Published on: November 29, 2022

ಸುದ್ಧಿ ಸಮಾಚಾರ: 29 ನವೆಂಬರ್ 2022

ಸುದ್ಧಿ ಸಮಾಚಾರ: 29 ನವೆಂಬರ್ 2022

  • ರೈತರ ಮಕ್ಕಳಿಗೆ ಜಾರಿಗೊಳಿಸಿರುವ ವಿದ್ಯಾನಿಧಿ ಯೋಜನೆ ಸವಲತ್ತನ್ನು ಟೈಲರ್‌ಗಳ ಮಕ್ಕಳಿಗೂ ವಿಸ್ತರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
  • ಬ್ರಹ್ಮಾಂಡದ ಉಗಮದ ಹಂತದಲ್ಲಿ ಹುಟ್ಟಿದ ಮೊದಲ ನಕ್ಷತ್ರಗಳು ಮತ್ತು ಆಕಾಶಗಂಗೆಗಳ ಸ್ವರೂಪಗಳ ಬಗ್ಗೆ ‘ಸರಾಸ್‌–3’ (ಎಸ್ಎಆರ್‌ಎಎಸ್–3) ರೇಡಿಯೊ ದೂರದರ್ಶಕ ಸುಳಿವು ನೀಡಿದೆ ಎಂದು ರಾಮನ್‌ ಸಂಶೋಧನಾ ಸಂಸ್ಥೆ ತಿಳಿಸಿದೆ.
  • ಭಾರತ ಡಿ. 1ರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುತ್ತಿದ್ದು, ಭಯೋತ್ಪಾದನೆ ನಿಗ್ರಹ ಮತ್ತು ಬಹುಪಕ್ಷೀಯ ಸಂಬಂಧಗಳ ಸುಧಾರಣೆಯು ದೇಶದ ಆದ್ಯತೆಯಾಗಿರಲಿದೆ ಎಂದು ಭಾರತದ ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ತಿಳಿಸಿದ್ದಾರೆ.
  • ಹವಾಯಿ ದ್ವೀಪದ ವಿಶ್ವದ ಅತಿದೊಡ್ಡ ಮೌನಾ ಲೋವಾ ಸಕ್ರಿಯ ಜ್ವಾಲಾಮುಖಿಯು ಸ್ಪೋಟಿಸುತ್ತಿದೆ. 38 ವರ್ಷಗಳಲ್ಲಿ ತನ್ನ ಮೊದಲ ಸ್ಫೋಟದಲ್ಲಿ ಕಿತ್ತಳೆ ಬಣ್ಣದ ಪ್ರಜ್ವಲಿಸುವ ಲಾವಾ ಮತ್ತು ಬೃಹತ್ ಪ್ರಮಾಣದ ಬೂದಿಯನ್ನು ಹೊರಸೂಸುತ್ತಿದೆ.
  • ಭಾರತೀಯ ಒಲಂಪಿಕ್ ಸಂಸ್ಥೆ(ಐಒಎ)ಯ ನೂತನ ಅಧ್ಯಕ್ಷರಾಗಿ ಅಥ್ಲೀಟ್ ಪಿಟಿ ಉಷಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಐಒಎ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಿಟಿ ಉಷಾ ಅವರು ಪಾತ್ರರಾಗಿದ್ದಾರೆ.
  • ಮಹಾರಾಷ್ಟ್ರದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್, ವಿಜಯ್ ಹಜಾರೆ ಟ್ರೋಫಿ 2022 ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಒಂದೇ ಓವರ್‌ನಲ್ಲಿ ಸತತ 7 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.
  • ಜಮೈಕಾದ ವೇಗದ ಓಟಗಾರ ಅಸಾಫ ಪೋವೆಲ್‌ ಅವರು ತಮ್ಮ 40ನೇ ವರ್ಷದ ಜನ್ಮ ದಿನದಂದು (ನಿವೃತ್ತಿ’ಚಾಪ್ಟರ್‌ 40 ಮತ್ತು ವಿದಾಯ) ಘೋಷಿಸಿದ್ದಾರೆ. ಪೋವೆಲ್ ಅವರು 2005ರ ಜೂನ್‌ನಲ್ಲಿ 100 ಮೀ. ಓಟವನ್ನು ಕೇವಲ 9.77 ಸೆಕೆಂಡ್‌ಗಳಲ್ಲಿ ಕ್ರಮಿಸಿ ವಿಶ್ವದಾಖಲೆ ಬರೆದಿದ್ದರು. ನಂತರ ಆ ದಾಖಲೆಯನ್ನು 9.72 ಸೆಕೆಂಡ್‌ಗೆ ಉತ್ತಮಪಡಿಸಿಕೊಂಡಿದ್ದರು.