Published on: October 4, 2023

ಚುಟುಕು ಸಮಾಚಾರ : 3 ಅಕ್ಟೋಬರ್ 2023

ಚುಟುಕು ಸಮಾಚಾರ : 3 ಅಕ್ಟೋಬರ್ 2023

  • ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ಆರ್ಎಲ್)ದಿಂದ ಅಭಿವೃ ದ್ಧಿಪಡಿಸಿರುವ ‘ಮಣ್ಣಿನಲ್ಲಿ ಕರಗುವ ನೀರಿನ ಬಾಟಲಿ’ಗಳನ್ನು ರಕ್ಷಣಾ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಅಜಯ್ಭಟ್ ಬಿಡುಗಡೆ ಮಾಡಿದರು. ಉದ್ದೇಶ: ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ತಡೆಯುವುದು. ‘ಇಂಜೆಕ್ಷನ್ ಬ್ಲೋ ಮೌಲ್ಡಿಂಗ್ ಟೆಕ್ನಿಕ್’ ಬಳಸಿ ‘ಪಾಲಿ ಲಾಕ್ಟಿಕ್ ಆ್ಯಸಿಡ್’ನಿಂದ 250 ಮಿ.ಲೀ . ಸಾಮರ್ಥ್ಯ ದ ಬಾಟಲಿಯನ್ನು ಮಂಗಳೂರಿನ ಕೊಂಕಣ್ ಸ್ಪೆಷಾಲಿಟಿ ಪಾಲಿ ಪ್ರಾಡಕ್ಟ್ ಕಂಪನಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ನೀರು, ಇತರ ಪಾನೀಯಗಳನ್ನು ಹಾಕಲು ಸುರಕ್ಷಿತ. ಬಾಟಲಿಯ ಕ್ಯಾಪ್ ಹಾಗೂ ಲೇಬಲ್ ಕೂಡ ಮಣ್ಣಿನಲ್ಲಿ ಕರಗುತ್ತದೆ.
  • ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳವನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಣೆ ಮಾಡಲಾಗಿದೆ. ಬೀದರ್, ಕಲಬುರ್ಗಿ, ಮಂಗಳೂರು, ಮೈಸೂರು ಮತ್ತು ಧರ್ಮಸ್ಥಳವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರಗಳನ್ನಾಗಿ ಮಾಡಲು ಆಯ್ಕೆ ಮಾಡಲಾಗಿತ್ತು.
  • ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸಲು ಭಾರತೀಯ ವಾಯುಪಡೆ (ಐಎಎಫ್) ಸ್ವದೇಶೀ ನಿರ್ಮಿತ 156 ಪ್ರಚಂಡ ಲಘು ಯುದ್ಧ ಹೆಲಿಕಾಫ್ಟರ್ ಗಳನ್ನು ಖರೀದಿಸಲು ಮುಂದಾಗಿದೆ. ಭಾರತೀಯ ಸೇನೆ ಹಾಗೂ ವಾಯುಪಡೆಗಳು ಈಗಾಗಲೇ 15 ಪ್ರಚಂಡ ಹೆಲಿಕಾಫ್ಟರ್ ಗಳನ್ನು ಖರೀದಿಸಿದೆ. ಐಎಎಫ್ ಪ್ರಚಂಡ ಹೆಲಿಕಾಫ್ಟರ್ ಗಳ ಖರೀದಿಗೆ ಹೆಚ್ಎಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ.
  • ರಿಯಲ್ ಎಸ್ಟೇಟ್ನ CII-CBRE ವರದಿಯ ಪ್ರಕಾರ, ಭಾರತದ ಗ್ರೀನ್ ಆಫೀಸ್ ಸ್ಪೇಸ್ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ, ಉದ್ಯಾನ ನಗರಿ ಬೆಂಗಳೂರು ಭಾರತದ ಗ್ರೀನ್ ಆಫೀಸ್ ಸ್ಪೇಸ್(ಹಸಿರು ಕಚೇರಿ ಸ್ಥಳಾವಕಾಶ)ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ, ದೇಶದ ಶೇಕಡಾ 30 ರಷ್ಟು ಅಂದರೆ 104.5 ಮಿಲಿಯನ್ ಚದರ ಅಡಿ ಹಸಿರು ಕಚೇರಿಗಳನ್ನು ಸಿಲಿಕಾನ್ ಸಿಟಿ ಹೊಂದಿದೆ.
  • C-295 ಸಾರಿಗೆ ವಿಮಾನವನ್ನು ಔಪಚಾರಿಕವಾಗಿ ವಾಯುಪಡೆಗೆ ಸೇರಿಸಲಾಯಿತು. ಘಾಜಿಯಾಬಾದ್ನ ಹಿಂಡನ್ ಏರ್ಬೇಸ್ನಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಿಮಾನವನ್ನು ವಾಯುಪಡೆಗೆ ಹಸ್ತಾಂತರಿಸಿದರು. ಈ ವಿಮಾನವನ್ನು ಭಾರತದಲ್ಲಿ ತಯಾರಿಸಲು ಏರ್ಬಸ್ ಮತ್ತು ಟಾಟಾ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಏರ್ಬಸ್ನ ಸಹಭಾಗಿತ್ವದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಸಿದ್ಧಪಡಿಸಿದ ಸೆಟಪ್ನಲ್ಲಿ 40 ವಿಮಾನಗಳನ್ನು ತಯಾರಿಸಲಾಗುವುದು. ಏರ್ಬಸ್ ಸ್ಪೇನ್ನಲ್ಲಿ ತನ್ನ ಸ್ಥಾಪನೆಯಿಂದ ಭಾರತಕ್ಕೆ 16 ಸಿದ್ಧ ವಿಮಾನಗಳನ್ನು ಪೂರೈಸುತ್ತದೆ.
  • ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸಹಯೋಗದೊಂದಿಗೆ ಈ ವರ್ಷ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ಸ್ವಚ್ಛತಾ ಹಿ ಸೇವಾ (SHS) ಅಭಿಯಾನವನ್ನು ಆಚರಿಸಲಾಯಿತು. ಸ್ವಚ್ಛ ಭಾರತ್ ದಿವಸ್ (2ನೇ ಅಕ್ಟೋಬರ್) ಗೆ ಪೂರ್ವಭಾವಿಯಾಗಿ ಸಂಪೂರ್ಣ ಸ್ವಚ್ಛ ಗ್ರಾಮದ ಪ್ರಾಮುಖ್ಯತೆಯನ್ನು ಪ್ರಸಾರ ಮಾಡಲು;ನೈರ್ಮಲ್ಯದ ಪರಿಕಲ್ಪನೆಯನ್ನು ಬಲಪಡಿಸಲು; ರಾಷ್ಟ್ರವ್ಯಾಪಿ ಪ್ರತಿಯೊಬ್ಬರು   ಭಾಗವಹಿಸುವಹಿಸಲು ಕರೆ ನೀಡಿತ್ತು. ಥೀಮ್ : ‘ಕಸ ಮುಕ್ತ ಭಾರತ ‘
  • ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿ 2023 ನೇ ಸಾಲಿನ ನೋಬೆಲ್ ಪ್ರಶಸ್ತಿಯನ್ನು ಕ್ಯಾಟಲಿನ್ ಕಾರಿಕ್ ಮತ್ತು ಡ್ರೂ ವೈಸ್ಮನ್ ಗೆ ಘೋಷಿಸಲಾಗಿದೆ. ಎಂಆರ್ ಎನ್ಎ ಕೋವಿಡ್ ಲಸಿಕೆಯ ಆವಿಷ್ಕಾರಕ್ಕೆ ನೀಡಲಾಗುತ್ತಿದೆ. ಕತಾಲಿನ್ ಕರಿಕೋ ಅವರು ಹಂಗೆರಿ ದೇಶದವರು. ಡ್ರೀವ್ ವಿಸ್ಮನ್ ಅವರು ಅಮೆರಿಕ ದೇಶದವರಾಗಿದ್ದರೆ.