Published on: October 13, 2022

ಮಹಾಕಾಲ ಲೋಕ ಕಾರಿಡಾರ್

ಮಹಾಕಾಲ ಲೋಕ ಕಾರಿಡಾರ್

http://czechinthekitchen.com/2016/12/18/czech-vanilla-crescents-or-vanilkove-rohlicky/img_0032christmas-baking/ ಸುದ್ದಿಯಲ್ಲಿ ಏಕಿದೆ?

http://wendykeithdesigns.co.uk/wp-json/wp/v2/categories/6 ಜ್ಯೋತಿರ್ಲಿಂಗ ಕಾಶಿ ವಿಶ್ವನಾಥ ಮಂದಿರದ ಕಾರಿಡಾರ್‌ ಅಭಿವೃದ್ಧಿಪಡಿಸಿದಂತೆಯೇ ಮತ್ತೊಂದು ಪ್ರಸಿದ್ಧ ಜ್ಯೋತಿರ್ಲಿಂಗ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇಗುಲ ಪ್ರಾಂಗಣ ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಾಕಾಲ ಲೋಕ ಕಾರಿಡಾರ್‌ ಲೋಕಾರ್ಪಣೆ ಮಾಡಿದ್ದಾರೆ. ಇದು 900 ಮೀಟರ್‌ಗೂ ಅಧಿಕ ಉದ್ದವಿದೆ.

ಮುಖ್ಯಾಂಶಗಳು

  • ಇದು ಹಳೆಯ ರುದ್ರಸಾಗರ ಸರೋವರದ ಸುತ್ತ ಇದೆ. ಯೋಜನೆಯ ಭಾಗವಾಗಿ ರುದ್ರಸಾಗರ ಸರೋವರವನ್ನೂ ಅಭಿವೃದ್ಧಿಪಡಿಸಲಾಗಿದೆ ದೇಶದಲ್ಲಿಯೇ ಈ ರೀತಿಯ ಅತ್ಯಂತ ದೊಡ್ಡ ಕಾರಿಡಾರ್‌ ಎನ್ನಲಾಗಿದೆ
  • ಮಹಾಕಾಲೇಶ್ವರ ದೇಗುಲ ಕಾರಿಡಾರ್‌ ಅಭಿವೃದ್ಧಿಯು ರೂ. 866 ಕೋಟಿ ವೆಚ್ಚದ ಯೋಜನೆ. ಅದರ ಮೊದಲ ಹಂತ ‘ಮಹಾಕಾಲ ಲೋಕ’ವನ್ನು ರೂ. 316 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.
  • ಕಾರಿಡಾರ್‌ ನ ವಿಶೇಷತೆಗಳು: ಎರಡು ಭವ್ಯ ದ್ವಾರಗಳನ್ನು– ನಂದಿ ದ್ವಾರ ಮತ್ತು ಪಿನಾಕಿ ದ್ವಾರ– ನಿರ್ಮಿಸಲಾಗಿದೆ. ಇವು ಕಾರಿಡಾರ್‌ನ ಆರಂಭದಲ್ಲಿ ಇವೆ.
  • ಕಾರಿಡಾರ್ ಸುಮಾರು 108 ಕಲಾತ್ಮಕವಾಗಿ ಅಲಂಕೃತವಾದ ಸ್ತಂಭಗಳನ್ನು ಹೊಂದಿದೆ, ಇದು ಸಂಕೀರ್ಣವಾದ ಕೆತ್ತಿದ ಮರಳುಗಲ್ಲುಗಳಿಂದ ಮಾಡಲ್ಪಟ್ಟಿದೆ, ಇದು ಶಿವ ಪುರಾಣದಕತೆ ಹೇಳುವ ಆನಂದ್ ತಾಂಡವ್ ಸ್ವರೂಪದ (ಶಿವನ ನೃತ್ಯ ರೂಪ) ಶಿವ ಮತ್ತು ಶಕ್ತಿ ದೇವತೆಯ 200 ಪ್ರತಿಮೆಗಳು ಭಿತ್ತಿಚಿತ್ರಗಳನ್ನು ಚಿತ್ರಿಸುತ್ತದೆ.
  • ಕ್ಷಿಪ್ರ ನದಿಯ ದಂಡೆಯಲ್ಲಿರುವ ರಾಮ ಘಾಟ್‌ ಅನ್ನು ಎರಡನೇ ಹಂತದಲ್ಲಿ ಅಭಿವೃದ್ಧಿಪಡಿಸಲಾಗುವುದು. ಎರಡನೇ ಹಂತದ ಯೋಜನೆಯ ಒಟ್ಟು ವೆಚ್ಚ ರೂ. 450 ಕೋಟಿ ಎಂದು ಅಂದಾಜಿಸಲಾಗಿದೆ.

ಗುರಿ 

  • ಒಂದು ರಾಷ್ಟ್ರವು ತನ್ನ ಯಶಸ್ಸಿನ ಮಾರ್ಗದಲ್ಲಿಸಾಗಲು ಮುಖ್ಯವಾದದ್ದು ಸಾಂಸ್ಕೃತಿಕ ಶ್ರೀಮಂತಿಕೆ. ಅದಕ್ಕೆ ಒತ್ತು ನೀಡಿ ಧಾರ್ಮಿಕ, ಪಾರಂಪರಿಕ ತಾಣಗಳ ಗತವೈಭವ ಮರುಳಿಸಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.