Published on: December 26, 2022
ಇ–ಆಸ್ತಿ ತಂತ್ರಾಂಶ
ಇ–ಆಸ್ತಿ ತಂತ್ರಾಂಶ
http://inkimages.net/my-account/ ಸುದ್ದಿಯಲ್ಲಿ ಏಕಿದೆ? 2017ಕ್ಕೂ ಮುನ್ನ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಿಂದ ಹೊರಗಿದ್ದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿಗಳ ಖಾತೆಗಳನ್ನು ಇ–ಆಸ್ತಿ ತಂತ್ರಾಂಶದಲ್ಲಿ ದಾಖಲಿಸಿ, ‘ಇ–ಖಾತೆ’ ನೀಡಲು ಸರ್ಕಾರ ನಿರ್ಧರಿಸಿದೆ.
Maaseik ಮುಖ್ಯಾಂಶಗಳು
- ಗ್ರಾಮ ಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಿದ ನಂತರ ಅವುಗಳ ಇ–ಸ್ವತ್ತು ತಂತ್ರಾಂಶದಡಿಯಲ್ಲಿ ನಿರ್ವಹಿಸಿದ ಖಾತೆಗಳನ್ನು ಇ–ಆಸ್ತಿ ತಂತ್ರಾಂಶದಲ್ಲಿ ದಾಖಲಿಸಲು ಅವಕಾಶ ನೀಡಲು ಸಂಪುಟದಲ್ಲಿ ನಿರ್ಣಯಿಸಲಾಯಿತು.
- ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ–ಖಾತೆ ನೀಡಿಕೆಗೆ ಇದ್ದ ಅಡೆ– ತಡೆಗಳು ಬಗೆಹರಿಯಲಿವೆ.
ಇ–ಆಸ್ತಿ ತಂತ್ರಾಂಶ
- ಉದ್ದೇಶ: ಕಂದಾಯ ಇಲಾಖೆಯಲ್ಲಿ ನೀಡಲಾಗುತ್ತಿರುವ ಸೇವೆಗಳನ್ನು ಸರಳೀಕರಣಗೊಳಿಸಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ “ಇ-ಆಸ್ತಿ ತಂತ್ರಾಂಶ” ಜಾರಿಗೊಳಿಸಲಾಗಿದೆ.
ಆಸ್ತಿ ಮಾಲೀಕರು ಹತ್ತಿರದ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸಹಾಯ ಕಂದಾಯ ಅಧಿಕಾರಿ ಕಛೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಇ-ಆಸ್ತಿ ತಂತ್ರಾಂಶದ ಮೂಲಕ ಇ-ಆಸ್ತಿ ದಾಖಲೆಯನ್ನು ಪಡೆಯಬಹುಹುದು.
‘ಇ–ಖಾತೆ’
ಇ ಖಾತೆ ಎಂದರೆ, ಇಲೆಕ್ಟ್ರಾನಿಕ್ ಖಾತಾ ಎಂದರ್ಥ. ಅಂದರೆ ಆಸ್ತಿ ದಾಖಲಾತಿಯನ್ನು ಆನ್ಲೈನ್ನಲ್ಲಿ ಸಲ್ಲಿಸುವುದು. ಕರ್ನಾಟಕ ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಭೂಮಿ ಸಂಬಂಧಿತ ಖಾತೆಗಳನ್ನು ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದು. ಆಸ್ತಿ ಮಾಲೀಕರಿಗೆ ಮಧ್ಯವರ್ತಿಗಳಿಂದ ಕಿರುಕುಳವಾಗದಂತೆ ನೋಡಿಕೊಳ್ಳಲು ಇದು ಸಹಕಾರಿಯಾಗಿದೆ. ಮಾತ್ರವಲ್ಲದೆ ಭ್ರಷ್ಟಾಚಾರವನ್ನು ನಿಗ್ರಹಿಸಲು ಮತ್ತು ಸುಗಮ ಮತ್ತು ತೊಂದರೆ-ಮುಕ್ತ ಸೇವೆಯನ್ನು ಖಚಿತಪಡಿಸಿಕೊಳ್ಳಲು ಕೂಡ ಇದು ನೆರವಾಗಿದೆ.