Published on: September 4, 2023

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ 2023

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ 2023

ಸುದ್ದಿಯಲ್ಲಿ ಏಕಿದೆ? ಭಾರತದ ಕ್ಯಾನ್ಸರ್ ತಜ್ಞ ರವಿ ಕಣ್ಣನ್ ಅವರು ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2023 ನೇ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿ ನಾಲ್ವರಿಗೆ ಹಂಚಿಕೆಯಾಗಿದೆ.

ಮುಖ್ಯಾಂಶಗಳು

  • ಪ್ರಶಸ್ತಿ ಸಮಾರಂಭದ 65 ನೇ ಆವೃತ್ತಿಯಾಗಿದೆ
  • ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಏಷ್ಯಾದ ಅತ್ಯುನ್ನತ ಪ್ರಶಸ್ತಿಯಾಗಿದ್ದು ಏಷ್ಯಾದ ನೋಬೆಲ್ ಎಂದು ಗುರುತಾಗಿದೆ.
  • ರವಿ ಕಣ್ಣನ್ ಅವರ ಜೊತೆಗೆ ಮಿರಿಯಮ್ ಕರೋನಿಯಲ್(ಫಿಲಿಫೈನ್ಸ್), ಮತ್ತು ಕೊರ್ವಿ ರಕ್ಷಾಂದ(ಬಾಂಗ್ಲಾದೇಶ), ಯುಜೆನಿಯೊ ಲೆಮೊಸ್, (ಟಿಮೋರ್-ಲೆಸ್ಟೆ) ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.

ರವಿ ಕಣ್ಣನ್

  • 2007 ರಿಂದ ಅಸ್ಸಾಂನ ಕ್ಯಾಚರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(CCHRC) ನಿರ್ದೇಶಕರಾಗಿರುವ ರವಿ ಕಣ್ಣನ್, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಡ ರೋಗಿಗಳಿಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಪ್ರಮುಖರಾಗಿದ್ದಾರೆ.
  • 2007ರ ಮೊದಲು ರವಿ ಕಣ್ಣನ್ ಅವರು ಚೆನ್ನೈನ ಅಡ್ಯಾರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದರು.

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ

  • ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಟಾನದ ವತಿಯಿಂದ 1958ರಿಂದ ಕೊಡಲಾಗುತ್ತಿದೆ. ಏಷ್ಯಾದಲ್ಲಿ ಸರ್ಕಾರಿ, ಸಮುದಾಯ, ವಿದೇಶಿ ಬಾಂಧವ್ಯ, ಆರೋಗ್ಯ, ಸಾಹಿತ್ಯ, ಕಲೆ, ಪತ್ರಿಕೋದ್ಯಮ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ಕೊಡಲಾಗುತ್ತದೆ.
  • ಫಿಲಿಪ್ಪೀನ್ಸ್ ಮಾಜಿ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರ ಸ್ಮರಣಾರ್ಥ ಈ ಪ್ರಶಸ್ತಿಕೊಡಲಾಗುತ್ತದೆ. ಸುಮಾರು 41 ಲಕ್ಷ (50,000 USD) ನಗದನ್ನು ಹೊಂದಿರುತ್ತದೆ.