Published on: May 6, 2023

“ಏಕತಾ ಏವಂ ಶ್ರದಾಂಜಲಿ ಅಭಿಯಾನ”

“ಏಕತಾ ಏವಂ ಶ್ರದಾಂಜಲಿ ಅಭಿಯಾನ”

ಸುದ್ದಿಯಲ್ಲಿ ಏಕಿದೆ? ರಾಷ್ಟ್ರ ನಿರ್ಮಾಣದಲ್ಲಿ ತನ್ನ ಕರ್ಮಯೋಗಿಗಳ ‘ ತ್ಯಾಗ ಮತ್ತು ಕೊಡುಗೆ’ಯನ್ನು ಸ್ಮರಿಸಲು , ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) 64 ನೇ BRO ದಿನಾಚರಣೆಯ ಅಂಗವಾಗಿ “ಏಕತಾ ಏವಂ ಶ್ರದಾಂಜಲಿ ಅಭಿಯಾನ” ಅನ್ನು ಅನ್ನು ಆಯೋಜಿಸಿದೆ.

ಮುಖ್ಯಾಂಶಗಳು

  • ಈ ವಿಶೇಷ ಕಾರ್ಯಯಾತ್ರೆಯು ಮೋಟಾರು ಬೈಕುಗಳು ಮತ್ತು ಮೋಟಾರು ಕಾರುಗಳನ್ನು ಒಳಗೊಂಡಿದೆ, ಇದು ಭಾರತದ ಈಶಾನ್ಯ ಮತ್ತು ಉತ್ತರ ಭಾಗಗಳಿಂದ ಪ್ರಾರಂಭವಾಯಿತು.
  • ಮೇ 1, 2023 ರಂದು, ಬಾರ್ಡರ್ ರಸ್ತೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಅವರು ಹೊಸದಿಲ್ಲಿಯ ಸೀಮಾ ಸಡಕ್ ಭವನದಿಂದ ಮೋಟಾರ್‌ಸೈಕಲ್ ಮತ್ತು ಕಾರ್ ರ್ಯಾಲಿ ತಂಡಗಳನ್ನು ಫ್ಲ್ಯಾಗ್‌ಆಫ್ ಮಾಡಿದರು.
  • 14 ಏಪ್ರಿಲ್ 2023 ರಂದು ಅರುಣಾಚಲ ಪ್ರದೇಶದ ಕಿಬಿತುದಲ್ಲಿ ಪ್ರಾರಂಭವಾಗಿ, 18 ಯೋಜನೆಗಳ ವಿಶೇಷ ಕಾರ್ಯಯಾತ್ರೆಯ ಸದಸ್ಯರು 108 ದೂರದ ಗಡಿ ಸ್ಥಳಗಳಿಂದ ಮಣ್ಣು, ನೀರು ಮತ್ತು ಸಸಿಗಳನ್ನು ಸಂಗ್ರಹಿಸಿದ್ದಾರೆ. ಈ ಸಸಿಗಳನ್ನು ಪುಣೆಯ BRO ಅಲ್ಮಾ ಮೇಟರ್, BRO ಶಾಲೆ ಮತ್ತು ಕೇಂದ್ರದಲ್ಲಿ ಇವುಗಳನ್ನು ನೆಡಲಾಗುವುದು. ಈ ವಿಶೇಷ ಕಾರ್ಯಯಾತ್ರೆಯು 7 ಮೇ 2023 ರಂದು ಮುಕ್ತಾಯಗೊಳ್ಳಲಿದೆ.

ಬಾರ್ಡರ್ ರೋಡ್ ಸಂಸ್ಥೆ

  • BRO ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಶಾಸನಬದ್ಧ ಸಂಸ್ಥೆಯಾಗಿದೆ.
  • 1960ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಪ್ರಧಾನ ಕಛೇರಿ ನವದೆಹಲಿಯಲ್ಲಿದೆ
  • ಭಾರತದ ಗಡಿ ಪ್ರದೇಶಗಳಲ್ಲಿ ಮತ್ತು ಅಫ್ಘಾನಿಸ್ತಾನ, ಭೂತಾನ್, ಮ್ಯಾನ್ಮಾರ್, ತಜಕಿಸ್ತಾನ್ ಮತ್ತು ಶ್ರೀಲಂಕಾದಂತಹ ಸ್ನೇಹಪರ ನೆರೆಯ ರಾಷ್ಟ್ರಗಳಲ್ಲಿ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಿಸುವುದು ಇದರ ಪ್ರಾಥಮಿಕ ಜವಾಬ್ದಾರಿಯಾಗಿದೆ.
  • ಇದರ ಕಾರ್ಯಾಚರಣೆಯ ಪ್ರದೇಶಗಳು 19 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿದೆ, ಇದರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳೂ ಸೇರಿವೆ.
  • BROದ ಧ್ಯೇಯವೆಂದರೆ ಶ್ರಮೇಣ ಸರ್ವಂ ಸಾಧ್ಯ, ಅಂದರೆ ಕಠಿಣ ಪರಿಶ್ರಮದಿಂದ ಎಲ್ಲವನ್ನೂ ಸಾಧಿಸಬಹುದು.