Published on: March 2, 2023

ಚುಟುಕು ಸಮಾಚಾರ : 2 ಮಾರ್ಚ್ 2023

ಚುಟುಕು ಸಮಾಚಾರ : 2 ಮಾರ್ಚ್ 2023

  • ಅಭಿಜಾತ ಭಾಷೆ ಸಂಸ್ಕೃತದ ಮೂಲಕವೇ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಈ ಗ್ರಾಮವೇ ಮತ್ತೂರು.  ಏಕೈಕ ಸಂಸ್ಕೃತ ಮಾತನಾಡುವ ಗ್ರಾಮವಿದು. ಇಲ್ಲಿನ ರೈಲ್ವೆ ನಿಲ್ದಾಣದ ನಾಮಫಲಕದಲ್ಲಿ ತ್ರಿಭಾಷಾ (ಕನ್ನಡ, ಇಂಗ್ಲಿಷ್, ಹಿಂದಿ)ಜೊತೆಗೆ ಸಂಸ್ಕೃತವನ್ನು ಸೇರಿಸಲಾಗಿದ್ದು ಈ ಮೂಲಕ ಸಂಸ್ಕೃತ ಗ್ರಾಮಕ್ಕೆ ನೈರುತ್ಯ ರೈಲ್ವೆ ವಿಶೇಷ ಗೌರವ ಸಲ್ಲಿಸಿದೆ
  • ವಾಯುಪಡೆಗಾಗಿ ಎಚ್‌ಎಎಲ್‌ ನಿರ್ಮಿತ 70 ತರಬೇತಿ ವಿಮಾನಗಳನ್ನು (ಎಚ್‌ಟಿಟಿ–40) ₹6,828 ಕೋಟಿ ವೆಚ್ಚದಲ್ಲಿ ಖರೀದಿಸಲು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿಯು (ಸಿಸಿಎಸ್‌) ಅನುಮೋದನೆ ನೀಡಿದೆ.
  • ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹಿಂದಿಕ್ಕಿರುವ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಂ.1 ಸ್ಥಾನ ಪಡೆದಿದ್ದಾರೆ .
  • 2022ನೇ ಸಾಲಿನ ಫುಟ್‌ಬಾಲ್ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್ ಮೆಸ್ಸಿ, ಫಿಫಾದ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸ್ಪೇನ್‌ನ ಅಲೆಕ್ಸಿಯಾ ಪುಟೆಲ್ಲಾಸ್ ಅವರು, ಮಹಿಳಾ ವಿಭಾಗದ ಪ್ರಶಸ್ತಿ ಗಳಿಸಿದ್ದಾರೆ.
  • ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಎಟಿಪಿ ಟೆನಿಸ್ ರ್‍ಯಾಂಕಿಂಗ್‌ನಲ್ಲಿ 378 ವಾರಗಳ ಕಾಲ ಅಗ್ರಸ್ಥಾನದಲ್ಲಿ ಮುಂದುವರಿಯುವ ಮೂಲಕ ಮಾಜಿ ಆಟಗಾರ್ತಿ ಸ್ಟೆಫಿ ಗ್ರಾಫ್‌ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ.
  • ಸಿಖ್ಖರ ಪವಿತ್ರ ಯಾತ್ರಾ ಸ್ಥಳವಾದ ಗುರುದ್ವಾರ ದರ್ಬಾರ್‌ ಸಾಹಿಬ್‌ ಸಂಪರ್ಕಿಸುವ ಕರ್ತಾರ್‌ಪುರ್‌ ಕಾರಿಡಾರ್‌ಗೆ ಸರ್ದಾರ್ ರಮೆಶ್ ಸಿಂಗ್ ಅರೋರಾ ಅವರನ್ನು ರಾಯಭಾರಿಯಾಗಿ ಪಾಕಿಸ್ತಾನ ಸರ್ಕಾರ ನೇಮಿಸಿದೆ. ಉದ್ದೇಶ :ಜಗತ್ತಿನಾದ್ಯಂತ ಇರುವ ಸಿಖ್‌ ಯಾತ್ರಿಕರನ್ನು ಈ ಯಾತ್ರಾ ಸ್ಥಳಕ್ಕೆ ಸೆಳೆಯುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ಪ್ರಧಾನಿ ಶೆಹ್ಬಾಜ್ ಷರೀಫ್ ಅವರು ಈ ನೇಮಕ ಮಾಡಿದ್ದಾರೆ. ನರೋವಾಲ್‌ನ ಕರ್ತಾರ್‌ಪುರದವರಾದ ಅರೋರಾ ಅವರು ‌ಪಾಕಿಸ್ತಾನ ಮುಸ್ಲಿಂ ಲೀಗ್‌ನ ಅಲ್ಪಸಂಖ್ಯಾತರ ವಿಭಾಗದ ಕೇಂದ್ರ ಪ್ರಧಾನ ಕಾರ್ಯದರ್ಶಿ(ಎನ್‌) ಆಗಿಯೂ ಕೆಲಸ ಮಾಡುತ್ತಿದ್ದಾರೆ. ಅರೋರಾ ಅವರ ಕುಟುಂಬವು ಕರ್ತಾರ್‌ಪುರ್‌ನ ಸಿಖ್ ಪವಿತ್ರ ತಾಣಗಳ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.