Published on: February 20, 2023
ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ)
ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ)
http://humanesmarts.org/generic-viagra-do-they-work/ ಸುದ್ದಿಯಲ್ಲಿ ಏಕಿದೆ? cenforce 100 mg centurion laboratories ದೇಶದಲ್ಲಿನ ಚಿರತೆಗಳು ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದು, ಚಿರತೆಯ ಅಸಹನೆಯ ವರ್ತನೆಗೆ ಸಿಡಿವಿ ರೋಗ ಕಾರಣ ಎಂದು ಹೊಸ ಅಧ್ಯಯನದಲ್ಲಿ ತಿಳಿದುಬಂದಿದೆ
ಮುಖ್ಯಾಂಶಗಳು
- ಸಿಡಿವಿಯನ್ನು ಕ್ಯಾನೈನ್ ಮೊರ್ಬಿಲ್ಲಿವೈರಸ್ ಎಂದೂ ಕರೆಯುತ್ತಾರೆ.
- ಇದು ಮಾಂಸಾಹಾರಿ ಪ್ರಾಣಿಗಳಲ್ಲಿ ‘ದಿಗ್ಭ್ರಮೆ’ ಮತ್ತು ‘ಭಯ ಕಳೆದುಕೊಳ್ಳುವಂತೆ ನರಗಳ ಮೇಲೆ ಪರಿಣಾಮ ಬೀರುತ್ತದೆ.
- ‘ನೇಪಾಳದಲ್ಲಿನ ಹುಲಿಗಳು ಮತ್ತು ಚಿರತೆಗಳಲ್ಲಿ ಸಿಡಿವಿ’ ಅಧ್ಯಯನ ಜನವರಿ 28 ರಂದು ಅಂತಾರಾಷ್ಟ್ರೀಯ ಜರ್ನಲ್ ನಲ್ಲಿ ಪ್ರಕಟವಾಗಿತ್ತು. ಇದರಲ್ಲಿ 2020-2022ರ ನಡುವೆ ಸಿಡಿವಿಯೊಂದಿಗೆ ಮಾರಣಾಂತಿಕ ನರ ಸಮಸ್ಯೆಯ ಕಾಯಿಲೆಯಿಂದ ಬಳಲುತ್ತಿದ್ದ ಆರು ಭಾರತೀಯ ಚಿರತೆಗಳನ್ನು ನೇಪಾಳಕ್ಕೆ ನೀಡಲಾಗಿತ್ತು.
- ಭಾರತದ ಮಾಂಸಾಹಾರಿಗಳಾದ ಹುಲಿ ಮತ್ತು ಚಿರತೆಗಳು ಸಹ ಅಪಾಯಕಾರಿ ವೈರಸ್‌ನಿಂದ ಸೋಂಕಿಗೆ ಒಳಗಾಗಿವೆ.
- ರೇಬಿಸ್‌ನ ಸಂದರ್ಭದಲ್ಲಿ ಸಿಡಿವಿ-ಸೋಂಕಿತ ಪ್ರಾಣಿಗಳು ಮನುಷ್ಯರ ಭಯವನ್ನು ಕಳೆದುಕೊಳ್ಳುವುದು ಸಾಧ್ಯ.
- ಪ್ರಸ್ತುತ ಉಪಖಂಡದಾದ್ಯಂತ ಸಿಡಿವಿ ರೋಗವಿದೆ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಸಿಂಹ, ತೋಳ, ನರಿ, ಹುಲಿ, ಚಿರತೆ ಮತ್ತು ಕತ್ತೆಕಿರುಬಗಳಲ್ಲಿ ಸಿಡಿವಿ ಪತ್ತೆ ಹಚ್ಚಲಾಗಿದೆ.
ಲಕ್ಷಣಗಳು
- ಇದನ್ನು ಸ್ಥೂಲವಾಗಿ ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ಆರಂಭಿಕ ಹಂತದಲ್ಲಿ ಜ್ವರ ಮತ್ತು ರೋಗ ನಿರೋಧಕ ಶಕ್ತಿ ಕುಂದಿರುತ್ತದೆ. ವೈರಸ್ ಅಂಗಾಂಶಕ್ಕೆ ಸೋಂಕು ಉಂಟುಮಾಡಿದಾಗ ತೀವ್ರವಾದ ಹಂತ ತಲುಪುತ್ತದೆ.
- ಪರಿಣಾಮವಾಗಿ ಕಣ್ಣುಗಳು ಮತ್ತು ಮೂಗುಗಳಿಂದ ನೀರು ಸೋರುವುದು, ಉಸಿರಾಟದ ತೊಂದರೆ ಮತ್ತಿತರ ಸಮಸ್ಯೆಗಳು ಬರುತ್ತದೆ.
- ಕೆಲ ಪ್ರಾಣಿಗಳು ಈ ಹಂತದಲ್ಲಿ ಸಾವನ್ನಪ್ಪುತ್ತವೆ, ಆದರೆ, ಮತ್ತೆ ಇತರ ಪ್ರಾಣಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತವೆ.
- ಮೂರನೇ ಹಂತದಲ್ಲಿ ಪ್ರಾಣಿಗಳಲ್ಲಿ ನರದ ಸಮಸ್ಯೆ ಉಂಟಾಗುತ್ತದೆ. ಸಿಡಿವಿ ಕಾಯಿಲೆಯ ಅಪಾಯವನ್ನು ತಗ್ಗಿಸಲು ರೇಬಿಸು ಚುಚ್ಚುಮದ್ದು ಮಾತ್ರ ಉಪಯುಕ್ತ ತಂತ್ರವಾಗಿದೆ.
- ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ದೊಡ್ಡ ಬೆಕ್ಕುಗಳಿಗೆ ಮನುಷ್ಯರ ಬಗ್ಗೆ ಕಡಿಮೆ ಭಯಪಡುವಂತೆ ಮಾಡುತ್ತದೆ. ಇದು ಚಿರತೆ ಆಗಾಗ್ಗೆ ಆಹಾರಕ್ಕಾಗಿ ಜನವಸತಿಗಳನ್ನು ಪ್ರವೇಶಿಸಲು ಕಾರಣವಾಗಬಹುದು.
- ಸಾಕು ನಾಯಿಗಳ ಬೇಟೆಯು ಸಾಂಕ್ರಾಮಿಕ ವೈರಸ್ ಪಡೆಯುವ ಪ್ರಮುಖ ಮಾರ್ಗವಾಗಿದೆ.
ವೈರಸ್ ಪತ್ತೆ : 2003 ರಲ್ಲಿ ರಷ್ಯಾದಲ್ಲಿಆರಂಭಿಕವಾಗಿ ಸಿಡಿವಿ ಪತ್ತೆಯಾಯಿತು. ನಂತರ ಇಂಡೋನೇಷ್ಯಾ ಮತ್ತು ಭಾರತದಲ್ಲಿನ ಹುಲಿಗಳು ಮತ್ತು ಚಿರತೆಗಳಲ್ಲಿ ಈ ರೋಗ ಗುರುತಿಸಲಾಯಿತು. ಈ ರೋಗ ಉಂಟುಮಾಡುವರಲ್ಲಿ ನಾಯಿಗಳು ಪ್ರಮುಖವಾಗಿವೆ.