Published on: June 30, 2023

ರಿವಾರ್ಡ್ ಯೋಜನೆ

ರಿವಾರ್ಡ್ ಯೋಜನೆ

ಸುದ್ದಿಯಲ್ಲಿ ಏಕಿದೆ?  ವಿಶ್ವ ಬ್ಯಾಂಕಿನ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಜಾನ್ ರೂಮ್ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗ ನಾಲ್ಕು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಿ, 600 ಕೋಟಿಯ ನೆರವು ನೀಡಲು ವಿಶ್ವಬ್ಯಾಂಕ್ ಸಮ್ಮತಿಸಿದೆ. ಈ ಮೂಲಕ ಇತರ ರಾಜ್ಯಗಳಿಗೆ ತಾಂತ್ರಿಕ ಸಹಯೋಗ ನೀಡಲು ಕರ್ನಾಟಕವನ್ನು ಮಾರ್ಗದರ್ಶಕ ರಾಜ್ಯವಾಗಿಯೂ ಗುರುತಿಸಿದೆ.

ಮುಖ್ಯಾಂಶಗಳು

  • ವಿಶ್ವಬ್ಯಾಂಕ್ ತಂಡ ಪ್ರಸ್ತುತ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿಶ್ವಬ್ಯಾಂಕ್ ಅನುದಾನಿತ ರಿವಾರ್ಡ್ ಯೋಜನೆ ಮತ್ತು ರಾಜ್ಯದಲ್ಲಿ ಜಲಾನಯನ ಅಭಿವೃದ್ಧಿಗಾಗಿ ಪರಸ್ಪರ ಸಹಯೋಗವನ್ನು ಮುಂದುವರೆಸುವ ಕುರಿತು ಚರ್ಚಿಸಲಾಯಿತು.
  • ವೈಜ್ಞಾನಿಕವಾದ ಭೂ ಮತ್ತು ಜಲ ಸಂಪನ್ಮೂಲಗಳ ದತ್ತಾಂಶ ಹಾಗೂ ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ರಾಜ್ಯದ ಉಪಕ್ರಮಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಲಾಯಿತು, ಕರ್ನಾಟಕದ ಮಾದರಿಯನ್ನು ದೇಶದ ಇತರೆ ಭಾಗಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ಸಲಹೆ ನೀಡಲಾಯಿತು. ಅಲ್ಲದೆ ರಾಜ್ಯವೂ ಸಹ ಕೃಷಿ ಕ್ಷೇತ್ರದಲ್ಲಿ ಇತರ ದೇಶಗಳ ಉತ್ತಮ ತಾಂತ್ರಿಕತೆ / ಮಾದರಿಗಳನ್ನು ಅಳವಡಿಸಿಕೊಂಡು ಪ್ರಗತಿಯನ್ನು ಸಾಧಿಸಬಹುದಾಗಿದೆ.

600 ಕೋಟಿಯ ನೆರವು

  • “ರಾಜ್ಯದಲ್ಲಿ ಜಲಾನಯನ ಪ್ರದೇಶದ ಪುನಶ್ವೇತನಕ್ಕೆ 600 ಕೋಟಿಯ ನೆರವು ನೀಡಲು ವಿಶ್ವಬ್ಯಾಂಕ್ ಸಮ್ಮತಿಸಿದೆ.
  • ಐದು ವರ್ಷಗಳ ‘ರಿವಾರ್ಡ್’ (ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆ) ಮೂಲಕ ಜಲಾನಯನ ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗುವುದು’.

‘ರಿವಾರ್ಡ್’ (ಜಲಾನಯನ ಪ್ರದೇಶ ಅಭಿವೃದ್ಧಿ) ಯೋಜನೆ 

  • ಜಲಾನಯನ ಅಭಿವೃದ್ಧಿ ಇಲಾಖೆಯು ವಿಶ್ವಬ್ಯಾಂಕ್ ನೆರವಿನೊಂದಿಗೆ ಕರ್ನಾಟಕ ಜಲಾನಯನ ಅಭಿವೃದ್ಧಿ ಯೋಜನೆ-II (ಸುಜಲ-III) 2013 -14ನೇ ಸಾಲಿನಿಂದ ರೂ.412.59 ಕೋಟಿಗಳ (ಪರಿಷ್ಕೃತ) ಅನುದಾನದಲ್ಲಿ ಅನುಷ್ಠಾನಗೊಳಿಸುತ್ತಿದೆ. ಯೋಜನೆಯನ್ನು ರಾಜ್ಯದ 11 ಜಿಲ್ಲೆಗಳಾದ ಚಾಮರಾಜನಗರ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ, ಗದಗ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ಕಿರುಜಲಾನಯನಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
  • ಒಟ್ಟು ಯೋಜನಾ ಮೊತ್ತದಲ್ಲಿ 70% ವಿಶ್ವ ಬ್ಯಾಂಕ್ ಪಾಲು ಮತ್ತು 3೦% ರಾಜ್ಯ ಸರ್ಕಾರದ ಪಾಲು ಇರುತ್ತದೆ.

ಯೋಜನೆಯ ಧ್ಯೇಯೊದ್ದೇಶ:

  • ಮಳೆಯಾಶ್ರಿತ ಕೃಷಿ ಕಾರ್ಯಕ್ರಮಗಳು, ನವೀನ ಹಾಗೂ ವೈಜ್ಞಾನಿಕ ಆಧಾರಿತ ವಿಧಾನಗಳು ಮತ್ತು ವಿವಿಧ ಹಂತಗಳಲ್ಲಿ ಸಾಂಸ್ಥಿಕ ಬಲವರ್ಧನೆ ಹಾಗೂ ಪಾಲುದಾರರ ಸಾಮರ್ಥ್ಯ ಅಭಿವೃದ್ಧಿ ಸಂಬಂಧಿತ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಹೆಚ್ಚು ಪರಿಣಾಮಕಾರಿಯಾಗಿ ಜಲಾನಯನ ನಿರ್ವಹಣೆಯನ್ನು ನಿರೂಪಿಸುವುದು.