Published on: December 21, 2021
ಕೊಲ್ಕತ್ತಾ ದುರ್ಗಾ ಪೂಜೆ
ಕೊಲ್ಕತ್ತಾ ದುರ್ಗಾ ಪೂಜೆ
ಸುದ್ಧಿಯಲ್ಲಿ ಏಕಿದೆ? ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾದಲ್ಲಿನಡೆಯುವ ‘ದುರ್ಗಾ ಪೂಜೆ’ಗೆ ವಿಶ್ವಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ)ಯು ಪಾರಂಪರಿಕ ಸ್ಥಾನಮಾನ ನೀಡಿದೆ.
- ಇದರೊಂದಿಗೆ ಭಾರತದ 14 ವಿಶೇಷ ಆಚರಣೆಗಳಿಗೆ ಯುನೆಸ್ಕೋದ ಅಮೂರ್ತ ಪರಂಪರೆಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಂತಾಗಿದೆ.
- ಕೊಲ್ಕೊತಾದಲ್ಲಿ ನಡೆಯುವ ದುರ್ಗಾ ಪೂಜೆಯನ್ನು ಅಮೂರ್ತ ಪರಂಪರೆ ಪಟ್ಟಿಯಲ್ಲಿಸೇರಿಸಲಾಗಿದೆ.
- ಈ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಯ ಮೂಲಕ, ವಿಶ್ವದ ಪುರಾತನ ಹಾಗೂ ವಿಶಿಷ್ಠ ಸಾಂಸ್ಕೃತಿಕ ಆಚರಣೆಗಳನ್ನು ಗುರುತಿಸಿ ಅವನ್ನು ರಕ್ಷಿಸುವ, ಪ್ರೋತ್ಸಾಹಿಸುವ ಕೆಲಸವನ್ನು ಯುನೆಸ್ಕೋ (UNESCO) ಮಾಡುತ್ತಿದೆ. ಡಿಸೆಂಬರ್ 13ರಿಂದ ನಡೆಯುತ್ತಿರುವ ಯುನೆಸ್ಕೋದ ಅಂತರ್ ಸರ್ಕಾರಿ ಸಮಿತಿಯ 16ನೇ ವಾರ್ಷಿಕ ಸಮ್ಮೇಳನದಲ್ಲಿ ದುರ್ಗಾ ಪೂಜೆಯನ್ನು ಪಾರಂಪರಿಕ ಪಟ್ಟಿಗೆ ಸೇರಿಸುವ ನಿರ್ಧರಿಸಲಾಗಿದೆ.