Published on: March 11, 2023

ಡ್ರ್ಯಾಗನ್‌ ಫ್ರೂಟ್‌ ಸಂಶೋಧನೆ ಹಾಗೂ ಉತ್ಕೃಷ್ಟತಾ ಕೇಂದ್ರ

ಡ್ರ್ಯಾಗನ್‌ ಫ್ರೂಟ್‌ ಸಂಶೋಧನೆ ಹಾಗೂ ಉತ್ಕೃಷ್ಟತಾ ಕೇಂದ್ರ


Wucheng ಸುದ್ದಿಯಲ್ಲಿ ಏಕಿದೆ? buy ivermectin pills ಬೆಂಗಳೂರಿನಲ್ಲಿ ಡ್ರ್ಯಾಗನ್‌ ಫ್ರೂಟ್‌ ಸಂಶೋಧನೆ ಹಾಗೂ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸುವುದಾಗಿ ಕೇಂದ್ರ ಕೃಷಿ ಸಚಿವಾಲಯ ಪ್ರಕಟಿಸಿದೆ. 


ಮುಖ್ಯಾಂಶಗಳು

  • ಬೆಂಗಳೂರಿನ ಹಿರೇಹಳ್ಳಿಯ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಾಯೋಗಿಕ ಕೇಂದ್ರದಲ್ಲಿ ಸ್ಥಾಪನೆಯಾಗಲಿದೆ.
  • ಕೇಂದ್ರ ಸರ್ಕಾರದ ಪ್ರಾಯೋಜಿತ ಇಂಟೆಗ್ರೇಟೆಡ್‌ ಡೆವಲಪ್‌ಮೆಂಟ್‌ ಆಫ್‌ ಹಾರ್ಟಿಕಲ್ಚರ್‌ ಯೋಜನೆಯಡಿ ಈ ಕೇಂದ್ರವನ್ನು ಪ್ರಾರಂಭಿಸಲಾಗುತ್ತದೆ.

ಉದ್ದೇಶ

  • ಡ್ರ್ಯಾಗನ್‌ ಫ್ರೂಟ್‌ ಉತ್ಪಾದನೆ, ಮೌಲ್ಯವರ್ಧನೆ ಮತ್ತು ರೈತ ಸಮುದಾಯದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ಕೇಂದ್ರವು ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ.

ಡ್ರ್ಯಾಗನ್‌ ಫ್ರೂಟ್‌

  • ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಹೆಸರು ಹೈಲೋಸೆರೆಸುಂಡಾಟಸ್, ಇದನ್ನು ಮುಖ್ಯವಾಗಿ ಮಲೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಬೆಳೆಯಲಾಗುತ್ತದೆ.
  • ಇದರಲ್ಲಿ ವಿಟಮಿನ್‌ ಸಿ, ಬಿ1, ಬಿ2, ಬಿ3 ಮತ್ತು ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳು ಸಮೃದ್ಧವಾಗಿದೆ

ಇಂಟೆಗ್ರೇಟೆಡ್‌ ಡೆವಲಪ್‌ಮೆಂಟ್‌ ಆಫ್‌ ಹಾರ್ಟಿಕಲ್ಚರ್‌ ಯೋಜನೆ (MIDH)

  • 2014 -15 ರಲ್ಲಿ ಹಸಿರು ಕ್ರಾಂತಿ – ಕೃಷ್ಣೋನ್ನತಿ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗಿದೆ.
  • ಹಣ್ಣುಗಳು, ತರಕಾರಿಗಳು, ಬೇರು ಮತ್ತು ಗಡ್ಡೆ ಬೆಳೆಗಳು, ಅಣಬೆಗಳು, ಮಸಾಲೆಗಳು, ಹೂವುಗಳು, ಆರೊಮ್ಯಾಟಿಕ್ ಸಸ್ಯಗಳು, ತೆಂಗಿನಕಾಯಿ, ಗೋಡಂಬಿ, ಕೋಕೋ ಮತ್ತು ಬಿದಿರುಗಳನ್ನು ಒಳಗೊಂಡಿರುವ ತೋಟಗಾರಿಕೆ ವಲಯದ ಸಮಗ್ರ ಬೆಳವಣಿಗೆಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
  • ನಿಧಿಯ ಹಂಚಿಕೆ: MIDH ಅಡಿಯಲ್ಲಿ, ಭಾರತ ಸರ್ಕಾರ (GoI) ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒಟ್ಟು ವೆಚ್ಚದಲ್ಲಿ 60% ಮತ್ತು 40% ಪಾಲನ್ನು ರಾಜ್ಯ ಸರ್ಕಾರಗಳು ನೀಡುತ್ತವೆ.
  • ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳಗಳಿಗೆ ಭಾರತ ಸರ್ಕಾರ 90% ನೀಡುತ್ತದೆ.