Published on: March 6, 2023

ಬಂಬೂ ಬ್ಯಾರಿಯರ್

ಬಂಬೂ ಬ್ಯಾರಿಯರ್


ಸುದ್ದಿಯಲ್ಲಿ ಏಕಿದೆ? ಜಗತ್ತಿನಲ್ಲಿಯೇ ಇದೇ ಮೊದಲ ಬಾರಿಗೆ ಭಾರತದಲ್ಲಿ  ಮಹಾರಾಷ್ಟ್ರದ ಚಂದ್ರಾಪುರ ಹಾಗೂ ಯಾವತ್ಮಲ್ ಜಿಲ್ಲೆಗಳನ್ನು ಕೂಡಿಸುವ  ವಾನಿ–ವರೋರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದಿರಿನಿಂದ ನಿರ್ಮಿಸಲಾದ 200 ಮೀಟರ್ ವರೆಗಿನ ಅಪಘಾತ ತಡೆಗೋಡೆಯನ್ನು ನಿರ್ಮಿಸಲಾಗಿದೆ.


ಮುಖ್ಯಾಂಶಗಳು

 • ಸಾಮಾನ್ಯವಾಗಿ ಹೆದ್ದಾರಿ ಬದಿ ತಡೆಗೋಡೆಗಳಿಗೆ ಬಲಿಷ್ಠವಾದ ಸ್ಟೀಲ್, ಅಲ್ಯುಮಿನಿಯಂ, ಸಿಮೆಂಟ್ ಬಳಸಲಾಗುತ್ತದೆ.
 • ಆತ್ಮ ನಿರ್ಭರ ಭಾರತ್ ಪರಿಕಲ್ಪನೆಯಡಿ ಈ ಬಿದಿರಿನ ತಡೆಗೋಡೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ನಿರ್ಮಿಸಿದೆ.
 • ವಾಣಿ-ವರೋರಾ ಹೆದ್ದಾರಿಯಲ್ಲಿ ಸ್ಥಾಪಿಸಲಾದ ವಿಶ್ವದ ಮೊದಲ ಬಿದಿರಿನ ಅಪಘಾತ ತಡೆಗೋಡೆಯಾಗಿದೆ.
 • “ಇದು ಇಂದೋರ್‌ನ ಪಿತಾಂಪುರ್‌ನಲ್ಲಿರುವ ರಾಷ್ಟ್ರೀಯ ಆಟೋಮೋಟಿವ್ ಟೆಸ್ಟ್ ಟ್ರ್ಯಾಕ್‌ಗಳಂತಹ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಕಠಿಣ ಪರೀಕ್ಷೆಗೆ ಒಳಪಟ್ಟಿದೆ ಮತ್ತು ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಲ್ಲಿ ನಡೆಸಿದ ಅಗ್ನಿಶಾಮಕ ರೇಟಿಂಗ್ ಪರೀಕ್ಷೆಯಲ್ಲಿ 1   ರ್ಯಾಂಕ್ ಪಡೆದಿದೆ.  ಮೇಲಾಗಿ ಇದು ಇಂಡಿಯನ್ ರೋಡ್ ಕಾಂಗ್ರೆಸ್ನಿಂದ ಮಾನ್ಯತೆ ಪಡೆದಿದೆ.

ಪ್ರಯೋಜನ

 • ಈ ತಡೆಗೋಡೆಯ ತಯಾರಿಕೆಯಲ್ಲಿ ಬಳಸಲಾಗುವ ಬಿದಿರಿನ ಜಾತಿಯೆಂದರೆ ಬಂಬುಸಾ ಬಾಲ್ಕೋವಾ, ಇದನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸಲಾಗುತ್ತದೆ ಮತ್ತು ಬಳಿಕ ಹೆಚ್ಚಿನ ಸಾಂದ್ರತೆ ಹೊಂದಿರುವ ಪಾಲಿ ಈಥೈಲೀನ್‌ ಅನ್ನು ಇದಕ್ಕೆ ಬಳಿಯಲಾಗಿದೆ. ಈ ಮೂಲಕ ಅದನ್ನು ಹೆಚ್ಚು ಶಕ್ತಿಯುತವಾಗುವಂತೆ ಮಾಡಲಾಗಿದೆ..

ಪರಿಸರ ಸ್ನೇಹಿ

 • ಬಿದಿರನ್ನು ಹೆಚ್ಚಾಗಿ ವಾಣಿಜ್ಯಿಕ ಉದ್ದೇಶಕ್ಕೇ ಬೆಳೆಸಲಾಗುತ್ತದೆ. ಆದರೆ ಕಬ್ಬಿಣದ ಅದಿರು ತೆಗೆಯಲು ಸಾಕಷ್ಟು ಶ್ರಮ ಬೇಕು ಹಾಗೂ ಗಣಿಗಾರಿಕೆ ಪರಿಸರಕ್ಕೆ ಮಾರಕ ಕೂಡ. ಹೀಗಾಗಿ, ‘ಬಿದಿರು ಬಳಸಿ ಇಂಥ ತಡೆಗೋಡೆ ನಿಮಾರ್ಣವು ಪರಿಸರ ಸ್ನೇಹಿ ಹಾಗೂ ಉಕ್ಕಿಗೆ ಪರ್ಯಾಯ. ಗ್ರಾಮೀಣ ಭಾಗದ ಕೃಷಿ ಸ್ನೇಹಿ ಕೈಗಾರಿಕೆಗೆ ನೆರವು ನೀಡುತ್ತದೆ’
 • ಬಿದಿರಿನ ತಡೆಗೋಡೆಗಳ ಮರುಬಳಕೆ ಮಾರಾಟ ಮೌಲ್ಯವು 50-70% ಆಗಿದ್ದರೆ, ಉಕ್ಕಿನ ತಡೆಗೋಡೆಗಳ ಮರುಬಳಕೆ ಮಾರಾಟ ಮೌಲ್ಯವು 30-50% ಆಗಿದೆ.

ನಿಮಗಿದು ತಿಳಿದಿರಲಿ

 • ಬಂಬುಸಾ ಬಾಲ್ಕೂವಾ ಭಾರತೀಯ ಉಪಖಂಡದಿಂದ ಇಂಡೋ-ಚೀನಾದಲ್ಲಿ ಸ್ಥಳೀಯವಾಗಿ ಬೆಳೆಯುವ ಬಿದಿರು.
 • ಕುಟುಂಬ: ಪೊಯೇಸೀ
 • ಎತ್ತರ: 25 ಮೀಟರ್ (80 ಅಡಿ),
 • ದಪ್ಪ: 150 ಮಿಲಿಮೀಟರ್ (6 ಇಂಚು)
 • ಬಂಬುಸಾ ಬಾಲ್ಕೂದ ಉದ್ದ ಮತ್ತು ಅದರ ಬಲವು ನಿರ್ಮಾಣ ಉದ್ಯಮಕ್ಕೆ ಉಪಯುಕ್ತವಾಗಿದೆ.