Published on: November 4, 2022

ಬೃಹತ್ ಹೂಡಿಕೆದಾರರ ನೆರವಿಗೆ ಪ್ರತ್ಯೇಕ ಪ್ರಾಧಿಕಾರ:

ಬೃಹತ್ ಹೂಡಿಕೆದಾರರ ನೆರವಿಗೆ ಪ್ರತ್ಯೇಕ ಪ್ರಾಧಿಕಾರ:

buy Gabapentin online usa ಸುದ್ದಿಯಲ್ಲಿ ಏಕಿದೆ? 

can you order Gabapentin online ರಾಜ್ಯದಲ್ಲಿ ಬಂಡವಾಳ ಹೂಡಿಕೆಗಿರುವ ತೊಡಕುಗಳನ್ನು ತ್ವರಿತಗತಿಯಲ್ಲಿ ನಿವಾರಿಸಿ, ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡುವ ‘ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಮುಖ್ಯಾಂಶಗಳು

  • ಈ ಪ್ರಾಧಿಕಾರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ (ಕೆಐಎಡಿಬಿ) ಪೂರಕವಾಗಿರುತ್ತದೆ. ಆರಂಭದಲ್ಲಿ ಕೆಐಎಡಿಬಿಯೇ ಉಸ್ತುವಾರಿ ವಹಿಸುತ್ತದೆ .
  • ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ, ವಸಾಹತುಗಳ ಸ್ಥಾಪನೆ, ಅವುಗಳ ಕಾರ್ಯಾಚರಣೆ, ನಿಯಂತ್ರಣ, ನಿರ್ವಹಣೆಯನ್ನು ಪ್ರಾಧಿಕಾರವೇ ನೋಡಿಕೊಳ್ಳಲಿದೆ.
  • ಎಲ್ಲೆಲ್ಲಿ ಬಂಡವಾಳ ಹೂಡಿಕೆ ಮಾಡಲು ಸಾಧ್ಯವಿದೆ ಎಂದು ಜಾಗವನ್ನು ಗುರುತಿಸುವ ಜವಾಬ್ದಾರಿಯನ್ನು ಪ್ರಾಧಿಕಾರಕ್ಕೇ ನೀಡಲಾಗುತ್ತದೆ.
  • ಭೂಸ್ವಾಧೀನದಿಂದ ಹಿಡಿದು ತೆರಿಗೆ ನಿಗದಿ ಮತ್ತು ಸಂಗ್ರಹದವರೆಗೆ ಎಲ್ಲವನ್ನೂ ಪ್ರಾಧಿಕಾರವೇ ನೋಡಿಕೊಳ್ಳುತ್ತದೆ. ಆರಂಭದಲ್ಲಿ ತುಮಕೂರು ಮತ್ತು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ವಿಶೇಷ ಹೂಡಿಕೆ ವಲಯ ಸ್ಥಾಪಿಸಲಾಗುವುದು
  • ಪ್ರಾಧಿಕಾರ ಸಂಗ್ರಹಿಸಿದ ತೆರಿಗೆಯಲ್ಲಿ ಶೇ 30 ರಷ್ಟನ್ನು ಅಲ್ಲಿನ ಸ್ಥಳೀಯ ಸಂಸ್ಥೆಗೆ ಪಾವತಿ ಮಾಡಬೇಕಾಗುತ್ತದೆ.

ಉದ್ದೇಶ

  • ಬಂಡವಾಳ ಹೂಡಿಕೆಗೆ ಇನ್ನೂ ಹಲವು ಅಡೆತಡೆಗಳು ಇವೆ. ಇದರಿಂದಾಗಿ ಹೂಡಿಕೆದಾರರಿಗೆ ತ್ವರಿತಗತಿಯಲ್ಲಿ ಅನುಮತಿ ಸಿಗುತ್ತಿಲ್ಲ. ಹೊಸ ಕಾಯ್ದೆಯಿಂದ ರಾಜ್ಯ ಮಟ್ಟದ ಪ್ರಾಧಿಕಾರವೊಂದನ್ನು ರಚಿಸಲಾಗುವುದು.
  • ಅಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ನಿರ್ದೇಶಕರೂ ಸದಸ್ಯರಾಗಿರುತ್ತಾರೆ. ಒಂದೇ ಕಡೆ ಒಪ್ಪಿಗೆ ಪಡೆಯಲು ಸಾಧ್ಯವಾಗುತ್ತದೆ.