Published on: June 30, 2023

ಚುಟುಕು ಸಮಾಚಾರ : 29 ಜೂನ್ 2023

ಚುಟುಕು ಸಮಾಚಾರ : 29 ಜೂನ್ 2023

  • ವಿಶ್ವ ಬ್ಯಾಂಕಿನ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಜಾನ್ ರೂಮ್ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗ ನಾಲ್ಕು ದಿನಗಳ ಕಾಲ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿ, 600 ಕೋಟಿಯ ನೆರವು ನೀಡಲು ವಿಶ್ವಬ್ಯಾಂಕ್ ಸಮ್ಮತಿಸಿದೆ.ಈ ಮೂಲಕ ಇತರ ರಾಜ್ಯಗಳಿಗೆ ತಾಂತ್ರಿಕ ಸಹಯೋಗ ನೀಡಲು ಕರ್ನಾಟಕವನ್ನು ಮಾರ್ಗದರ್ಶಕ ರಾಜ್ಯವಾಗಿಯೂ ಗುರುತಿಸಿದೆ.
  • ಕ್ಯೂಎಸ್ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ 2023 ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಜಾಗತಿಕವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಅಗ್ರ 150 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಟಿ ಬಾಂಬೆ 147ನೇ ಸ್ಥಾನ ಪಡೆದಿದೆ.
  • ಮಾನವ ರಹಿತ ಯುದ್ಧ ಡ್ರೋಣ್ ತಪಸ್ (ಯುಎವಿ) ಸತತ 200 ಹಾರಾಟಗಳನ್ನು ಪೂರ್ಣಗೊಳಿಸಿದ ಸಂದರ್ಭ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರದ ಡಿಆರ್ಡಿಒ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ ರಕ್ಷಣಾ ಪಡೆಗಳ ತ್ರಿಸೇವಾ ತಂಡದ ಮುಂದೆ ಪ್ರಾತ್ಯಕ್ಷಿಕೆ ನಡೆಸಲಾಯಿತು. ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಸಂಪೂರ್ಣ ದೇಶೀಯವಾಗಿ ನಿರ್ಮಿಸಿರುವುದು ಇದರ ಪ್ರಮುಖ ಅಂಶವಾಗಿದೆ.
  • ಜಾಗತಿಕ ಇಂಧನ ಪರಿವರ್ತನಾ ಸೂಚ್ಯಂಕದಲ್ಲಿ ಭಾರತವು ಗಮನಾರ್ಹ ಸಾಧನೆ ಮಾಡಿದ್ದು, 67ನೇ ಸ್ಥಾನಕ್ಕೇರಿದೆ. ಎನರ್ಜಿ ಟ್ರಾನ್ಸಿಶನ್ ಇಂಡೆಕ್ಸ್ನ ಸಮಾನ, ಸುರಕ್ಷಿತ ಮತ್ತು ಸುಸ್ಥಿರ ಆಯಾಮಗಳಲ್ಲಿ ಶಕ್ತಿಯ ಪರಿವರ್ತನೆಯ ವೇಗವನ್ನು ಹೊಂದಿರುವ ಏಕೈಕ ಪ್ರಮುಖ ಆರ್ಥಿಕತೆ ಭಾರತವಾಗಿದೆ ಎಂದು WEF ಹೇಳಿದೆ. ಒಟ್ಟು 120 ದೇಶಗಳ ಪಟ್ಟಿಯಲ್ಲಿ ಸ್ವೀಡನ್ ಅಗ್ರಸ್ಥಾನದಲ್ಲಿದ್ದು, ಡೆನ್ಮಾರ್ಕ್, ನಾರ್ವೆ, ಫಿನ್ಲ್ಯಾಂಡ್ ಮತ್ತು ಸ್ವಿಟ್ಜರ್ಲೆಂಡ್ ಮೊದಲ ಐದು ಸ್ಥಾನಗಳಲ್ಲಿವೆ.
  • ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ದಂಪತಿಗೆ ವಿವಿಧ ವಸ್ತುಗಳನ್ನು ಉಡುಗೊರೆಯಾಗಿ ಭಾರತೀಯ ಸಂಸ್ಕೃತಿ ಬಿಂಬಿಸುವ 10 ವಸ್ತುಗಳಿರುವ ಸಹಸ್ರ ಚಂದ್ರ ದರ್ಶನದ ದಶ ದಾನ ಉಡುಗೊರೆಯಾಗಿ ನೀಡಿದ್ದಾರೆ. ಜೋ ಬೈಡೆನ್ ಅವರ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್ಗೆ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್ನ ಹಸಿರು ವಜ್ರವನ್ನು ನೀಡಿದ್ದಾರೆ.