Published on: November 29, 2022

ಮೌನಾ ಲೋವಾ ಸಕ್ರಿಯ ಜ್ವಾಲಾಮುಖಿ

ಮೌನಾ ಲೋವಾ ಸಕ್ರಿಯ ಜ್ವಾಲಾಮುಖಿ

ಸುದ್ದಿಯಲ್ಲಿ ಏಕಿದೆ?

ಹವಾಯಿ ದ್ವೀಪದ ವಿಶ್ವದ ಅತಿದೊಡ್ಡ ಮೌನಾ ಲೋವಾ ಸಕ್ರಿಯ ಜ್ವಾಲಾಮುಖಿಯು ಸ್ಪೋಟಿಸುತ್ತಿದೆ. 38 ವರ್ಷಗಳಲ್ಲಿ ತನ್ನ ಮೊದಲ ಸ್ಫೋಟದಲ್ಲಿ ಕಿತ್ತಳೆ ಬಣ್ಣದ ಪ್ರಜ್ವಲಿಸುವ ಲಾವಾ ಮತ್ತು ಬೃಹತ್ ಪ್ರಮಾಣದ ಬೂದಿಯನ್ನು ಹೊರಸೂಸುತ್ತಿದೆ.

ಮುಖ್ಯಾಂಶಗಳು

 • ಮೌನಾ ಲೋವಾ ಜ್ವಾಲಾಮುಖಿಯ ಸ್ಫೋ ಟವು ತಕ್ಷಣಕ್ಕೆ ಪಟ್ಟಣಗಳಿಗೆ ಯಾವುದೇ ಹಾನಿ ಮಾಡಿಲ್ಲ. ಆದರೆ, ಈ ಜ್ವಾಲಾಮುಖಿಯು ಮತ್ತಷ್ಟು ಕ್ರಿಯಾತ್ಮಕವಾಗಿರಬಹುದು ಮತ್ತು ಲಾವಾ ಹರಿವಿನ ಸ್ಥಳ ಹಾಗೂ ವೇಗವು ಬದಲಾಗಬಹುದು ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೆಯು ಎಚ್ಚರಿಸಿದೆ.
 • ದ್ವೀ ಪದಲ್ಲಿ 2,00,000 ಜನರಿದ್ದಾರೆ.
 • ಲಾವಾ ಹೊರಹೊಮ್ಮುತ್ತಿರುವ ಪ್ರದೇಶವು (ಜ್ವಾಲಾಮುಖಿಯ ಶಿಖರದ ಕುಳಿ ಮತ್ತು ಜ್ವಾಲಾಮುಖಿಯ ಈಶಾನ್ಯ ಪಾರ್ಶ್ವದ ಉದ್ದಕ್ಕೂ ಇರುವ ದ್ವಾರಗಳು) ಜನವಸತಿ ಪ್ರದೇಶಗಳಿಂದ ದೂರದಲ್ಲಿದೆ.
 • ಭೂಮಿಯಿಂದ ಹೊರಬರುತ್ತಿರುವ ಜ್ವಾಲಾಮುಖಿ ಅನಿಲಗಳು, ಅದರಲ್ಲೂ ಸಲ್ಫರ್ ಡೈಆಕ್ಸೈಡ್ ಹಾನಿಕಾರಕವಾದುದ್ದಾಗಿದೆ.

ಮೌನಾ ಲೋವಾ ಎಲ್ಲಿದೆ?

 • ಮೌನಾ ಲೋವಾ ಐದು ಜ್ವಾಲಾಮುಖಿಗಳಲ್ಲಿ ಒಂದಾಗಿದೆ, ಅದು ಒಟ್ಟಾಗಿ ಹವಾಯಿಯ ದೊಡ್ಡ ದ್ವೀಪವನ್ನು ರೂಪಿಸುತ್ತದೆ. ಇದು ಹವಾಯಿಯನ್ ದ್ವೀಪಸಮೂಹದ ದಕ್ಷಿಣದ ದ್ವೀಪವಾಗಿದೆ.
 • ಮತ್ತು ದ್ವೀಪದ ಅರ್ಧದಷ್ಟು ಭೂಪ್ರದೇಶವನ್ನು ಹೊಂದಿದೆ.
 • ಮೌನಾ ಲೋವಾ ಕೊನೆಯದಾಗಿ ಸ್ಫೋಟಗೊಂಡಿದ್ದು 38 ವರ್ಷಗಳ ಹಿಂದೆ(1984)

ಇತ್ತೀಚೆಗೆ ಸ್ಫೋಟಗೊಂಡ ಇತರ ಜ್ವಾಲಾಮುಖಿಗಳ ಬಗ್ಗೆ

 • ಸಂಗಯ್ ಜ್ವಾಲಾಮುಖಿ: ಈಕ್ವೆಡಾರ್
 • ತಾಲ್ ಜ್ವಾಲಾಮುಖಿ: ಫಿಲಿಪೈನ್ಸ್
 • ಮೌಂಟ್ ಸಿನಾಬಂಗ್, ಮೆರಾಪಿ ಜ್ವಾಲಾಮುಖಿ, ಸೆಮೆರು ಜ್ವಾಲಾಮುಖಿ (ಇಂಡೋನೇಷ್ಯಾ)

ಭಾರತದಲ್ಲಿ ಜ್ವಾಲಾಮುಖಿಗಳು:

 • ಬ್ಯಾರೆನ್ ದ್ವೀಪ, ಅಂಡಮಾನ್ ದ್ವೀಪಗಳು (ಭಾರತದ ಏಕೈಕ ಸಕ್ರಿಯ ಜ್ವಾಲಾಮುಖಿ)
 • ನಾರ್ಕೊಂಡಮ್, ಅಂಡಮಾನ್ ದ್ವೀಪಗಳು
 • ಬಾರಾತಂಗ್, ಅಂಡಮಾನ್ ದ್ವೀಪಗಳು
 • ಡೆಕ್ಕನ್ ಟ್ರ್ಯಾಪ್ಸ್, ಮಹಾರಾಷ್ಟ್ರ
 • ಧಿನೋಧರ್ ಹಿಲ್ಸ್, ಗುಜರಾತ್
 • ಧೋಸಿ ಹಿಲ್, ಹರಿಯಾಣ

ಪ್ರಪಂಚದಾದ್ಯಂತ ಜ್ವಾಲಾಮುಖಿಗಳ ಹಂಚಿಕೆ

 • ಪ್ರಪಂಚದಾದ್ಯಂತ ಜ್ವಾಲಾಮುಖಿಗಳು ಚದುರಿದಂತೆ ಹಂಚಿಕೆಯಾಗಿಲ್ಲ. ಬದಲಾಗಿ ಕೆಲವೇ ವಲಯಗಳಲ್ಲಿ ಅವುಗಳ ಕಾರ್ಯಾಚರಣೆಯು ಕಂಡುಬರುತ್ತದೆ.
 • ವಿಶೇಷವಾಗಿ ಶಿಲಾಮಡಿಕೆ ಮತ್ತು ಸ್ರರಭಂಗಗಳ ನಿರ್ಧಿಷ್ಟ ವಲಯ ಹಾಗೂ ಹೆಚ್ಚಾಗಿ ಸಮುದ್ರ ತೀರ ಹಾಗೂ ಸಾಗರೋತ್ತರ ದ್ವೀಪಗಳಲ್ಲಿ ವಲಯಗಳ ರೂಪದಲ್ಲಿ ಹಂಚಿಕೆಯಾಗಿವೆ.
 • ಭೂಭಾಗಗಳು ಪರಸ್ಪರ ಸಂಧಿಸುವ ಭಾಗಗಳಲ್ಲಿಯೇ ಪ್ರಪಂಚದ ಬಹುಪಾಲು ಜ್ವಾಲಾಮುಖಿಗಳು ಕಂಡು ಬರುತ್ತವೆ.
 1. ಫೆಸಿಫಿಕ್ ಸಾಗರ ವಲಯ : ಇದು ಅಮೇರಿಕ ಖಂಡಗಳ ಪಶ್ಚಿಮ ತೀರ ಹಾಗೂ ಪರ್ವತ ಶ್ರೇಣಿಗಳು, ಕ್ಯೂರೈಲ್ ದ್ವೀಪಗಳು ಜಪಾನ್, ಫಿಲಿಫಿನ್ಸ್, ಕಮಚಟ್ಕ, ಇನೋಡೋನೇಶಿಯಾ, ನ್ಯೂಗಿನಿ ಆಸ್ಟ್ರೇಲಿಯಾದ ಪೂರ್ವ ಭಾಗ ಮತ್ತು ನ್ಯೂಜಿಲ್ಯಾಂಡ್ ಅನ್ನು ಒಳಗೊಂಡಿದೆ.ಇದು ದಕ್ಷಿಣ ಅಮೇರಿಕಾದ ಹಾರ್ನ್ ಭೂಶಿರದ ಅಮೇರಿಕ ಖಂಡಗಳ ಪಶ್ಚಿಮ ತೀರದುದ್ದಕ್ಕೂ ವಿಸ್ತರಿಸಿ ಅಲ್ಯೂಷಿಯನ್ ದ್ವೀಪಗಳ ಮೂಲಕ ಪಶ್ಚಿಮಕ್ಕೆ ತಿರುಗಿ ಜಪಾನ್, ಫಿಲಿಫೈನ್ ಮೂಲಕ ಇಂಡೋನೇಷ್ಯಾ  ದ್ವೀಪಗಳವರೆಗೆ ವಿಸ್ತರಿಸಿದೆ. ಇದು ಅತಿ ಹೆಚ್ಚಿನ ಸಂಖ್ಯೆಯ ಜಾಗೃತ ಜ್ವಾಲಾಮುಖಿಗಳನ್ನೊಳಗೊಂಡ ವಲಯವಾಗಿದೆ. ಫೆಸಿಫಿಕ್ ಅಂಚಿನಲ್ಲಿರುವ ಭೂಭಾಗ ಹಾಗೂ ದ್ವೀಪಗಳಲ್ಲಿ ಜ್ವಾಲಾಮುಖಿ ಸಾಮಾನ್ಯ. ಆದ್ದರಿಂದ ಇದನ್ನು ಅಗ್ನಿ ವೃತ್ತ(Pacific Ring Of Fire) ಎಂದು ಕರೆಯುವರು. ಈ ಸಾಗರದ ತೀರದಲ್ಲಿರುವ ದ್ವೀಪಗಳಲ್ಲಿ ಮಾತ್ರವಲ್ಲದೆ, ಆಳಸಾಗರದ ಮೈದಾನದಲ್ಲಿಯೂ ಹಲವಾರು ಜ್ವಾಲಾಮುಖಿಗಳಿವೆ.
 2. ಯುರೇಷಿಯಾ ವಲಯ: ಈ ಪ್ರದೇಶವು ಇಟಲಿ, ಸ್ಪೇನ್, ಫ್ರಾನ್ಸ್, ಗ್ರೀಸ್, ಟರ್ಕಿ, ಇರಾನ, ಬೆಲೂಚಿಸ್ತಾನ ಮತ್ತು ಮೇಯನ್ಮಾರಗಳ ಮೂಲಕ ಹಾಯ್ದು ಇಂಡೋನೇಷಿಯಾದಲ್ಲಿ ಕೊನೆಗೊಳ್ಳುವುದು.
 3. ಅಟ್ಲಾಂಟಿಕ ವಲಯ: ಇದು ವೆಸ್ಟ್ ಇಂಡೀಸ್ ದ್ವೀಪಗಳು ಐಸ್ ಲ್ಯಾಂಡ್, ಅಜೋರ್ಸ್, ಕೆನಡಾ ತೀರ, ಕೇಪ್ ವ್ಹರ್ದೆ ಯಿಂದ ಸೆಂಟ್ ಹೆಲೆನಾದವರೆಗಿನ ಪ್ರದೇಶವನ್ನು ಒಳಗೊಂಡಿದೆ. ಮಧ್ಯ ಅಟ್ಲಾಂಟಿಕ್ ಅಂತರ್ಗತ ಶ್ರೇಣಿಯು ಹಲವಾರು ಜ್ವಾಲಾಮುಖಿಗಳನ್ನೊಳಗೊಂಡಿದೆ.
 4. ಪೂರ್ವ ಆಫ್ರಿಕಾದ ಸ್ತರಭಂಗ ಕಣಿವೆಯ ಪ್ರದೇಶ : ಆಫ್ರಿಕಾದ ಪೂರ್ವ ತೀರದುದ್ದಕ್ಕೂ ಕಂಡು ಬರುವ ಸ್ತರಭಂಗ ಕಣಿವೆಯು ಭೂಮಿಯ ಅಭದ್ರ ಪ್ರದೇಶಗಳಲ್ಲಿ ಒಂದಾಗಿದೆ. ಇದರಿಂದ ಈ ವಲಯದಲ್ಲಿಯೂ ಜ್ವಾಲಾಮುಖಿಗಳು ಕಂಡುಬರುತ್ತವೆ. ಮೌಂಟ್ ಕೀನ್ಯಾ ಮತ್ತು ಕಿಲಿಮಂಜಾರೋ ಈ ರೀತಿಯ ಜ್ವಾಲಾಮುಖಿ ಪರ್ವತಗಳಾಗಿವೆ. ಇವುಗಳಲ್ಲದೆ ಹಿಂದೂ ಮಹಾಸಾಗರದ ಮಾರಿಷಸ್, ಮಲಗಸಿ, ಬಂಗಾಳ ಕೊಲ್ಲಿಯ ದ್ವೀಪಗಳು, ಅಂಟಾರ್ಟಿಕಾ ನ್ಯೂಜಿಲ್ಯಾಂಡ್ ಮತ್ತು ಮೈಯನ್ಮಾರಗಳಲ್ಲಿಯೂ ಜ್ವಾಲಾಮುಖಿ ಪರ್ವತಗಳು ಹಂಚಿಕೆಯಾಗಿವೆ