Published on: December 3, 2022

‘ಆಫ್ರಿಕನ್ ವಿಲೇಜ್’ ಮತದಾರರು

‘ಆಫ್ರಿಕನ್ ವಿಲೇಜ್’ ಮತದಾರರು

http://blumberger.net/index.php ಸುದ್ದಿಯಲ್ಲಿ ಏಕಿದೆ?

can i buy provigil in canada ಇದೇ ಮೊದಲ ಬಾರಿಗೆ ಗುಜರಾತ್‌ನ ಆಫ್ರಿಕನ್ ವಿಲೇಜ್ (ಆಫ್ರಿಕನ್ ಗ್ರಾಮ) ಎಂದು ಹೆಸರಾದ ಬುಡಕಟ್ಟು ಹಳ್ಳಿಯ ಜನರಿಗೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸೌರಾಷ್ಟ್ರ, ಕಛ್, ದಕ್ಷಿಣ ಭಾಗ ಒಳಗೊಂಡ ಮತದಾನದ ಹಕ್ಕನ್ನು ನೀಡಲಾಗಿದೆ.

ಮುಖ್ಯಾಂಶಗಳು

  • ಗುಜರಾತ್‌ನ ಜುನಾಗಡ್ ಜಿಲ್ಲೆಯ ಜಾಂಬೂರ್ ಎಂಬ ಹಳ್ಳಿ ಗುಜರಾತ್‌ನ ಆಫ್ರಿಕನ್ ವಿಲೇಜ್ ಎಂದು ಖ್ಯಾತಿಯಾಗಿದೆ.
  • ಇಲ್ಲಿ ಕರ್ನಾಟಕದ ಸಿದ್ಧಿ ಜನಾಂಗವನ್ನು ಹೋಲುವಂತಹಆಫ್ರಿಕನ್ ಮೂಲದ ಬುಡಕಟ್ಟು ಸಮುದಾಯವಿದ್ದು, ಅವರಿಗೆ ಗುಜರಾತ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ನೀಡಲಾಗಿದೆ.
  • ಏಳನೇ ಶತಮಾನದಲ್ಲಿ ಅರಬ್ ಮಾರ್ಗವಾಗಿ ಗುಜರಾತ್‌ಗೆ ಈ ಜನಾಂಗದವರು ಬಂದು ನೆಲೆಸಿದ್ದಾರೆ. ತಮ್ಮ ಸಮುದಾಯದಲ್ಲಿ ಮಾತ್ರ ವಿವಾಹವಾಗುವ ಇವರು, ಗುಜರಾತಿ ಭಾಷೆ, ಸಂಸ್ಕೃತಿಯಲ್ಲಿ ಬೆರೆತಿದ್ದಾರೆ.

ಸಿದ್ಧಿ ಜನಾಂಗ

  • ಸಿದ್ದಿ, ಸಿದ್ಧಿ, ಸಿದಿ, ಶೀದಿ, ಹಬ್ಶಿ, ಸವಾಹಿಲಿ ಎಂದು ಮುಂತಾದ ಹೆಸರುಗಳಿಂದ ಗುರ್ತಿಸಲ್ಪಡುವ ಇವರು ಮೂಲತಃ ಪೂರ್ವ ಮತ್ತು ಆಗ್ನೇಯ ಆಫ್ರಿಕಾದ ಬಂಟುಸಮುದಾಯಕ್ಕೆ ಸೇರಿದವರು.
  • ಸಿದ್ದಿಗಳು ಭಾರತದ ಗುಜರಾತ್, ಆಂದ್ರಪ್ರದೇಶ ಮತ್ತು ಕರ್ನಾಟಕದಕೆಲವು ಭಾಗಗಳಲ್ಲಿ ನೆಲೆಸಿರುವುದಂತೂ ಸತ್ಯ. ಅವರಲ್ಲಿ ಬಹಳಷ್ಟು ಜನ ಭಾರತದ ಸ್ವಾತಂತ್ರ್ಯಾ ನಂತರ ಪಾಕಿಸ್ತಾನಕ್ಕೆ ವಲಸೆ ಹೋದರು.
  • ಇಸ್ಲಾಂ ಧರ್ಮದ ಅನುಯಾಯಿಗಳಾದ ಇವರು ಮಹಮದ್ ಬಿನ್ ಕಾಸಿಮ್ನ ಅರಬ್ ಸೇನಾಪಡೆಯಲ್ಲಿ ಸೈನಿಕರಾಗಿ ಕೂಡಾ ಕೆಲಸ ನಿರ್ವಹಿಸಿದ ಮಾಹಿತಿ ಸಿಗುತ್ತದೆ. ಅಲ್ಲಿ ಅವರನ್ನ ಝಾಂಜಿಸ್ ಎಂದು ಕರೆಯಲಾಗುತ್ತಿತ್ತು.
  • ಹದಿನಾರು ಮತ್ತು ಹದಿನೇಳನೇ ಶತಮಾನದಲ್ಲಿ ಫೋರ್ಚುಗೀಸರು ಇವರನ್ನ ಗೋವಾಕ್ಕೆ ಪೂರ್ವ ಆಫ್ರಿಕಾದಿಂದ ಕದ್ದು ತಂದರು ಎನ್ನಲಾಗುತ್ತದೆ. ಗೋವಾದಲ್ಲಿ ಅವರನ್ನ ತಮ್ಮ ಗುಲಾಮರನ್ನಾಗಿ ಇಟ್ಟುಕೊಂಡಿದ್ದರು..
  • ಇನ್ನೊಂದು ದಾಖಲೆಯ ಪ್ರಕಾರ ನವಾಬರು ತಮ್ಮ ಮಿಲಿಟರಿಯಲ್ಲಿನ ಕೂಲಿ ಕೆಲಸಕ್ಕಾಗಿ ಇವರನ್ನ ಕರೆತಂದರು ಎನ್ನಲಾಗುತ್ತದೆ.
  • ಪ್ರಸ್ತುತ ಇವರು ಕರ್ನಾಟಕದ ಉತ್ತರಕನ್ನಡ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.