Published on: October 22, 2023

ಚುಟುಕು ಸಮಾಚಾರ:19 ಅಕ್ಟೋಬರ್ 2023

ಚುಟುಕು ಸಮಾಚಾರ:19 ಅಕ್ಟೋಬರ್ 2023

  • ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸತತ ಮೂರು ತಿಂಗಳಿನಿಂದ ವಿಶ್ವದ ಅತ್ಯಂತ ಸಮಯದ ಪರಿಪಾಲನೆ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಸಿರಿಯಮ್ನ ‘ದಿ ಆನ್-ಟೈಮ್ ಫಾರ್ಮೆನ್ಸ್ ಮಾಸಿಕ ವರದಿ’ ತಿಳಿಸಿದೆ. ವರದಿ ಪ್ರಕಾರ, ಆನ್-ಟೈಮ್ ನಿರ್ಗಮನ ಶ್ರೇಯಾಂಕ ನಿಗದಿತ ಸಮಯದ 15 ನಿಮಿಷಗಳೊಗೆ ನಿರ್ಗಮಿಸಿದ ವಿಮಾನಗಳ ಶೇಕಡಾವಾರು ಸಂಖ್ಯೆ ಅಳೆಯಲಾಗುವುದು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 88 ಮಾರ್ಗಗಳನ್ನು ಒಳಗೊಂಡಿರುವ ನೆಟ್ವರ್ಕ್ ಮತ್ತು 35 ಏರ್ಲೈನ್ಗಳೊಂದಿಗೆ ಪಾಲುದಾರಿಕೆ ಹೊಂದಿದೆ. 2022-23ರಲ್ಲಿಕೆಂಪೇಗೌಡ ವಿಮಾನ ನಿಲ್ದಾಣ 31.91 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಮೂಲಕ ಭಾರತದ ಮೂರನೇ ಅತ್ಯಂತ ಹೆಚ್ಚು ಪ್ರಯಾಣಿಕರನ್ನು ಹೊಂ ದಿದ ವಿಮಾನ ನಿಲ್ದಾಣ ಎನಿಸಿಕೊಂಡಿದೆ.
  • ಗಡಿಗಳಲ್ಲಿನ ಗಸ್ತುಹಾಗೂ ದಾಳಿಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ 6 ಗಸ್ತು ದೋಣಿಗಳು, 8 ‘ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್’ (ಎಲ್ಸಿಎ) ಹಾಗೂ 118 ಕಣ್ಗಾವಲು ವ್ಯವಸ್ಥೆಗಳ ಖರೀದಿಗೆ ಭಾರತೀಯ ಸೇನೆ ಮುಂದಾಗಿದೆ.
  • ನೈಸರ್ಗಿಕ ರಬ್ಬರ್ ಉತ್ಪಾದಕ ರಾಷ್ಟ್ರಗಳ ಸಂಘದ ( ANRPC ) ವಾರ್ಷಿಕ ರಬ್ಬರ್ ಸಮ್ಮೇಳನವು  ಗುವಾಹಟಿಯಲ್ಲಿ  ನಡೆಯಿತು. ಆಟೋಮೋಟಿವ್ ಟೈರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​(ATMA ) ಬೆಂಬಲದೊಂದಿಗೆ ಈಶಾನ್ಯ ರಾಜ್ಯಗಳಲ್ಲಿ ರಬ್ಬರ್ ಕೃಷಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ‘INROAD’ ಯೋಜನೆಯನ್ನು  ಸಮ್ಮೇಳನ ದಲ್ಲಿ ಚರ್ಚಿಸಲಾಯಿತು.
  • ಕೊಚ್ಚಿಯ ದಕ್ಷಿಣ ನೌಕಾ ಕಮಾಂಡ್ (SNC) ದಕ್ಷಿಣ ಜೆಟ್ಟಿಯಿಂದ ಎರಡು ತಿಂಗಳ ಅವಧಿಗೆ ಸಮುದ್ರಶಾಸ್ತ್ರೀಯ ಸಂಶೋಧನಾ ನೌಕೆ INS ಸಾಗರಧ್ವನಿಯನ್ನು ನಿಯೋಜಿಸುವ  ಮೂಲಕ  ಸಾಗರ್ ಮೈತ್ರಿ (SM) ಮಿಷನ್-4  ಅನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ಮಿಷನ್ (SM-4) ಯೋಜನೆಯು ಉತ್ತರ ಅರೇಬಿಯನ್ ಸಮುದ್ರದಲ್ಲಿ INS ಸಾಗರಧ್ವನಿಯಲ್ಲಿ ವೈಜ್ಞಾನಿಕ ನಿಯೋಜನೆಗಳನ್ನು ಒಳಗೊಂಡಿದೆ ಮತ್ತು ಓಮನ್‌ನ ಸುಲ್ತಾನ್ ಖಾಬೂಸ್ ವಿಶ್ವವಿದ್ಯಾಲಯದಲ್ಲಿ ಸಮುದ್ರ ವಿಜ್ಞಾನ ಮತ್ತು ಮೀನುಗಾರಿಕೆ ಇಲಾಖೆಯೊಂದಿಗೆ ಸಹಯೋಗದ ಸಂಶೋಧನಾ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತದೆ. INS ಸಾಗರಧ್ವನಿ ಬಗ್ಗೆ:ಇದು ಕೊಚ್ಚಿಯ DRDO ದ ನೇವಲ್ ಫಿಸಿಕಲ್ & ಓಷಿಯಾನೋಗ್ರಾಫಿಕ್ ಲ್ಯಾಬೊರೇಟರಿ (NPOL) ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಸಮುದ್ರದ ಅಕೌಸ್ಟಿಕ್ ಸಂಶೋಧನಾ ಹಡಗು ಮತ್ತು GRSE Ltd ನಿಂದ ಸ್ಥಳೀಯವಾಗಿ ನಿರ್ಮಿಸಲಾಗಿದೆ.
  • ವಿದೇಶಾಂಗ ಸಚಿವಾಲಯದ ವಕ್ತಾರರಾಗಿದ್ದ ಅರಿಂದಮ್ ಬಾಗ್ಚಿ ಅವರನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿಯಾಗಿ ಕೇಂದ್ರ ಸರ್ಕಾರವು ನೇಮಕ ಮಾಡಿದೆ. 1995ನೇ ತಂಡದ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿರುವ ಬಾಗ್ಚಿ ಅವರು ಮಾರ್ಚ್‌ 2020ರಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾಗಿದ್ದು, ಜಿನೀವಾದಲ್ಲಿ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿಯಾಗಿ ಅವರು ಶೀಘ್ರದಲ್ಲಿಯೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಾಗ್ಚಿ  ಈ ಹಿಂದೆ ಕ್ರೊವೇಷಿಯಾದಲ್ಲಿ  ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವ ಹಿಸಿದ್ದರು.
  • ರೈತ ಮಹಿಳೆಯರೇ ನಡೆಸುವ ತಿರುಪತಿ ಮೂಲದ ಶ್ರೀಜಾ ಹಾಲು ಉತ್ಪಾದಕರ ಕಂಪನಿಯು ಷಿಕಾಗೊದಲ್ಲಿ ನಡೆದ ಜಾಗತಿಕ ಡೈರಿ ಸಮಾವೇಶದಲ್ಲಿ ಮಹಿಳಾ ಸಬಲೀಕರಣ ವಿಭಾಗದಲ್ಲಿನ ವಿನೂತನ ಪ್ರಯತ್ನಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದೆ. ಭಾರತದಿಂದ ಈ ಪ್ರಶಸ್ತಿಗಾಗಿ ನಾಮನಿರ್ದೇಶಿತಗೊಂಡ ಮೂರು ಸಂಸ್ಥೆಗಳಲ್ಲಿ ಶ್ರೀಜಾ ಕೂಡಾ ಒಂದು. ಎನ್ಡಿಎಸ್ ನಡೆಸುವ ಉದಯಪುರದ ಆಶಾ ಹಾಲು ಉತ್ಪಾದಕರ ಕಂಪನಿ ಮತ್ತು ಗುಜರಾತ್ ಹಾಲು ಮತ್ತು ಮಾರುಕಟ್ಟೆ ಸಹಕಾರ ಒಕ್ಕೂಟದ ಹೆಸರು ಶಿಫಾರಸುಗೊಂಡಿತ್ತು. ಶ್ರೀಜಾ ಹಾಲು ಒಕ್ಕೂಟವು ಆಂಧ್ರ ಪ್ರದೇಶದ 11 ಜಿಲ್ಲೆಗಳು, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತನ್ನ ವಹಿವಾಟು ಹೊಂದಿದೆ. ಪ್ರತಿ ನಿತ್ಯ 5.5 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ವಾರ್ಷಿಕ ರೂ. 1 ಸಾವಿರ ಕೋ ಟಿ ವಹಿವಾಟು ನಡೆಸುತ್ತಿದೆ. 2023 ರಜಾಗತಿಕ ಡೈರಿ ಸಮಾವೇಶದ ವಿಷಯ “BE Dairy – Boundless Potential, Endless Possibilities,” ಸಮಾವೇಶಯು 1993 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ಬಾರಿಗೆ ನಡೆಯಿತು