Published on: January 20, 2023

ಚುಟುಕು ಸಮಾಚಾರ – 20 ಜನವರಿ 2023

ಚುಟುಕು ಸಮಾಚಾರ – 20 ಜನವರಿ 2023

  • ಪ್ರಧಾನಿ ಮೋದಿಯವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೆಕಲ್ ಗ್ರಾಮದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಎಡದಂಡೆ ನಾಲೆಯನ್ನು ಉದ್ಘಾಟಿ ಸಿದರು. ಹೊಸ ಯೋಜನೆಯು ನೀರನ್ನು ಸಂರಕ್ಷಿಸಲು, ನೀರು ಸುಮ್ಮನೆ ಪೋಲಾಗುವುದನ್ನು ಕಡಿಮೆ ಮಾಡಲು ಮತ್ತು ಹೆಚ್ಚು ಸಮಾನವಾದ ವಿತರಣೆಯನ್ನು ನೋಡಲು ಹವಾಮಾನ ಬದಲಾವಣೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಜಲ ಮಿಷನ್ನ ಭಾಗವಾಗಿದೆ.  ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ಪುನ:ಶ್ಚೇತನ ಹಾಗೂ ಆಧುನೀಕರಣದ ಸ್ಕಾಡಾ ಯೋಜನೆ-1 ಏಷ್ಯಾದಲ್ಲಿಯೇ ಅತಿದೊಡ್ಡ ನೀರು ನಿರ್ವಹಣೆಯ ಯೋಜನೆಯಾಗಿದೆ.
  • ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರ ಕಳುಹಿಸಿದ್ದ ಒಂದು ದೇಶ, ಒಂದು ಸಮವಸ್ತ್ರ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
  • ಸಾರ್ವಜನಿಕರ ಭದ್ರತೆ ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕಾಗಿ ರೂಪಿಸಿರುವ ಪೊಲೀಸ್ ಗಸ್ತುವ್ಯವಸ್ಥೆ ಸಂಪೂರ್ಣವಾಗಿ ಸ್ಮಾರ್ಟ್ ಆಗಿದೆ. ಪುಸ್ತಕ ಆಧಾರಿತ ಗಸ್ತುಪದ್ಧತಿಯನ್ನು ಪೂರ್ಣ ಪ್ರಮಾಣದಲ್ಲಿರದ್ದುಪಡಿಸಿ ‘ಸ್ಮಾರ್ಟ್ ಇ-ಬೀಟ್’ ಪದ್ಧತಿಯನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ. ಈವರೆಗೆ ನಗರಗಳಲ್ಲಷ್ಟೇ ರಾತ್ರಿ ಗಸ್ತಿಗೆ ಸ್ಮಾರ್ಟ್ ಇ- ಬೀಟ್ ಪದ್ಧತಿಯಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿಈಗ ಗ್ರಾಮೀಣ ಪ್ರದೇಶದ ಡೇ ಬೀಟ್ಗೂ ವಿಸ್ತರಿಸಲಾಗಿದೆ.
  • ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಎಡಭಾಗದ ಅಂಚಿಗೆ ಹೊಂದಿಕೊಂಡಿರುವ ‘ಮೀಸಲು ಅರಣ್ಯ ಪ್ರದೇಶವಾಗಿದ್ದ ಉತ್ತರೆಗುಡ್ಡ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆ ವನ್ಯಜೀವಿಧಾಮ ಎಂದು ಘೋಷಿಸಿದೆ. ಜೀವ ವೈವಿಧ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಉದ್ದೇಶದಿಂದ 1905ರಲ್ಲಿಯೇ ಇದನ್ನು ಮೀಸಲು ಅರಣ್ಯವೆಂದು ಘೋಷಿಸ ಲಾಗಿತ್ತು’.
  • ಚತ್ತೀಸ್ಗಢದ ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ಕಿತ್ತಳೆ ಬಣ್ಣದ ಬಾವಲಿ ಪತ್ತೆಯಾಗಿದೆ.  ಪೇಂಟೆಡ್ ಬ್ಯಾಟ್ ಎಂದೇ ಕರೆಸಿಕೊಳ್ಳುವ ಈ ಅಪರೂಪದ ಪ್ರಾಣಿ, ಕಿತ್ತಳೆ ಬಣ್ಣದಲ್ಲಿರುತ್ತದೆ ಹಾಗೂ ಕಪ್ಪು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ. ಹಿಂಭಾಗದಲ್ಲಿ ದಟ್ಟವಾದ ಕಿತ್ತಳೆ ಬಣ್ಣದ ಕೂದಲು ಇರುತ್ತದೆ. ವೈಜ್ಞಾನಿಕ ಹೆಸರು : ಕೆರಿವೌಲಾ ಪಿಕ್ಟಾ