Published on: September 3, 2021
ಪಿಎಫ್ ಖಾತೆ 2 ಖಾತೆಗಳಾಗಿ ವಿಭಜನೆ
ಪಿಎಫ್ ಖಾತೆ 2 ಖಾತೆಗಳಾಗಿ ವಿಭಜನೆ
ಸುದ್ಧಿಯಲ್ಲಿ ಏಕಿದೆ? ಕೇಂದ್ರ ಸರಕಾರ ಹೊಸ ಆದಾಯ ತೆರಿಗೆ ನಿಯಮಗಳನ್ನು ಘೋಷಿಸಿದ್ದು, ಇದರ ಅಡಿಯಲ್ಲಿ ಭವಿಷ್ಯ ನಿಧಿ ಖಾತೆಗಳನ್ನು ಎರಡು ಖಾತೆಗಳಾಗಿ ವಿಭಜಿಸಲಾಗುತ್ತದೆ. ವಾರ್ಷಿಕ 2.5 ಲಕ್ಷ ರೂ. ಹೆಚ್ಚು ಮೊತ್ತವನ್ನು ಪಿಎಫ್ ಖಾತೆಗೆ ಜಮೆ ಮಾಡುವ ಉದ್ಯೋಗಿಗಳು ತಮ್ಮ ಹಣದ ಮೇಲೆ ಗಳಿಸುವ ಪಿಎಫ್ ಆದಾಯದ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರಕಾರ ಈ ವ್ಯವಸ್ಥೆ ಜಾರಿಗೆ ತರುತ್ತಿದೆ.
- ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ಸಂಬಂಧ ನಿಯಮಗಳನ್ನು ಪ್ರಕಟಿಸಿದ್ದು, ಪಿಎಫ್ ಖಾತೆಯ ಒಳಗೆ ಪ್ರತ್ಯೇಕ ಖಾತೆಗಳನ್ನು ನಿರ್ವಹಣೆ ಮಾಡುವಂತೆ ಸೂಚಿಸಿದೆ.
- ಸರಕಾರಿ ಮೂಲಗಳ ಪ್ರಕಾರ ಹೊಸ ನಿಯಮಗಳು ಮುಂದಿನ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1, 2022ರಿಂದ ಜಾರಿಗೆ ಬರಲಿವೆ.
ಹೊಸ ನಿಯಮದಲ್ಲಿ ಏನಿದೆ ?
- ಹಾಲಿ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗಳು ಎರಡಾಗಿ ವಿಭಜನೆಯಾಗಲಿವೆ. ತೆರಿಗೆ ಮತ್ತು ತೆರಿಗೆಯಲ್ಲದ ಕೊಡುಗೆ ಖಾತೆಗಳು ಎನ್ನುವ ಹೆಸರಿನೊಂದಿಗೆ ಹೊಸ ಖಾತೆಗಳು ಸೃಷ್ಟಿಯಾಗಲಿವೆ. ತೆರಿಗೆ ರಹಿತ ಖಾತೆಯಲ್ಲಿ ಮಾರ್ಚ್ 31, 2021ರ ಮೊದಲು ಇದ್ದ ಮೊತ್ತವೂ ಇರುತ್ತದೆ.
- ವಾರ್ಷಿಕ 2.5 ಲಕ್ಷ ರೂ.ಗಿಂತ ಹೆಚ್ಚಿನ ಪಿಎಫ್ ಕೊಡುಗೆ ಮೇಲೆ ಪಡೆಯುವ ಆದಾಯದ ಮೇಲೆ ತೆರಿಗೆ ವಿಧಿಸಲು, ಆದಾಯ ತೆರಿಗೆ ನಿಯಮಾವಳಿಯಲ್ಲಿ ‘9ಡಿ’ಯನ್ನು ಹೊಸದಾಗಿ ಸೇರಿಸಲಾಗಿದೆ.
ಏಕೆ ಈ ಪ್ರಸ್ತಾಪ?
- ಕೆಲವು ಉದ್ಯೋಗಿಗಳು ಈ ನಿಧಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡುಗೆ ನೀಡುತ್ತಿದ್ದಾರೆ ಮತ್ತು ಬಡ್ಡಿ, ಸಂಗ್ರಹಣೆ ಮತ್ತು ಹಿಂಪಡೆಯುವಿಕೆಯಂತಹ ಎಲ್ಲಾ ಹಂತಗಳಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಬಜೆಟ್ ಪ್ರಸ್ತಾಪವು ಗಮನಿಸಿದೆ. ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳನ್ನು (HNI) ಹೊರತುಪಡಿಸಿ, ಸರ್ಕಾರ ಮಿತಿ ಮಿತಿಗಳಿಗೆ ತೆರಿಗೆ ವಿನಾಯಿತಿಯನ್ನು ಪ್ರಸ್ತಾಪಿಸಿದೆ. ಏಪ್ರಿಲ್ 1, 2021 ರಿಂದ ಆರಂಭವಾಗುವ ಎಲ್ಲಾ ಕೊಡುಗೆಗಳಿಗೆ ಇದು ಅನ್ವಯವಾಗುತ್ತದೆ.