Published on: October 16, 2021
ಭಾರತದ ‘ಮಿಸೈಲ್ ಮ್ಯಾನ್’ ಎಪಿಜೆ ಅಬ್ದುಲ್ ಕಲಾಂ
ಭಾರತದ ‘ಮಿಸೈಲ್ ಮ್ಯಾನ್’ ಎಪಿಜೆ ಅಬ್ದುಲ್ ಕಲಾಂ
ಸುದ್ಧಿಯಲ್ಲಿ ಏಕಿದೆ? ಡಾ. ಎಪಿಜೆ ಅಬ್ದುಲ್ ಕಲಾಂ ಪ್ರೇರಣಾ ಸ್ಥಾನವನ್ನು ಅಕ್ಟೋಬರ್ 15, 2021 ರಂದು ವಿಶಾಖಪಟ್ಟಣದ ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯದಲ್ಲಿ (ಎನ್ ಎಸ್ ಟಿ ಎಲ್) ಉದ್ಘಾಟಿಸಲಾಯಿತು.
NSTL ಬಗ್ಗೆ
- ಎನ್ಎಸ್ಟಿಎಲ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಡಿಯಲ್ಲಿ ಕೆಲಸ ಮಾಡುವ ಪ್ರಮುಖ ನೌಕಾ ಸಂಶೋಧನಾ ಪ್ರಯೋಗಾಲಯವಾಗಿದೆ. ಇದು ವಿಶಾಖಪಟ್ಟಣದಲ್ಲಿದೆ. ಎನ್ಎಸ್ಟಿಎಲ್ನ ಮುಖ್ಯ ಕಾರ್ಯವೆಂದರೆ ನೀರೊಳಗಿನ ಆಯುಧಗಳು ಮತ್ತು ಸಂಬಂಧಿತ ವ್ಯವಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿ. ಇದನ್ನು DRDO ನ ನೌಕಾ ಆರ್ & ಡಿ ಡೈರೆಕ್ಟರೇಟ್ ಅಡಿಯಲ್ಲಿ ಆಯೋಜಿಸಲಾಗಿದೆ. ಎನ್ ಎಸ್ ಟಿ ಎಲ್ ನ ಪ್ರಸ್ತುತ ನಿರ್ದೇಶಕ ಡಾ ವೈ ಶ್ರೀನಿವಾಸ್ ರಾವ್.
ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ
- ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ಅವರು ಅಕ್ಟೋಬರ್ 15, 1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿ ಅವರ ಜೀವನವು ಸಾಕಷ್ಟು ಕಷ್ಟ ಮತ್ತು ಹೋರಾಟಗಳಿಂದ ಕೂಡಿತ್ತು. 1998 ರಲ್ಲಿ ಪೋಖ್ರನ್-2 ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ತಾಂತ್ರಿಕವಾಗಿ, ರಾಜಕೀಯವಾಗಿ ಪ್ರಧಾನ ಪಾತ್ರವನ್ನು ಕಲಾಂ ವಹಿಸಿದ್ದರು. ರಾಷ್ಟ್ರಪತಿ ಆಗುವುದಕ್ಕೂ ಮುನ್ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ)ದಲ್ಲಿ ವೈಮಾನಿಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.
- ಮಕ್ಕಳ ನೆಚ್ಚಿನ ಮೇಷ್ಟರಾಗಿ, ಜನರ ಮಚ್ಚಿನ ರಾಷ್ಟ್ರಪತಿಯಾಗಿ, ಭಾರತದ ಪ್ರಮುಖ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಯಾಗಿ ದಿವಂಗತ ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಹಲವು ಸ್ತರಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ದೇಶದ ಬೆಳವಣಿಗೆಗೆ ಕೊಡುಗೆ ನೀಡಿದವರಾಗಿದ್ದಾರೆ. ಬಾಹ್ಯಾಕಾಶ ವಿಜ್ಞಾನಿಯಾಗಿ ಅಬ್ದುಲ್ ಕಲಾಂ ಭಾರತದ ಎರಡು ಪ್ರಮುಖ ಅಂತರಿಕ್ಷ ಸಂಶೋಧನಾ ಸಂಸ್ಥೆಗಳಾದ ಡಿಆರ್ ಡಿಒ ಮತ್ತು ಇಸ್ರೊದಲ್ಲಿ ಕೆಲಸ ಮಾಡಿದ್ದರು. ಸ್ವದೇಶಿ ನಿರ್ಮಿತ ಕ್ಷಿಪಣಿ ಅಗ್ನಿ ಮತ್ತು ಪೃಥ್ವಿಗಳ ಅಭಿವೃದ್ಧಿ ಮತ್ತು ಕಾರ್ಯನಿರ್ವಹಣೆಯಿಂದ ಭಾರತದ ಕ್ಷಿಪಣಿ ಮನುಷ್ಯ ಎಂಬ ಬಿರುದು ಪಡೆದಿದ್ದು ಮಾತ್ರವಲ್ಲದೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಲವು ವಿಷಯಗಳಲ್ಲಿ ಕಲಾಂ ಕೊಡುಗೆ ನೀಡಿದ್ದಾರೆ.