Published on: November 5, 2022

ಭಾರತದಲ್ಲಿರುವ ವಿವಿಧ ಭದ್ರತೆಗಳು

ಭಾರತದಲ್ಲಿರುವ ವಿವಿಧ ಭದ್ರತೆಗಳು

ಸುದ್ದಿಯಲ್ಲಿ ಏಕಿದೆ?

ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಒದಗಿಸಿರುವ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ಈಗ ಹೆಚ್ಚಿಸಿದೆ. ನಟರಾದ ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ ಅವರಿಗೂ ವರ್ಗೀಕೃತ ಶ್ರೇಣಿಯ ಭದ್ರತೆ ಕಲ್ಲಿಸಲಾಗಿದೆ. ಸಲ್ಮಾನ್ ಭದ್ರತೆಯನ್ನು ಈಗಿರುವ ಎಕ್ಸ್ನಿಂ  ವೈಪ್ಲಸ್ ವರ್ಗದ ಮೇಲ್ದರ್ಜೆಗೆ ಏರಿಸಲಾಗಿದೆ. ಅಕ್ಷಯ ಮತ್ತು ಅನುಪಮ್ ಎಕ್ಸ್ ವರ್ಗದ ಭದ್ರತೆ ಪಡೆಯಲಿದ್ದಾರೆ.

ಮುಖ್ಯಾಂಶಗಳು

 • ಗೂಢಚಾರ ಸಂಸ್ಥೆಗಳು ಭಯೋತ್ಪಾದಕರು ಅಥವಾ ಇತರ ಯಾವುದೇ ಗುಂಪಿನಿಂದ ವ್ಯಕ್ತಿಗೆ ಜೀವ ಬೆದರಿಕೆ ಇರುವ ಕುರಿತಂತೆ ಮೂಲಗಳಿಂದ ಮಾಹಿತಿಯನ್ನು ಕ್ರೋಡೀಕರಿಸಿ ಮೌಲ್ಯ ಮಾಪನ ಮಾಡುತ್ತವೆ. ಈ ಮಾಹಿತಿಯು ಫೋನ್ ಸಂಭಾಷಣೆಗಳು , ಮುಕ್ತ ಬೆದರಿಕೆ (ಬಿಷ್ಣೋ ಯ್ ಗ್ಯಾಂಗ್ನಿಂದ ಸಲ್ಮಾನ್ಗೆ ಬಂದಿರುವ ರೀತಿಯದ್ದು ) ಮುಂತಾದವುಗಳನ್ನು ವಿಶ್ಲೇಷಿಸುತ್ತವೆ.

ಯಾರಿಗೆ ಒದಗಿಸಲಾಗುತ್ತದೆ?

 • ಭದ್ರತೆಯನ್ನು ಸಾಮಾನ್ಯವಾಗಿ ಸರ್ಕಾರದಲ್ಲಿ ಅಥವಾ ನಾಗರಿಕ ಸಮಾಜದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ವ್ಯಕ್ತಿಗಳಿಗೆ ನೀಡಲಾಗುತ್ತದೆ.
 • ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ವಿಐಪಿಗಳಿಗೆ ಭದ್ರತೆ. ಇನ್ನು ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿ ಇರುವವರು ಸ್ಥಾನಮಾನದ ಕಾರಣದಿಂದಲೇ ಸಹಜವಾಗಿ ಭದ್ರತೆ ಪಡೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರವು ಸಾಮಾನ್ಯವಾಗಿ ವ್ಯಕ್ತಿಗಳಿಗೆ ಭದ್ರತೆ ನೀಡಲು ಆಸಕ್ತಿ ತೋರುವುದಿಲ್ಲ.
 • ಹೀಗಾಗಿ, ಜೀವಕ್ಕೆ ಅಪಾಯ ಇದೆ ಎಂದು ಪರಿಗಣಿಸಲಾಗುವ ಪ್ರಮುಖ ವ್ಯಕ್ತಿಗಳಿಗೆ ರಾಜ್ಯ ಸರ್ಕಾರಗಳೇ ಪೊಲೀಸ್ ಭದ್ರತೆ ಒದಗಿಸುತ್ತವೆ.

ಭದ್ರತೆಯನ್ನು ನೀಡುವ ನಿರ್ಧಾರ :

 • ರಾಷ್ಟ್ರ ಮಟ್ಟದಲ್ಲಿ ಇಂಟಲಿಜೆನ್ಸ್ ಬ್ಯುರೊ (ಐಬಿ), ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ ) ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯ ಗುಪ್ತಚರ ಇಲಾಖೆ ರೀತಿಯ ಗೂಢಚರ ಸಂಸ್ಥೆಗಳಿಂದ ಪಡೆದ ವರದಿ ಆಧರಿಸಿ ಕೇಂದ್ರದ ಗೃಹ ವ್ಯವಹಾರಗಳ ಸಚಿವಾಲಯ ಅಥವಾ ರಾಜ್ಯ ಸರ್ಕಾರಗಳು ಭದ್ರತೆ ಕುರಿತಂತೆ ನಿರ್ಧಾರ ಕೈಗೊಳ್ಳುತ್ತವೆ.
 • ಮಾನದಂಡಗಳು: ಯಾವ ಪ್ರಮಾಣದ ಭದ್ರತೆ ಒದಗಿಸಬೇಕು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಮಾನದಂಡಗಳು ಇಲ್ಲ. ಗುಪ್ತಚರ ಸಂಸ್ಥೆಗಳ ವರದಿಗಳನ್ನು ಆಧರಿಸಿ ರಾಜ್ಯ ಅಥವಾ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ.
 • ಖರ್ಚು -ವೆಚ್ಚ ಭರಿಸುವವರರು : ಗುಪ್ತಚರ ಸಂಸ್ಥೆಗಳ ವರದಿಯನ್ನಾಧರಿಸಿ ವ್ಯಕ್ತಿಗಳಿಗೆ ಭದ್ರತೆ ನೀಡಲು ಸರ್ಕಾರ ನಿರ್ಧರಿಸಿದರೆ, ಅದಕ್ಕಾಗುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
 • ಝುಡ್ ಮತ್ತು ಝುಡ್ ಪ್ಲಸ್ ಭದ್ರತೆಯನ್ನು ಹೊಂದಿರುವವರು ತಮ್ಮ ನಿವಾಸದಲ್ಲಿ ಮತ್ತು ಸಂಚಾರದಲ್ಲಿ ಇರುವಾಗ ಭದ್ರತಾ ಸಿಬ್ಬಂದಿಗೆ ವಸತಿ ಸೌಕರ್ಯ ನೀಡಬೇಕಾಗುತ್ತದೆ. ಅಲ್ಲದೆ, ಉಚಿತವಾಗಿ ಭದ್ರತೆ ಒದಗಿಸುವುದು ಕಡ್ಡಾಯವೇನಲ್ಲ. ಖಾಸಗಿ ವ್ಯಕ್ತಿಯಿಂದ ಶುಲ್ಕವನ್ನು ಸರ್ಕಾರ ಪಡೆಯಬಹುದಾಗಿದೆ.
  • ಉದಾಹರಣೆ :ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆ ಇದೆ ಎಂದು ಐಬಿ ವರದಿ ನೀಡಿದ ನಂತರ 2013 ರಲ್ಲಿ ಝುಢ್ ವರ್ಗದ ಸಿಆರ್ಪಿಎಫ್ ರಕ್ಷಣೆಯನ್ನು ನೀಡಲಾಯಿತು. ಈ ಭದ್ರತೆಗಾಗಿ ಪ್ರತಿ ತಿಂಗಳಿಗೆ 15 ಲಕ್ಷ ರೂಪಾಯಿಗಳ ಶುಲ್ಕ ವಿಧಿಸುವಂತೆ ಸಿಆರ್ಪಿಎಫ್ಗೆ ಸರ್ಕಾರ ಸೂಚಿಸಿದೆ.
 • ಅಪರಾಧಿಗಳಿಗೂ ಭದ್ರತೆ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗಳಿಗೂ ಭದ್ರತೆ ನೀಡಲಾಗುತ್ತದೆ.
  • ಉದಾಹರಣೆ : ಗುರ್ವಿುತ್ರಾಮ್ ರಹೀಮ್ ಸಿಂಗ್ ಈ ವರ್ಷದ ಆರಂಭದಲ್ಲಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದಾಗ ಹರಿಯಾಣ ಸರ್ಕಾರವು ಝುಡ್ ಪ್ಲಸ್ ವರ್ಗದ ಭದ್ರತೆಯನ್ನು ಒದಗಿಸಿತು.
 • ಅನೇಕ ಪಡೆಗಳ ಬಳಕೆ: ಪ್ರಧಾನ ಮಂತ್ರಿ ಹೊರತು ಪಡಿಸಿ ವಿಐಪಿಗಳಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ಎಸ್ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಬಳಸಿಕೊಂಡು ಭದ್ರತೆ ಒದಗಿಸುತ್ತದೆ. ಇನ್ನು ರಾಜ್ಯಗಳಿಂದ ಭದ್ರತೆ ನೀಡಿದರೆ, ರಾಜ್ಯಪೊಲೀಸರು ರಕ್ಷಣೆ ನೀಡುತ್ತಾರೆ.
 • ವಿವಿಧ ರೀತಿಯ ಭದ್ರತೆಗಳು : ಸರ್ಕಾರಗಳು ಒದಗಿಸುವ ಭದ್ರತೆಯಲ್ಲಿ ಆರು ವಿಭಾಗಗಳಿವೆ. ಎಕ್ಸ್, ವೈ , ವೈಪ್ಲಸ್, ಝುಡ್, ಝುಡ್ ಪ್ಲಸ್ ಹಾಗೂ ಎಸ್ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್- ವಿಶೇಷ ರಕ್ಷಣಾದಳ). ಎಸ್ಪಿಜಿಯು ಪ್ರಧಾನ ಮಂತ್ರಿ ಮತ್ತು ಅವರ ಕುಟುಂಬಕ್ಕೆ ಮಾತ್ರ ಮೀಸಲಾಗಿದೆ.
 • ಇತರ ರೀತಿಯ ಭದ್ರತೆಗಳನ್ನು ಸರ್ಕಾರವು ಬೆದರಿಕೆ ಸಾಧ್ಯತೆ ಇರುವ ಯಾರಿಗಾದರೂ ಒದಗಿಸಬಹುದು .
 • ಎಕ್ಸ್ ವರ್ಗದ ಭದ್ರತೆಯಲ್ಲಿ ಸಾಮಾನ್ಯವಾಗಿ ಒಬ್ಬ ಬಂದೂಕುಧಾರಿ ವ್ಯಕ್ತಿಯನ್ನು ಒದಗಿಸಲಾಗುತ್ತದೆ.
 • ವೈ ವರ್ಗದ ಭದ್ರತೆ ಅನುಸಾರ, ಸಂಚಾರದಲ್ಲಿ ಇರುವಾಗ ಒಬ್ಬ ಗನ್ವ್ಯಾನ್ ಮತ್ತು ಉಳಿದಂತೆ ಮತ್ತೊಬ್ಬರನ್ನು (ಸರದಿಯಲ್ಲಿ ನಾ ಲ್ಕು ) ಒದಗಿಸಲಾಗುತ್ತದೆ.
 • ವೈಪ್ಲಸ್ ವರ್ಗದ ಭದ್ರತೆಯಲ್ಲಿ ಚಲಿಸುವಾಗ ಇಬ್ಬರು ಪೊಲೀಸರನ್ನು (ಸರದಿಯಲ್ಲಿ ನಾ ಲ್ವರು ) ಮತ್ತು ನಿವಾಸ ಭದ್ರತೆಗಾಗಿ ಒಬ್ಬರನ್ನು (ಸರದಿಯಲ್ಲಿ ನಾ ಲ್ವರು ) ಒದಗಿಸಲಾಗುತ್ತದೆ.
 • ಝುಡ್ ವರ್ಗದ ಭದ್ರತೆಯಲ್ಲಿ ಸಂಚರಿಸುವಾಗ ಆರು ಬಂದೂಕುಧಾರಿಗಳನ್ನು ಮತ್ತು ನಿವಾಸದ ಭದ್ರತೆಗಾಗಿ ಇಬ್ಬರನ್ನು (ಸರದಿಯಲ್ಲಿ ಎಂಟು ) ನೀಡಲಾಗುತ್ತದೆ. ಝುಡ್ ಪ್ಲಸ್ ವರ್ಗದ ಭದ್ರತೆಯಲ್ಲಿ, ಚಲಿಸುವಾಗ 10 ಸಿಬ್ಬಂದಿಯನ್ನು ಮತ್ತು ನಿವಾಸದ ಭದ್ರತೆಗಾಗಿ ಇಬ್ಬರನ್ನು (ಸರದಿಯಲ್ಲಿ ಎಂ ಟು ) ನೀಡಲಾಗುತ್ತದೆ. ಈ ವರ್ಗಗಳಲ್ಲಿಯೇ ನಿವಾಸದ ಭದ್ರತೆ, ಸಂಚಾರ ಭದ್ರತೆ, ಕಚೇರಿ ಭದ್ರತೆ, ಅಂತರ-ರಾಜ್ಯ ಭದ್ರತೆ ಇತ್ಯಾ ದಿ ಇವೆ.
 • ತಾರತಮ್ಯದ ಆರೋಪ: ಭದ್ರತೆ ವಿಚಾರದಲ್ಲಿ ರಾಜಕಾರಣ ನುಸುಳುತ್ತಿದೆ ಹಾಗೂ ತಾರತಮ್ಯ ಎಸಗಲಾಗುತ್ತಿದೆ ಎಂಬ ಆರೋಪಗಳಿವೆ. ಕೆಲವೊಮ್ಮೆ ರಾಜಕೀಯ ಕಾರಣಗಳಿಗಾಗಿ ಮತ್ತು ಕೆಲವು ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಸರ್ಕಾರಗಳು ಭದ್ರತೆ ಒದಗಿಸುತ್ತವೆ ಎಂಬ ಟೀಕೆಗಳಿವೆ.