕ್ಷಾಂತರ ವರ್ಷಗಳಿಂದ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿವೆ.
- ಜ್ವಾಲಾಮುಖಿಗಳು ಭೂಮಿಯ ಮೇಲೆ ನಿರ್ದಿಷ್ಟ ಸ್ಥಳಗಳಲ್ಲಿ ಇದ್ದರೂ ಸಹ, ಅನಿಲಗಳು, ಧೂಳು ಮತ್ತು ಬೂದಿ ವಾತಾವರಣಕ್ಕೆ ಪ್ರವೇಶಿಸಿದಾಗ ಅವುಗಳ ಪರಿಣಾಮಗಳನ್ನು ಹೆಚ್ಚು ವ್ಯಾಪಕವಾಗಿ ವಿತರಿಸಬಹುದು.
- ಜ್ವಾಲಾಮುಖಿಯಿಂದ ಹೊರಹೊಮ್ಮುವ ಲಾವರಸ ಹಾಗೂ ಅನೇಕ ಬಗೆಯ ಶಿಲಾ ವಸ್ತುಗಳು ಅಪಾರ ಜೀವ ಹಾನಿ ಮತ್ತು ಆಸ್ತಿಪಾಸ್ತಿಗಳ ನಾಶವನ್ನುಂಟುಮಾಡುತ್ತವೆ ಇವುಗಳ ಕಾರ್ಯಾಚರಣೆಯಿಂದ ಅನೇಕ ನಗರಗಳು ಸಂಪೂರ್ಣವಾಗಿ ನಾಶಗೊಂಡಿವೆ.
- ಲಾವಾರಸವು ಹರಡುವುದರಿಂದ ವ್ಯವಸಾಯ ಕ್ಷೇತ್ರವು ಶಿಲಾಮಯವಾಗಿ ಪರಿಣಮಿಸಿ ಅನುಪಯುಕ್ತವಾಗುವುದು ನದಿ ಮಾರ್ಗಗಳು ಬದಲಾವಣೆ ಹೊಂದುತ್ತವೆ ಸಂಚಾರ ಮಾರ್ಗಗಳು ಅಸ್ತವ್ಯಸ್ತವಾಗುತ್ತವೆ ಅರಣ್ಯಗಳು ನಿರ್ಮೂಲನೆವಾಗುತ್ತವೆ.
- ಜ್ವಾಲಾಮುಖಿಗಳು ಹಾನಿಯನ್ನು ಉಂಟು ಮಾಡುವುದರ ಜೊತೆಗೆ ಭೂಮಿಯ ಅಂತರಾಳದಲ್ಲಿರುವ ವಿವಿಧ ಬಗೆಯ ಖನಿಜಗಳನ್ನು ಭೂ ಮೇಲ್ಮೈನ ಸಮೀಪಕ್ಕೆ ತರುತ್ತದೆ ಅಲ್ಲದೆ ಗಂಧಕ ಮೊದಲಾದ ರಾಸಾಯನಿಕಗಳು ಜ್ವಾಲಾಮುಖಿಗಳಿಂದ ದೊರೆಯುತ್ತವೆ.
- ಅಗ್ನಿ ಶಿಲೆಗಳು ಶೀತಲೀಕರಣ ಹೊಂದಿ ನಿರ್ಮಾಣವಾಗುವ ಮಣ್ಣು ಫಲವತ್ತಾಗಿದ್ದು ವ್ಯವಸಾಯಕ್ಕೆ ಹೆಚ್ಚು ಉಪಯುಕ್ತವಾಗಿದೆ.