Published on: June 30, 2023

ತಪಸ್‌

ತಪಸ್‌

ಸುದ್ದಿಯಲ್ಲಿ ಏಕಿದೆ? ಮಾನವ ರಹಿತ ಯುದ್ಧ ಡ್ರೋಣ್ ತಪಸ್ (ಯುಎವಿ) ಸತತ 200 ಹಾರಾಟಗಳನ್ನು ಪೂರ್ಣಗೊಳಿಸಿದ ಸಂದರ್ಭ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಬಳಿಯ ಕುದಾಪುರದ ಡಿಆರ್ಡಿಒ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ ರಕ್ಷಣಾ ಪಡೆಗಳ ತ್ರಿಸೇವಾ ತಂಡದ ಮುಂದೆ ಪ್ರಾತ್ಯಕ್ಷಿಕೆ ನಡೆಸಲಾಯಿತು.

ಮುಖ್ಯಾಂಶಗಳು

  • ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಸಂಪೂರ್ಣ ದೇಶೀಯವಾಗಿ ನಿರ್ಮಿಸಿರುವುದು ಇದರ ಪ್ರಮುಖ ಅಂಶವಾಗಿದೆ. ಇಸ್ರೇಲ್ ನಿರ್ಮಿತ ಹೀರಾನ್ ಡ್ರೋಣ್ಗೆ ಸ್ಪರ್ಧೆಯೊಡ್ಡುವಂತಿರುವ ದೇಶಿ ಡ್ರೋಣ್ ಸತತ 200 ಹಾರಾಟಗಳನ್ನು ಪೂರೈಸಿರುವುದು ಡಿಆರ್ಡಿಒ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು.
  • ಅಭಿವೃದ್ಧಿಪಡಿಸಿದವರು :ಡಿಆರ್ಡಿಓ

‘ತಪಸ್‌’ನ ಏನು?

  • ಬೆಂಗಳೂರಿನಲ್ಲಿ ಜರುಗಿದ ಏರೋ ಇಂಡಿಯಾ 2023ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಇದು ಮಾನವ ರಹಿತವಾಗಿದ್ದು, ಭೂಮಿಯಿಂದ ಮತ್ತು ಸಮದ್ರದಲ್ಲಿರುವ ನೌಕೆಯಿಂದ ಇದನ್ನು ನಿಯಂತ್ರಿಸಬಹುದಾಗಿದೆ. ಹಗಲು ಮತ್ತು ರಾತ್ರಿಯಲ್ಲಿಯೂ ಇದು ಕಾರ್ಯನಿರ್ವಹಿಸಬಲ್ಲದು.
  • ಸಮುದ್ರಮಟ್ಟದಿಂದ 28 ಸಾವಿರ ಅಡಿ ಎತ್ತರದಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
  • ಕ್ಷಮತೆ: ಸತತ 18 ಗಂಟೆ ಕಾಲ ಕಾರ್ಯನಿರ್ವಹಿಸುವ ಕ್ಷಮತೆಯನ್ನು ಇದು ಹೊಂದಿದೆ.
  • ಈಗಾಗಲೇ ಭೂಮಿಯಿಂದ ಸಾಗರದ ಮೇಲ್ಮೈ ಮೇಲೆ ಇರುವ ಜಲನೌಕೆಗೆ ಕಾರ್ಯಗಳನ್ನು ವರ್ಗಾಯಿಸುವ ಪರೀಕ್ಷೆಯನ್ನು ಭೂಸೇನೆ ಮತ್ತು ನೌಕಾಸೇನೆಗಳು ಯಶಸ್ವಿಯಾಗಿ ಪೂರೈಸಿವೆ.
  • ಸಾಮರ್ಥ್ಯ : 100 ರಿಂದ 500 ಕೆಜಿ ಭಾರದ ಯುದ್ಧ ವಸ್ತು ಕೊಂಡೊಯ್ಯವ ಸಾಮರ್ಥ್ಯ ಇದಕ್ಕಿದೆ.
  • ವಿಮಾನದಂತೆ ಭೂಮಿಯಿಂದ ನಭಕ್ಕೆ ಹಾರುವ ಮತ್ತು ಇಳಿಯುವ ಶಕ್ತಿ ಹೊಂದಿದೆ.
  • ವೇಗ: ಗಂಟೆಗೆ 224 ಕಿಮೀ ವೇಗದಲ್ಲಿ ಸಾಗುವ ಡ್ರೋ ಣ್ 130-180 ಎಚ್ಪಿ ಸಾಮರ್ಥ್ಯ ಹೊಂದಿದೆ.
  • 5 ಮೀಟರ್ ಉದ್ದ ಮತ್ತು 20.6 ಮೀಟರ್ ಉದ್ದದ ರೆಕ್ಕೆಗಳನ್ನು ಹಾಗೂ 1800 ಕೆಜಿ ತೂಕವನ್ನು ಒಳಗೊಂಡಿದೆ.
  • ಈ ಡ್ರೋಣ್ನ್ನು ಮೇಲ್ (ಮೀಡಿಯಂ ಅಲ್ಟಿಟ್ಯೂ ಡ್ ಆ್ಯಂಡ್ ಲಾಂಗ್ ಎನ್ಡ್ಯೂರೇನ್ಸ್) ಮಧ್ಯಮ ಎತ್ತರ ಮತ್ತು ಹೆಚ್ಚಿನ ಕಾಲ ಕಾರ್ಯನಿರ್ವಹಿಸುವ ಡ್ರೋಣ್ ಎಂದು ಕರೆಯಲಾಗಿದೆ.

ಮುಂದಿನ ಗುರಿ

  • ಹೇಲ್‌ (ಹೈ ಅಲ್ಟಿಟ್ಯೂಡ್‌ ಆ್ಯಂಡ್‌ ಲಾಂಗ್‌ ಎನ್‌ಡ್ಯೂರೆನ್ಸ್‌) ಮುಂದಿನ ಗುರಿಯಾಗಿದೆ. ಭೂಮಿಯಿಂದ 50 ರಿಂದ 60 ಸಾವಿರ ಅಡಿ ಎತ್ತರದಲ್ಲಿ ಸಾಗುವ ಮತ್ತು ಒಂದು ಸಾವಿರ ಕೆಜಿಯಷ್ಟು ಭಾರ ಹೊತ್ತು ಸಾಗುವ ಡ್ರೋಣ್‌ನನ್ನು ಪರಿಚಯಿಸುವ ಗುರಿ ಹೊಂದಲಾಗಿದೆ.