Published on: July 16, 2023

ಖಗೋಳ ಪ್ರವಾಸೋದ್ಯಮ ಕೇಂದ್ರ (ಆಸ್ಟ್ರೋ ಫಾರ್ಮ್’)

ಖಗೋಳ ಪ್ರವಾಸೋದ್ಯಮ ಕೇಂದ್ರ (ಆಸ್ಟ್ರೋ ಫಾರ್ಮ್’)

ಸುದ್ದಿಯಲ್ಲಿ ಏಕಿದೆ? ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ‘ನವಿಲಗದ್ದೆ’ ಗುಡ್ಡದ ತಮ್ಮ ಜಮೀನಿನಲ್ಲಿ ‘ಆಸ್ಟ್ರೋ ಫಾರ್ಮ್‌ ’ (ಖಗೋಳ ಪ್ರವಾಸೋದ್ಯಮ ಕೇಂದ್ರ) ಸ್ಥಾಪಿಸಿರುವ ಕುನ್ನೂರು ಗ್ರಾಮದ ನಿರಂಜನ ಖಾನಗೌಡ್ರ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಸ್ಪಂದಿಸಿದ್ದಾರೆ.

ಮುಖ್ಯಾಂಶಗಳು

  • ನಿರಂಜನ ಖಾನಗೌಡ್ರ ಅವರು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಖಗೋಳ ಭೌತಶಾಸ್ತ್ರದಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ್ದು, ಪೂರ್ವಜರಿಂದ ಬಂದ 60 ಎಕರೆ ಜಮೀನಿನಲ್ಲಿ ಅಸ್ಟ್ರೋ ಫಾರ್ಮ್ ನಿರ್ಮಿಸಿದ್ದಾರೆ. ನಿರಂಜನ್ ಅವರ ಈ ಪ್ರಯತ್ನ ಕರ್ನಾಟಕದ ಮಟ್ಟಿಗೆ ಮೊದಲ ಪ್ರಯತ್ನವಾಗಿದೆ.
  • ಈ ಆಸ್ಟ್ರೋ ಫಾರ್ಮ್’ಗೆ ಭೇಟಿ ನೀಡಿ, ಗ್ರಹ, ಆಕಾಶಕಾಯ, ಗ್ರಹಣದ ಕುರಿತು ಮಾಹಿತಿ ಪಡೆದುಕೊಂಡು, ಆಕಾಶಕಾಯಗಳನ್ನು ನೋಡುವ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
  • ಲಡಾಕ್ನಲ್ಲಿನ ಆಗಸವು ಬಾರ್ಟಲ್ -1 ವಿಭಾಗಕ್ಕೆ ಬಂದರೆ, ಹಾವೇರಿಯ ಕನ್ನೂರು ಬಾರ್ಟಲ್ 2 ಸ್ಕೈ-ಲೆವೆಲ್ ವಿಭಾಗಕ್ಕೆ ಬರುತ್ತದೆ. ಇದು ರಾತ್ರಿ ವೀಕ್ಷಣೆಗೆ ಸೂಕ್ತ ಪ್ರದೇಶವಾಗಿರುತ್ತದೆ. ಬೆಂಗಳೂರಿನಂತಹ ಮಹಾನಗರಗಳು ಬಾಟಲ್ 8-9 ವಿಭಾಗಕ್ಕೆ ಬರುತ್ತವೆ.
  • ಹೈ-ಡೆಫಿನಿಷನ್ ಟೆಲಿಸ್ಕೋಪ್‌ಗಳ ಮೂಲಕ ಗೆಲಕ್ಸಿಗಳನ್ನು ವೀಕ್ಷಿಸಲಾಗುತ್ತದೆ

ಬಾರ್ಟಲ್ 2 ವಲಯ

  • ಅತಿಯಾದ ಕೃತಕ ಬೆಳಕು ಮತ್ತು ಹೊಗೆ, ದೂಳಿನಿಂದ ಉಂಟಾಗುವ ವಾಯು ಮಾಲಿನ್ಯದಿಂದ ‘ಬೆಳಕಿನ ಮಾಲಿನ್ಯ’ ಆಗುತ್ತದೆ. ಬೆಳಕಿನ ಮಾಲಿನ್ಯ ಅಳೆಯುವ ಮಾ‍‍ಪಕ ‘ಬಾರ್ಟಲ್’ ಪ್ರಕಾರ, ಬೆಂಗಳೂರಿನಲ್ಲಿಅತಿ ಹೆಚ್ಚು ಬೆಳಕು ಮತ್ತು ವಾಯುಮಾಲಿನ್ಯವಿದ್ದು ಬಾರ್ಟಲ್ 7 ರಿಂದ 8ರ ವಲಯದಲ್ಲಿ ಬರುತ್ತದೆ. ‘ಅರಣ್ಯ ಮತ್ತುಶುಚಿ ಪರಿಸರವುಳ್ಳ ‘ನವಿಲಗದ್ದೆ’ಯು ಬಾರ್ಟಲ್–2 ವಲಯದಲ್ಲಿಬರುತ್ತದೆ. ರಾತ್ರಿ ವೇಳೆ ಆಕಾಶ ವೀಕ್ಷಣೆಗೆ ಪ್ರಶಸ್ತಸ್ಥಳ. ದೂರದರ್ಶಕ ಯಂತ್ರಗಳ ಮೂಲಕ ತಾರಾ ಮಂಡಲ, ಗ್ರಹಗಳು, ಚಂದ್ರ, ಕ್ಷುದ್ರಗ್ರಹಗಳು, ಧೂಮಕೇತು, ನಿಹಾರಿಕೆಗಳನ್ನು ಸ್ಪಷ್ಟವಾಗಿ ನೋಡಬಹುದು’.

ಖಗೋಳ ಪ್ರವಾಸೋದ್ಯಮ

  • ‘ಕೇಂದ್ರ ಸರ್ಕಾರ ಉತ್ತರಾಖಂಡದಲ್ಲಿಮೊದಲ ‘ಆಸ್ಟ್ರೊ ವಿಲೇಜ್’ ಸ್ಥಾಪಿಸಿದೆ. ಉತ್ತರ ಭಾರತದಲ್ಲಿ ಖಾಸಗಿ ಸಂಸ್ಥೆಯವರು ‘ನಕ್ಷತ್ರ ವೀಕ್ಷಣೆ’ (ಸ್ಟಾರ್ ಗೇಜಿಂಗ್) ಕಾರ್ಯಕ್ರಮ ಆಯೋಜಿಸುತ್ತಾರೆ.