Published on: April 28, 2023

ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಮೊದಲ ಚಲನಚಿತ್ರ

ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಮೊದಲ ಚಲನಚಿತ್ರ

ಸುದ್ದಿಯಲ್ಲಿ  ಏಕಿದೆ? ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಮೊದಲ ಚಲನಚಿತ್ರ ‘ದಿ ಚಾಲೆಂಜ್’ ರಷ್ಯಾದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತು.

ಚಿತ್ರದ ವಿವರ

  • ಗಾಯಗೊಂಡ ಗಗನಯಾತ್ರಿಯನ್ನು ರಕ್ಷಿಸಲು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ವೈದ್ಯರನ್ನು ಕಳುಹಿಸುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ.
  • ಐಎಸ್ಎಸ್ನ ಕಕ್ಷೆಯ ಪ್ರಯೋಗಾಲಯದಲ್ಲಿ ದೃಶ್ಯಗಳನ್ನು ಚಿತ್ರೀ ಕರಿಸಲು ಅಕ್ಟೋ ಬರ್ 2021ರಲ್ಲಿ 12 ದಿನಗಳ ಅವಧಿಗೆ ನಟಿ ಮತ್ತು ಚಲನಚಿತ್ರ ನಿರ್ದೇಶಕರನ್ನು ರಷ್ಯಾ ಬಾಹ್ಯಾಕಾಶಕ್ಕೆ ಕಳುಹಿಸಿತ್ತು.
  • 2020ರಲ್ಲಿ ಮಿಷನ್ ಇಂಪಾಸಿಬಲ್ ಸ್ಟಾರ್ ಟಾಮ್ ಕ್ರೂಸ್ ಅವರು ನಾಸಾ ಮತ್ತು ಎಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ನೊಂದಿಗೆ ಘೋಷಿಸಿದ ಹಾಲಿವುಡ್ ಸಿನಿಮಾ ಹಾಲಿವುಡ್ಯೋ ಜನೆಗೂ ಮುನ್ನವೇ ರಷ್ಯಾ ಸಿನಿಮಾತೆರೆಗೆ ಬರುವ ಮೂಲಕ ಹೊಸ ದಾಖಲೆ ಬರೆದಿದೆ. ‘ಬಾಹ್ಯಾಕಾಶದ ಕಕ್ಷೆಯಲ್ಲಿ ಚಲನಚಿತ್ರವನ್ನು ಚಿತ್ರೀಕರಿಸಿದ ಮೊದಲಿಗರಾಗಿದ್ದಾರೆ.