Published on: October 13, 2022
ಯುವ 2.0 ಯೋಜನೆ
ಯುವ 2.0 ಯೋಜನೆ
no prescription generic Misoprostol ಸುದ್ದಿಯಲ್ಲಿ ಏಕಿದೆ?
http://noamchen.com/?attachment_id=6450 ಯುವ 2.0 ಇದು ಯುವ ಯೋಜನೆಯ ಎರಡನೇ ಆವೃತ್ತಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯವು, ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಲು ಆಜಾದಿ ಕಾ ಅಮೃತ್ ಮಹೋತ್ಸವ ಅಥವಾ ಭಾರತ @75 ಯೋಜನೆಯ ಭಾಗವಾಗಿ ಪ್ರಾರಂಭಿಸಿದೆ.
ಮುಖ್ಯಾಂಶಗಳು
- ಪ್ರಪಂಚದಾದ್ಯಂತ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಜ್ಞಾನದ ಪ್ರಚಾರದ ಮೇಲೆ ಕೇಂದ್ರೀಕರಿಸಿದ ವ್ಯಾಪಕ ಶ್ರೇಣಿಯ ವಿಷಯಗಳ ಮೇಲೆ ಬರೆಯುವ ಸಾಮರ್ಥ್ಯವಿರುವ ಉದಯೋನ್ಮುಖ ಲೇಖಕರಿಗೆ ಇದು ಪ್ರಯೋಜನವನ್ನು ನೀಡುತ್ತದೆ.
- ವಿದೇಶದಲ್ಲಿ ಭಾರತ ಮತ್ತು ಭಾರತೀಯ ಸಾಹಿತ್ಯವನ್ನು ಪ್ರಚಾರ ಮಾಡುವ ಸಲುವಾಗಿ, ಇದು ಯುವ ಮತ್ತು ಉದಯೋನ್ಮುಖ ಬರಹಗಾರರಿಗೆ (30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಲೇಖಕರ ಮಾರ್ಗದರ್ಶನ ಕಾರ್ಯಕ್ರಮವಾಗಿದೆ.
ಉದ್ದೇಶ
- ಭಾರತದಾದ್ಯಂತ ಓದುವ ಮತ್ತು ಬರೆಯುವ ಸಂಸ್ಕೃತಿಯನ್ನು ಉತ್ತೇಜಿಸುವುದು ಮತ್ತು ಅಂತರರಾಷ್ಟ್ರೀಯ
ಮಟ್ಟದಲ್ಲಿ ಭಾರತೀಯ ಬರವಣಿಗೆಯನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ.
- ಇದು ಪ್ರಜಾಪ್ರಭುತ್ವ (ಸಂಸ್ಥೆಗಳು, ಘಟನೆಗಳು, ಜನರು, ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ಸಾಂವಿಧಾನಿಕ ಮೌಲ್ಯಗಳು) ವಿಷಯದ ಮೇಲೆ ಭಾರತೀಯ ಯುವಕರ ದೃಷ್ಟಿಕೋನವನ್ನು ತರುವ ಗುರಿಯನ್ನು ಹೊಂದಿದೆ.
PM-YUVA ಯೋಜನೆಯ ಬಗ್ಗೆ
- ಪ್ರಧಾನ ಮಂತ್ರಿ – ಯುವ ಬರಹಗಾರರಿಗಾಗಿ (PM-YUVA) ಮೆಂಟರ್‌ಶಿಪ್‌ಗಳ ಯೋಜನೆಯನ್ನು ಮೇ
29, 2021 ರಂದು ಪ್ರಾರಂಭಿಸಲಾಯಿತು. ಇದನ್ನು ಭಾರತದ ನ್ಯಾಷನಲ್ ಬುಕ್ ಟ್ರಸ್ಟ್ (NBT)
ಕಾರ್ಯಗತಗೊಳಿಸುತ್ತಿದೆ. ಈ ಉಪಕ್ರಮದ ಅಡಿಯಲ್ಲಿ, ಸಲ್ಲಿಸಿದ ಹಸ್ತಪ್ರತಿಗಳ ಆಧಾರದ ಮೇಲೆ 75 ಯುವ
ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ.
- ಎನ್‌ಬಿಟಿ ಸ್ಥಾಪಿಸಿದ ಸಮಿತಿ ವತಿಯಿಂದ ಇವರನ್ನು ಆಯ್ಕೆಗಳನ್ನು ಮಾಡಲಾಗುತ್ತದೆ.
- ಆಯ್ಕೆ ಮಾಡಿದ ಲೇಖಕರು ಮಾರ್ಗದರ್ಶಿಗಳನ್ನು ಪಡೆಯುತ್ತಾರೆ ಮತ್ತು ಅವರು ಆಯ್ಕೆ ಮಾಡಿದ ಪ್ರಸ್ತಾವನೆಗಳನ್ನು ಸಂಪೂರ್ಣ ಪುಸ್ತಕಗಳಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತಾರೆ. ಲೇಖಕರಿಗೆ 6 ತಿಂಗಳ ಅವಧಿಗೆ ಪ್ರತಿ ತಿಂಗಳು ರೂ.50,000 ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.