Published on: June 30, 2023

ಕ್ಯೂಎಸ್ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ 2023

ಕ್ಯೂಎಸ್ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ 2023

ಸುದ್ದಿಯಲ್ಲಿ ಏಕಿದೆ? ಕ್ಯೂಎಸ್ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ 2023 ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಜಾಗತಿಕವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.

ಮುಖ್ಯಾಂಶಗಳು

  • ಅಗ್ರ 150 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಟಿ ಬಾಂಬೆ 147ನೇ ಸ್ಥಾನ ಪಡೆದಿದೆ. ಭಾರತದ ಬೇರೆ ಯಾವ ವಿಶ್ವವಿದ್ಯಾಲಯಗಳು ಅಗ್ರ 150 ರಲ್ಲಿ ಸ್ಥಾನ ಪಡೆದಿಲ್ಲ.
  • ಭಾರತವು ವಿಶ್ವದ 500 ವಿಶ್ವವಿದ್ಯಾಲಯಗಳಲ್ಲಿ ದೆಹಲಿ ವಿಶ್ವವಿದ್ಯಾಲಯ 407ನೇ ಸ್ಥಾನ ಪಡೆದರೆ, ಅಣ್ಣಾ ವಿಶ್ವವಿದ್ಯಾಲಯ 427ನೇ ರ್ಯಾಂಕ್ ಪಡೆಯುವ ಮೂಲಕ ಮೊದಲ ಬಾರಿಗೆ QS ವರ್ಲ್ಡ್ ರ್ಯಾಂಕಿಗ್‌ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
  • ಕಳೆದ ಬಾರಿಗಿಂತ ಈ ಬಾರಿ 13 ಭಾರತೀಯ ವಿಶ್ವವಿದ್ಯಾನಿಲಯಗಳು QS ಶ್ರೇಯಾಂಕದಲ್ಲಿ ಕುಸಿತವನ್ನು ಕಂಡಿವೆ. IISc, ಬೆಂಗಳೂರು, 155 ರ್ಯಾಂಕ್‌ನಿಂದ 225ನೇ ರ್ಯಾಂಕ್‌ಗೆ ಕುಸಿದರೆ, IIT-ಮದ್ರಾಸ್ 285ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಮಾನದಂಡಗಳು

  • ಸಮರ್ಥನೀಯತೆ, ಉದ್ಯೋಗದ ಫಲಿತಾಂಶಗಳು ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಜಾಲ ಮತ್ತು ಶೈಕ್ಷಣಿಕ ಖ್ಯಾತಿ, ಉದ್ಯೋಗದಾತ ಖ್ಯಾತಿ ಮತ್ತು ಅಧ್ಯಾಪಕ-ವಿದ್ಯಾರ್ಥಿ ಅನುಪಾತದ ಮೂರು ಹೊಸ ಮೆಟ್ರಿಕ್‌ ಮೂಲಕ ತಾಳೆ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು

  • ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಕ ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಸಂಕಲಿಸಿದ ತುಲನಾತ್ಮಕ ವಿಶ್ವವಿದ್ಯಾನಿಲಯ ಶ್ರೇಯಾಂಕಗಳ ಪೋರ್ಟ್ಫೋಲಿಯೊ ಆಗಿದೆ.
  • ಅದರ ಮೊದಲ ಆವೃತ್ತಿಯನ್ನು ಟೈಮ್ಸ್ ಹೈಯರ್ ಎಜುಕೇಶನ್ (THE) ನಿಯತಕಾಲಿಕದ ಸಹಯೋಗದೊಂದಿಗೆ ಟೈಮ್ಸ್ ಹೈಯರ್ ಎಜುಕೇಶನ್-ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು ಎಂದು ಪ್ರಕಟಿಸಲಾಯಿತು,
  • ಪ್ರಾರಂಭ: 2004 ರಲ್ಲಿ
  • ದೇಶ : ಯುನೈಟೆಡ್ ಕಿಂಗ್ಡಮ್