Published on: August 20, 2022
ಮೆಟ್ರೊ ರೈಲುಗಳ ಕೋಚ್ ತಯಾರಿಕೆ
ಮೆಟ್ರೊ ರೈಲುಗಳ ಕೋಚ್ ತಯಾರಿಕೆ
buy isotretinoin online 30mg ಸುದ್ದಿಯಲ್ಲಿ ಏಕಿದೆ?
buy Pregabalin 300 mg uk ಭಾರತೀಯ ರೈಲ್ವೆ ಬೋಗಿ ತಯಾರಿಕೆ ಘಟಕ ಐಸಿಎಫ್‌ನಲ್ಲಿ (ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ದೇಶದಲ್ಲೇ ಮೊದಲ ಬಾರಿಗೆ ಮೆಟ್ರೊ ರೈಲುಗಳ ಕೋಚ್‌ಗಳನ್ನು (ಬೋಗಿ) ನಿರ್ಮಿಸಲಾಗುತ್ತಿದೆ.
ಮುಖ್ಯಾಂಶಗಳು
- ಇಲ್ಲಿ ನಿರ್ಮಿಸುವ ಮೆಟ್ರೊ ರೈಲು ಬೋಗಿಗಳನ್ನು ಮಹಾರಾಷ್ಟ್ರ ಮೆಟ್ರೊ ರೈಲು ನಿಗಮಕ್ಕೆ ಪೂರೈಸಲಾಗುತ್ತದೆ.
- ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 75 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು ಐಸಿಎಫ್ ತಯಾರಿಸಿ, ದೇಶದಾದ್ಯಂತ ಸೇವೆಗೆ ಒದಗಿಸಲಾಗುವುದು.
- ವಂದೇ ಭಾರತ್ ಎಕ್ಸ್ ಪ್ರೆಸ್ 2.0ನ ಮೊದಲ ಪ್ರೊಟೊಟೈಪ್ ಮಾದರಿಯನ್ನು ಕೆಲವು ದಿನಗಳ ಹಿಂದೆಯೇ ಆರ್‌ಡಿಎಸ್‌ಒಗೆ ಹಸ್ತಾಂತರಿಸಲಾಗಿದ್ದು, ಕೆಲವೇ ತಿಂಗಳಲ್ಲಿ ಭಾರತೀಯ ರೈಲ್ವೆಗೆ ಸೇರ್ಪಡೆಗೊಳಿಸಲಾಗುತ್ತಿದೆ. ‘ವಂದೇ ಭಾರತ್ ರೇಕ್, ವಿಸ್ತಾಡೋಮ್ ಡೈನಿಂಗ್ ಕಾರ್ ರೈಲು ಸೇರಿ ಸುಮಾರು 50 ವಿಧಗಳಲ್ಲಿ 3,500 ಬೋಗಿಗಳನ್ನು ತಯಾರಿಸಲು ಇಸಿಎಫ್ ಯೋಜಿಸುತ್ತಿದೆ. ಇವು ಸೆಪ್ಟೆಂಬರ್‌ನಿಂದ ಗುಜರಾತ್‌ನಲ್ಲಿ ಸೇವೆಗೆ ಲಭ್ಯವಾಗಲಿವೆ.
ಐಸಿಎಫ್
- ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ICF) ಪೆರಂಬೂರ್ ಚೆನ್ನೈನಲ್ಲಿ ನೆಲೆಗೊಂಡಿರುವ ರೈಲು ಕೋಚ್‌ಗಳ ತಯಾರಕ. ಸ್ವತಂತ್ರ ಭಾರತದ ಆರಂಭಿಕ ಉತ್ಪಾದನಾ ಘಟಕಗಳಲ್ಲಿ ಒಂದಾಗಿದೆ. ಇದನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅಕ್ಟೋಬರ್ 2, 1955 ರಂದು ಉದ್ಘಾಟಿಸಿದರು.
- ಇದು ಭಾರತೀಯ ರೈಲ್ವೇ ಒಡೆತನದಲ್ಲಿ ಕಾರ್ಯ ನಿರ್ವಹಿಸುತ್ತದೆ.
-
ICF ಭಾರತೀಯ ರೈಲ್ವೇಸ್‌ನ ನಾಲ್ಕು ಉತ್ಪಾದನಾ ಘಟಕಗಳಲ್ಲಿ ಒಂದಾಗಿದೆ, ಇತರ ಮೂರು ರಾಯ್‌ಬರೇಲಿಯಲ್ಲಿ ಮಾಡರ್ನ್ ಕೋಚ್ ಫ್ಯಾಕ್ಟರಿ, ಕಪುರ್ತಲಾದಲ್ಲಿ ರೈಲ್ ಕೋಚ್ ಫ್ಯಾಕ್ಟರಿ ಮತ್ತು ಲಾತೂರ್‌ನಲ್ಲಿರುವ ಮರಾಠವಾಡ ರೈಲ್ ಕೋಚ್ ಫ್ಯಾಕ್ಟರಿ.