Published on: September 28, 2023

ಎಬಿಎಆರ್‌ಕೆ ಕೋ ಬ್ರ್ಯಾಂಡೆಡ್ ಕಾರ್ಡ್

ಎಬಿಎಆರ್‌ಕೆ ಕೋ ಬ್ರ್ಯಾಂಡೆಡ್ ಕಾರ್ಡ್

ಸುದ್ದಿಯಲ್ಲಿ ಏಕಿದೆ? ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ-ಆರೋಗ್ಯ ಕರ್ನಾಟಕ’ (ಎಬಿ-ಪಿಎಂಜೆಎವೈ-ಎಆರ್) ಸೌಲಭ್ಯ ಮತ್ತಷ್ಟು ಉತ್ತಮಗೊಂಡಿದ್ದು, ಇದಕ್ಕಾಗಿ ಹೊಸದಾಗಿ (ಎಬಿಎಆರ್‌ಕೆ ಕೋ ಬ್ರ್ಯಾಂಡೆಡ್ ಕಾರ್ಡ್) ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದೆ.

ಮುಖ್ಯಾಂಶಗಳು

  • ಇದಕ್ಕಾಗಿ ರಾಜ್ಯಾದ್ಯಂತ 1.50 ಕೋಟಿ ಜನರು ಹೆಸರು ನೋಂದಾಯಿಸಿದ್ದಾರೆ.
  • ರಾಜ್ಯದಲ್ಲಿ ಬಿಪಿಎಲ್ ಕುಟುಂಬ ಸೇರಿ ಎಲ್ಲ ಅರ್ಹ 5.09 ಕೋಟಿ ಜನರಿಗೆ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ.
  • ದೀರ್ಘಕಾಲ ಬಾಳಿಕೆ ಬರುವಂತೆ ಆಧಾರ್ ಕಾರ್ಡ್ ಮಾದರಿಯಲ್ಲಿ ಈ ಕಾರ್ಡ್ ವಿತರಿಸಲಾಗುತ್ತಿದೆ.

ವಿಶೇಷತೆ

  • ಈ ‘ಕೋ ಬ್ರ್ಯಾಂಡೆಡ್ ಕಾರ್ಡ್’ ಬಳಸಿ ಕರ್ನಾಟಕ ಮಾತ್ರವಲ್ಲ, ದೇಶದ ಯಾವುದೇ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ (ರೆರಲ್ ಆಧಾರದಲ್ಲಿ) ಬಿಪಿಎಲ್ ಕಾರ್ಡುದಾರರು ಉಚಿತವಾಗಿ ಚಿಕಿತ್ಸೆ ಪಡೆಯಬಹುದು.
  • ಆದರೆ ಕರ್ನಾಟಕ ಹೊರತುಪಡಿಸಿ ಹೊರ ರಾಜ್ಯಗಳಲ್ಲಿ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ಸಿಗುವುದಿಲ್ಲ (ಕರ್ನಾಟಕದಲ್ಲಿ ಮಾತ್ರ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಎಬಿಎಆರ್‌ಕೆ ಯೋಜನೆಯಡಿ ಶೇ.30 ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಿದೆ).

ಕ್ಯೂಆರ್ ಕೋಡ್:

  • ಆಧಾರ್ ಮಾದರಿಯಲ್ಲಿ ಕೋ ಬ್ರ್ಯಾಂಡೆಡ್ ಕಾರ್ಡ್‌ನಲ್ಲೂ ಆಯುಷ್ಮಾನ್ ಭಾರತ ಹೆಲ್ತ್ ಅಕೌಂಟ್ ನಂಬರ್ ಇರುತ್ತದೆ. ಅಲ್ಲದೆ ಈ ಕಾರ್ಡ್‌ನಲ್ಲಿರುವ ಕ್ಯೂಆರ್ ಕೋಡ್ ಬಳಸಿದರೆ ಇದರಿಂದ ರೋಗಿಯ ಆರೋಗ್ಯದ ಸಂಪೂರ್ಣ ಮಾಹಿತಿ ವೈದ್ಯರಿಗೆ ಲಭ್ಯವಾಗಲಿದೆ. ಇದರಿಂದ ರೋಗಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ.

ಆಯುಷ್ಮಾನ್ ಭಾರತ್ ಯೋಜನೆ

  • ಪ್ರಧಾನ್ ಮಂತ್ರಿ ಜನಾರೋಗ್ಯ ಯೋಜನೆ-ಪಿಎಂಜೆಎವೈ ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಎಂಬ ಹೆಸರುಗಳಿವೆ. ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಮಿಷನ್ ಅಡಿಯಲ್ಲಿ 2018ರಲ್ಲಿ ಪ್ರಾರಂಭಿಸಲಾಗಿರುವ ಕೇಂದ್ರ ಸರಕಾರ ಯೋಜನೆಯಾಗಿದೆ.