Published on: November 12, 2022

ಅಮೂರ್ ಫಾಲ್ಕನ್ ಪಕ್ಷಿ

ಅಮೂರ್ ಫಾಲ್ಕನ್ ಪಕ್ಷಿ

uk Seroquel cheap ಸುದ್ದಿಯಲ್ಲಿ ಏಕಿದೆ?

how to buy Latuda online ‘ಅಮೂರ್ ಫಾಲ್ಕನ್’ ಎಂದು ಕರೆಯಲ್ಪಡುವ ಈ ಪಕ್ಷಿಯು ಕಾರವಾರದ ಗ್ರಾಮೀಣ ಭಾಗದಲ್ಲಿ ಕಂಡುಬಂದಿದೆ.

  • ತೂಕ: 100ರಿಂದ 150 ಗ್ರಾಂ
  • ಜಾತಿ: ಎಫ್. ಅಮ್ಯೂರೆನ್ಸಿಸ್ (ಗಿಡುಗನ ಜಾತಿಗೆ ಸೇರಿದ ಬೇಟೆಗಾರ ಪಕ್ಷಿ)
  • ಕುಟುಂಬ: ಫಾಲ್ಕೊನಿಡೇ
  • ಹಾರುವ ಸಾಮರ್ಥ್ಯ: ಅತಿಯಾದ ಚಳಿಯಿಂದ ತಪ್ಪಿಸಿಕೊಳ್ಳಲು 22 ಸಾವಿರ ಕಿಲೋಮಿಟರ್ ದೂರವನ್ನು ಪ್ರತಿವರ್ಷ ಕ್ರಮಿಸುತ್ತದೆ.
  • ಆವಾಸಸ್ಥಾನ: ಭಾರತದ ಪೂರ್ವ ಭಾಗದಲ್ಲಿರುವ ಮಂಗೋಲಿಯಾ, ಚೀನಾ ಮತ್ತು ರಷ್ಯಾ ದೇಶದ ಹುಲ್ಲುಗಾವಲುಗಳು
  • ವಲಸೆ :ಅಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ಮಹಾ ವಲಸೆಗೆ ತಂಡದ ಸಮೇತ ಸಿದ್ಧವಾಗುತ್ತದೆ. ಆಫ್ರಿಕಾ ಖಂಡದ ವಿವಿಧ ದೇಶಗಳಿಗೆ ಹಾರಿ ಹೋಗಿ ಒಂದಷ್ಟು ದಿನ ಕಳೆದು, ಚಳಿಗಾಲ ಮುಗಿದ ಬಳಿಕ ಪುನಃ ತಮ್ಮ ವಾಸ ಸ್ಥಳಗಳಿಗೆ ಮರಳುತ್ತವೆ. ಹಾಗೆ ಅವು ಸಾಗುತ್ತ ಭಾರತದ ಮೂಲಕ ಹಾದುಹೋಗುತ್ತವೆ. ನಾಗಾಲ್ಯಾಂಡ್‌ನಲ್ಲಿ ಒಂದಷ್ಟು ದಿನ ವಿಶ್ರಾಂತಿ ಪಡೆದು ದಕ್ಷಿಣದತ್ತ ಪ್ರಯಾಣಿಸುತ್ತವೆ. ಈಚಿನ ವರ್ಷಗಳಲ್ಲಿ ಕಾರವಾರದ ಸುತ್ತಮುತ್ತ ಕೂಡ ಕಾಣಿಸಿಕೊಳ್ಳುವುದನ್ನು ಪಕ್ಷಿ ವೀಕ್ಷಕರು ಗುರುತಿಸಿದ್ದಾರೆ.

ನಿಮಗಿದು ತಿಳಿದಿರಲಿ

  • ಐದೂವರೆ ದಿನದಲ್ಲಿ ಹಾರಾಟ :‘ರೇಡಿಯೊ ಟ್ಯಾಗ್ ಅಳವಡಿಸಿದ್ದ ‘ಅಮುರ್ ಫಾಲ್ಕನ್’ ಹಕ್ಕಿಯೊಂದು ನಾಗಾಲ್ಯಾಂಡ್‌ನಿಂದ ಆಫ್ರಿಕಾ ಖಂಡದ ಸೋಮಾಲಿಯಾ ದೇಶಕ್ಕೆ ನಿರಂತರವಾಗಿ ಹಾರಾಟ ನಡೆಸಿದೆ. ಸುಮಾರು 5,600 ಕಿ.ಮೀ ಅಂತರವನ್ನು ಕೇವಲ ಐದೂವರೆ ದಿನಗಳಲ್ಲಿ ತಲುಪಿದ್ದು ದಾಖಲಾಗಿತ್ತು’