Published on: November 11, 2021

‘ರಾಷ್ಟ್ರೀಯ ಶಿಕ್ಷಣ ದಿನ’ ಆಚರಣೆ

‘ರಾಷ್ಟ್ರೀಯ ಶಿಕ್ಷಣ ದಿನ’ ಆಚರಣೆ

ಸುದ್ಧಿಯಲ್ಲಿ ಏಕಿದೆ ? ಪ್ರತಿ ವರ್ಷ ನವೆಂಬರ್ 11 ರಂದು ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ದಿನ’ವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಶೈಕ್ಷಣಿಕ ದಾರ್ಶನಿಕರಾದ ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರನ್ನು ಭಾರತೀಯರೆಲ್ಲರೂ ನೆನೆಯುವ ದಿನ. ಅವರ ಜನ್ಮದಿನ ಸಹ ಹೌದು.

  • ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವರು. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಮೌಲಾನಾ ಅಜಾದ್ ರವರು 1947 ರ ಆಗಸ್ಟ್‌ 15 ರಿಂದ 1958 ರ ಫೆಬ್ರುವರಿ 2 ರವರೆಗೆ ಸೇವೆ ಸಲ್ಲಿಸಿದ್ದರು.
  • ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು ಈ ದೇಶದ ಒಬ್ಬ ವಿದ್ವಾಂಸರಾಗಿಯೂ ಮತ್ತು ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರಾಗಿಯೂ ಸಕ್ರಿಯರಾಗಿದ್ದರು. ಭಾರತದ ಪ್ರಪ್ರಥಮ ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೆ ತಂದಿದ್ದರು. ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕೊಡುಗೆ ನೀಡಿದ್ದರು.
  • 1922 ರಲ್ಲಿ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ ನೀಡಿ ಅಜಾದ್‌ರನ್ನು ಗೌರವಿಸಲಾಯಿತು. ಭಾರತದಲ್ಲಿ ಐಐಟಿಗಳ ಸ್ಥಾಪನೆ ಮತ್ತು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗಗಳ ಅಡಿಪಾಯಕ್ಕೂ ಇವರ ಕೊಡುಗೆ ಪ್ರಶಂಸನೀಯವಾದದ್ದು.
  • ನವೆಂಬರ್ 11, 1888 ರಲ್ಲಿ ಮೌಲಾನಾ ಅಬ್ದುಲ್‌ ಕಲಾಂ ಅಜಾದ್ ರವರು ಜನಿಸಿದರು. ಉರ್ದು ವಿದ್ವಾಂಸರಾದ ಅವರು, ತಮ್ಮ ಬರಹಗಳಿಗೆ ‘ಅಜಾದ್ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಆದ್ದರಿಂದ ಅವರು ಮೌಲಾನಾ ಅಜಾದ್ ಎಂದೇ ಪ್ರಸಿದ್ದಿಯಾದರು.

‘ರಾಷ್ಟ್ರೀಯ ಶಿಕ್ಷಣ ದಿನ’

  • 2008 ರ ಸೆಪ್ಟೆಂಬರ್ 11 ರಂದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಅಜಾದ್‌ ರವರ ಜನ್ಮ ದಿನ ನವೆಂಬರ್ 11 ನೇ ದಿನಾಂಕವನ್ನು ‘ರಾಷ್ಟ್ರೀಯ ಶಿಕ್ಷಣ ದಿನ’ವಾಗಿ ಆಚರಣೆ ಮಾಡಲು ನಿರ್ಧರಿಸಿತು. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಅದಕ್ಕೆ ಕಾರಣವಾಗಿದೆ. ಅಂದಿನಿಂದ ಅಜಾದ್ ರವರು ಶಿಕ್ಷಣ ಕ್ಷೇತ್ರಕ್ಕಾಗಿ ನೀಡಿದ ಪ್ರಮುಖ ಕೊಡಗೆಗಾಗಿ, ಭಾರತೀಯರೆಲ್ಲರೂ ಅವರಿಗೆ ಗೌರವ ಸಲ್ಲಿಸಲು, ಅವರ ಸವಿನೆನಪಿಗಾಗಿ ‘ರಾಷ್ಟ್ರೀಯ ಶಿಕ್ಷಣ ದಿನ’ ಆಚರಿಸಲಾಗುತ್ತದೆ.

ಮೌಲಾನಾ ಅಜಾದ್‌ ರವರು ನೀಡಿದ ಕೆಲವು ಉಲ್ಲೇಖಗಳು

  • “ಶಿಕ್ಷಣ ತಜ್ಞರು ವಿದ್ಯಾರ್ಥಿಗಳಲ್ಲಿ ವಿಚಾರಣೆಯ ಮನೋಭಾವ ಬೆಳೆಸುವುದು, ಸೃಜನಶೀಲನೆ ಸಾಮರ್ಥ್ಯ ಹೆಚ್ಚಿಸುವುದು, ಉದ್ಯಮಶೀಲತೆ, ನೈತಿಕ ನಾಯಕತ್ವ ಗುಣಗಳನ್ನು ಬೆಳೆಸುವುದರ ಮೂಲಕ ಅವರ ಅದರ್ಶ ವ್ಯಕ್ತಿಗಳಾಗಬೇಕು”. ಇದು ಉತ್ತಮ ಶಿಕ್ಷಣಕ್ಕೆ ನೀಡುವ ಕೊಡುಗೆ ಎಂದಿದ್ದಾರೆ ಮೌಲಾನಾ ಅಜಾದ್‌ರವರು.
  • ” ನಾಲಿಗೆಯಿಂದ ಬೋಧಿಸುವುದರಿಂದ ಬೆದರಿಸಬಹುದು. ಆದರೆ ಒಳ್ಳೆಯ ಕಾರ್ಯದಿಂದ ಬಲವಾಗಿ ಉಳಿಯಬಹುದು”.
  • “ಬಹುಸಂಖ್ಯಾತರು ಸಸಿಗಳನ್ನು ನೆಡುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಅದರ ಫಲವನ್ನು ಪಡೆಯುತ್ತಾರೆ”.
  • ‘ಶಿಕ್ಷಣ ಎಂದರೆ ಕೇವಲ ಓದುವುದು ಅಲ್ಲ. ಇತರರಿಂದ ಕಲಿಯುವುದು ಮತ್ತು ಇತರರಿಗೂ ಕಲಿಸುವುದು’ ಎಂಬುದನ್ನು ಹೇಳಿಕೊಟ್ಟವರು ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು.