Published on: April 15, 2023

ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ

ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ

ಸುದ್ದಿಯಲ್ಲಿ ಏಕಿದೆ? ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನ ಹಲಸೂರು ಬಜಾರ್ ನಲ್ಲಿ ನಿರ್ಮಾಣವಾಗುತ್ತಿದೆ.

ಮುಖ್ಯಾಂಶಗಳು

  • ಇತರೆ ಸಾಮಾನ್ಯ ಅಂಚೆ ಕಚೇರಿ ನಿರ್ಮಿಸಲು ಮಾಡಬೇಕಿರುವ ವೆಚ್ಚಕ್ಕಿಂತ ಈ ತಂತ್ರಜ್ಞಾನದಿಂದ ಶೇಕಡ 30-40 ಕಡಿಮೆ ವೆಚ್ಚದಲ್ಲಿ ಪೋಸ್ಟ್‌ ಆಫೀಸ್‌ ನಿರ್ಮಿಸಬಹುದು.
  • ಕಟ್ಟಡ ನಿರ್ಮಾಣದ ಮೇಲ್ವಿಚಾರಣೆಗೆ ಇಲಾಖೆಯು ಐಐಟಿ-ಮದ್ರಾಸ್‌ನ ತಾಂತ್ರಿಕ ತಜ್ಞರನ್ನೂ ನೇಮಿಸಿಕೊಂಡಿದೆ.
  • ನಿರ್ಮಾಣ : ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಯೋಜನೆಗೆ ಅನುಮೋದನೆ ನೀಡಿದ್ದು, ಇದರ ನಿರ್ಮಾಣವನ್ನು ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾದ ಲಾರ್ಸೆನ್ ಮತ್ತು ಟೂಬ್ರೊ ನಿರ್ವಹಿಸುತ್ತಿದೆ.
  • ದೇಶದ 3ಡಿ ಪ್ರಿಂಟಿಂಗ್ ನಿರ್ಮಾಣಗಳನ್ನು ಮಾಡುವ ಏಕೈಕ ಕಂಪನಿ ಲಾರ್ಸೆನ್ ಮತ್ತು ಟೂಬ್ರೊ ಆಗಿರುವುದರಿಂದ ಈ ಯೋಜನೆಯನ್ನು ಲಾರ್ಸೆನ್ ಮತ್ತು ಟೂಬ್ರೊ ನೀಡಲಾಗಿದೆ.