Published on: January 12, 2023

‘ಅರ್ತ್‌ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್’ (ಇಆರ್ಬಿಎಸ್)

‘ಅರ್ತ್‌ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್’ (ಇಆರ್ಬಿಎಸ್)


unweariedly ಸುದ್ದಿಯಲ್ಲಿ ಏಕಿದೆ?  ಭೂಮಿಯ ಸುತ್ತ 38 ವರ್ಷಗಳ ಕಾಲ ಸುತ್ತು ಹಾಕಿದ್ದ, ನಿಷ್ಕ್ರಿಯ ಉಪಗ್ರಹವು ನಿರೀಕ್ಷೆಯಂತೇ ಭೂಮಿಗೆ ಬಿದ್ದಿದೆ ಎಂದು ನಾಸಾ ತಿಳಿಸಿದೆ.


http://marionjensen.com/2014/12/a-few-more-things.html ಮುಖ್ಯಾಂಶಗಳು

  • ಉಪಗ್ರಹವು ಅಲಾಸ್ಕಾದಿಂದ ಕೆಲವು ನೂರು ಮೈಲುಗಳಷ್ಟು ದೂರದ ಬೇರಿಂಗ್ ಸಮುದ್ರಕ್ಕೆ ಬಿದ್ದಿದೆ ಎಂದು ರಕ್ಷಣಾ ಇಲಾಖೆ ದೃಢಪಡಿಸಿತು.
  • ಅದರ ಅವಶೇಷಗಳಿಂದ ಯಾರಿಗೂ ಹಾನಿಯಾಗಿಲ್ಲ.

ಉಪಗ್ರಹದ ಮಾಹಿತಿ :

  • 1984ರಲ್ಲಿ ಈ ಉಪಗ್ರವನ್ನು ವಿಶೇಷವಾಗಿ ಕಕ್ಷೆಗೆ ಸೇರಿಸಲಾಗಿತ್ತು.
  • ತೂಕ: 2,450 ಕಿಲೋ ಗ್ರಾಂ
  • ಇಆರ್ಬಿಎಸ್ ಎಂದು ಕರೆಯಲಾಗುವ ‘ಅರ್ತ್‌ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್’ ಅನ್ನು 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್ ಮೂಲಕ ನಭಕ್ಕೆ ಹಾರಿಸಲಾಗಿತ್ತು.
  • ಅದರ ನಿರೀಕ್ಷಿತ ಜೀವಿತಾವಧಿಯು ಎರಡು ವರ್ಷಗಳಷ್ಟೇ ಆಗಿದ್ದವು.
  • ಆದರೆ, 2005ರಲ್ಲಿ ನಿಷ್ಕ್ರಿಯವಾದ ಉಪಗ್ರಹ, ಅಲ್ಲಿಯ ವರೆಗೂ ಓಝೋನ್ ಮತ್ತು ವಾತಾವರಣದ ಇತರ ಮಾಪನಗಳನ್ನು ಮಾಡುತ್ತಲೇ ಇತ್ತು.
  • ಭೂಮಿಯು ಸೂರ್ಯನಿಂದ ಹೀರಿಕೊಳ್ಳುವ ಶಕ್ತಿ ಮತ್ತು ಹೊರಸೂಸುವ ಶಕ್ತಿಯನ್ನು ಅಧ್ಯಯನ ಮಾಡುವ ಉಪಗ್ರಹವನ್ನು ‘ಅರ್ತ್‌ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್’ ಎನ್ನಲಾಗುತ್ತದೆ. ಅದನ್ನೇ ಈ ಉಪಗ್ರಹವೂ ಮಾಡಿತ್ತು.
  • ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸ್ಯಾಲಿ ರೈಡ್ ಅವರು ಚಾಲೆಂಜರ್ ನೌಕೆಯ ‘ರೋಬೋಟ್ ಆರ್ಮ್’ ಎಂಬ ಸಾಧನ ಬಳಸಿ ಇಆರ್ಬಿಎಸ್ ಅನ್ನು ಕಕ್ಷೆಗೆ ಬಿಡುಗಡೆ ಮಾಡಿದ್ದರು.
  • ಅದೇ ಕಾರ್ಯಾಚರಣೆಯಲ್ಲಿ ಅಮೆರಿಕದ ಮಹಿಳಾ ಗಗನಯಾನಿ ಕ್ಯಾಥರಿನ್ ಸುಲ್ಲಿವನ್ ಅವರು ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡಿದ್ದರು. ಇಬ್ಬರು ಮಹಿಳಾ ಗಗನಯಾತ್ರಿಗಳು ಒಟ್ಟಿಗೆ ಬಾಹ್ಯಾಕಾಶಕ್ಕೆ ಹಾರಿದ್ದು ಅದೇ ಮೊದಲ ಬಾರಿಯೂ ಆಗಿತ್ತು.