Published on: January 12, 2023

ಚುಟುಕು ಸಮಾಚಾರ – 12 ಜನವರಿ 2023

ಚುಟುಕು ಸಮಾಚಾರ – 12 ಜನವರಿ 2023

  • ಹುಬ್ಬಳ್ಳಿ ಧಾರವಾಡದಲ್ಲಿ ಜನವರಿ 12 ರಿಂದ 16ರ ತನಕ ನಡೆಯಲಿರುವ 26 ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ವಿಷಯ (ಥೀಮ್’): ವಿಕಸಿತ್ ಯುವ-ವಿಕಸಿತ್ ಭಾರತ್.’ ಉದ್ದೇಶ: ಯುವ ಜನೋತ್ಸವ ಕಾರ್ಯಕ್ರಮವು ದೇಶದ ಯುವಜನಾಂಗವನ್ನು ಪ್ರೇ ರೇಪಿಸುವುದು ಮತ್ತು ರಾಷ್ಟ್ರ ನಿರ್ಮಾಣದ ಕಡೆಗೆ ಯುವಕರನ್ನು ಏಕೀಕರಿಸವುದು ಮುಖ್ಯ ಉದ್ದೇ ಶವಾಗಿದೆ. 2012ರಲ್ಲಿ ಮಂಗಳೂರು ಹಾಗೂ ಇದೀಗ 2023ರಲ್ಲಿ ಧಾರವಾಡ ಆಯ್ಕೆ ಮೂಲಕ ರಾಜ್ಯ ಎರಡನೇ ಬಾರಿಗೆ ಯುವಜನೋತ್ಸವ ಆಯೋಜಿಸುತ್ತಿದೆ.
  • ಕನ್ನಡದ ಹೆಸರಾಂತ ಸಾಹಿತಿ ಸಾರಾ ಅಬೂಬಕ್ಕರ್ (87) ವಯೋಸಹಜ ಕಾರಣಗಳಿಂದ ನಿಧನ ಹೊಂದಿದ್ದಾರೆ. ಇವರು ಕಾಸರಗೋಡಿನ ಚಂದ್ರಗಿರಿ ತೀರದ ‘ಪುದಿಯಾ ಪುರ್ (ಹೊಸಮನೆ) ತರವಾಡು ಮನೆಯಲ್ಲಿ 1936ರಲ್ಲಿ ಜನಿಸಿದ್ದರು. 1984ರಲ್ಲಿ ರಚಿಸಿದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಮೂಲಕ ಖ್ಯಾತರಾಗಿದ್ದರು. ಅವರ ಆತ್ಮಕತೆ: ‘ಹೊತ್ತು ಕಂತುವ ಮುನ್ನ’
  • ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರಿಗೆ (ಎಸ್ಸಿ, ಎಸ್ಟಿ, ಭಾಗ್ಯಜ್ಯೋ ತಿ/ ಕುಟೀರ ಜ್ಯೋ ತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್ವರೆಗೆ ಉಚಿತ ವಿದ್ಯುತ್ ಒದಗಿಸುವ ಅಮೃತ ಜ್ಯೋತಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.
  • ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿಯ ಪ್ರಕಾರ, 2022ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯು ದೇಶದಲ್ಲಿಯೇ ಅತ್ಯಂತ ಕಲುಷಿತ ನಗರವಾಗಿದೆ. ಹರಿಯಾಣದ ಫರಿದಾಬಾದ್(ಘನ ಮೀಟರ್ಗೆ 95.64 ಮೈಕ್ರೋಗ್ರಾಂ) ಎರಡನೇ ಸ್ಥಾನ ಮತ್ತು ಉತ್ತರ ಪ್ರದೇಶದ ಗಾಜಿಯಾಬಾದ್ (ಘನ ಮೀಟರ್ಗೆ 91.25 ಮೈಕ್ರೋಗ್ರಾಂ) ಮೂರನೇ ಸ್ಥಾನದಲ್ಲಿದೆ.
  • ಬ್ರಿಟನ್ ರಾಜಕುಮಾರ ಪ್ರಿನ್ಸ್ ಹ್ಯಾರಿ ಅವರ ಆತ್ಮಕತೆ ‘ಸ್ಪೇರ್‘ ಯುಕೆಯಾದ್ಯಂತ ಬಿಡುಗಡೆಯಾಗಿದೆ. ಈ ಪುಸ್ತಕದ 16 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಆಡಿಯೋ ಬುಕ್ ಕೂಡ ಲಭ್ಯವಿದೆ.
  • ಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್ ನಿಂದ ಹೊರಬಂದು ಇದೀಗ ಸೌದಿ ಅರೇಬಿಯಾ ಮೂಲದ ಅಲ್ ನಾಸ್ರ್ ಕ್ಲಬ್ ಸೇರಿಕೊಂಡಿದ್ದಾರೆ. ರೊನಾಲ್ಡೊ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಏಷ್ಯನ್ ಕ್ಲಬ್‌ನೊಂದಿಗೆ ಟೈ ಅಪ್ ಆಗಿದ್ದಾರೆ.

ರೊನಾಲ್ಡೋ ಕ್ಲಬ್ ಇತಿಹಾಸ

ತಮ್ಮ ವೃತ್ತಿಜೀವನವನ್ನು ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್​ನೊಂದಿಗೆ ಆರಂಭಿಸಿದ ರೊನಾಲ್ಡೊ, ಇದರ ನಂತರ ಸ್ಪೇನ್‌ನ ಲೆಜೆಂಡರಿ ಕ್ಲಬ್ ರಿಯಲ್ ಮ್ಯಾಡ್ರಿಡ್‌ ಪರ ಕಣಕ್ಕಿಳಿದಿದ್ದರು. 2009 ರಿಂದ 2018 ರವರೆಗೆ ಈ ಕ್ಲಬ್‌ ಪರ ಆಡಿದ್ದ ರೊನಾಲ್ಡೊ, ಬಳಿಕ ಇಟಲಿಯ ಕ್ಲಬ್ ಜುವೆಂಟಸ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದರು. 2021 ರವರೆಗೆ ಈ ಕ್ಲಬ್ ಪರ ಆಡಿದ್ದ ರೊನಾಲ್ಡೊ ಬಳಿಕ ಮ್ಯಾಂಚೆಸ್ಟರ್‌ಗೆ ಹಿಂತಿರುಗಿದ್ದರು.