Published on: September 27, 2022

ರೇಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ನಿರಾಕರಣೆ

ರೇಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ನಿರಾಕರಣೆ

generic cytotec without a precsriptions ಸುದ್ದಿಯಲ್ಲಿ ಏಕಿದೆ?

Petare 64ನೇ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಂಬಂಧ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನವು ಕೇರಳದ ಸಿಪಿಎಂ ಹಿರಿಯ ನಾಯಕಿ ಮತ್ತು ಮಾಜಿ ಆರೋಗ್ಯ ಸಚಿವೆ ಶೈಲಜಾ ಅವರನ್ನು ಸಂಪರ್ಕಿಸಿತ್ತು, ಆದರೆ ಅವರು ಈ ಪ್ರಶಸ್ತಿಯನ್ನು  ನಿರಾಕರಿಸಿದ್ದಾರೆ.

ನಿರಾಕರಿಸಲು ಕಾರಣ :

  • ಕೋವಿಡ್-19 ಸಾಂಕ್ರಾಮಿಕ ಮತ್ತು ನಿಫಾ ವಿರುದ್ಧದ ಅವರ ವೈಯಕ್ತಿಕ ಪರಿಶ್ರಮವನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಆದರೆ, ಶೈಲಜಾ ಅವರು ಇದರಲ್ಲಿನ ಪರಿಶ್ರಮ ವೈಯಕ್ತಿಕವಾದುದಲ್ಲ, ಎಲ್‌ಡಿಎಫ್‌ ಸರ್ಕಾರದಲ್ಲಿದ್ದ ಎಲ್ಲರ ಸಾಂಘಿಕ ಶ್ರಮವೆಂದು ಭಾವಿಸಿ ಪ್ರಶಸ್ತಿ ನಿರಾಕರಿಸಿದ್ದಾರೆ.

ಮ್ಯಾಗ್ಸೆಸ್ಸೆ ಪ್ರಶಸ್ತಿ

  • ಫಿಲಿಪ್ಪೀನ್ಸ್‌ ಮಾಜಿ ಅಧ್ಯಕ್ಷರ ಹೆಸರಿನಲ್ಲಿ ಪ್ರಶಸ್ತಿ 1957ರ ಮಾರ್ಚ್‌ನಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟ ರೇಮನ್‌ ಮ್ಯಾಗ್ಸೆಸೆ ಅವರ ಗೌರವಾರ್ಥ ಅದೇ ವರ್ಷದಲ್ಲಿ ರೋಕ್‌ಫೆಲ್ಲರ್ ಬ್ರದರ್ಸ್ ಫಂಡ್ (ಆರ್‌ಬಿಎಫ್) ಪ್ರಶಸ್ತಿಗಳನ್ನು ಸ್ಥಾಪಿಸಿತು.

ಯಾರಿಗೆ ನೀಡಲಾಗುತ್ತದೆ ?

  • ಸರ್ಕಾರಿ ಸೇವೆ, ಸಾರ್ವಜನಿಕ ಸೇವೆ, ಅಂತರರಾಷ್ಟ್ರೀಯ ಅರಿವು, ಪತ್ರಿಕೋದ್ಯಮ ಮತ್ತು ಸಾಹಿತ್ಯ ಹಾಗೂ ಸಮುದಾಯದ ನಾಯಕತ್ವಕ್ಕಾಗಿ ಫಿಲಿಪ್ಪೀನ್ಸ್‌ ಮತ್ತು ಏಷ್ಯಾದ ಇತರ ರಾಷ್ಟ್ರಗಳು ಸಲ್ಲಿಸಿದ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದು ಏಷ್ಯಾದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದೆನಿಸಿದೆ.

ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಭಾರತೀಯರು

  • ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ, ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್, ಮಾಜಿ ಚುನಾವಣಾ ಆಯುಕ್ತ ಟಿ.ಎನ್. ಶೇಷನ್‌, ಸಂಗೀತ ವಿದುಷಿ ಎಂ.ಎಸ್. ಸುಬ್ಬಲಕ್ಷ್ಮೀ, ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್, ಪುದುಚೇರಿ ಮಾಜಿ ಗವರ್ನರ್ ಕಿರಣ್ ಬೇಡಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಪ್ರಶಸ್ತಿಗೆ ಭಾಜನರಾದ ಭಾರತೀಯರೆನಿಸಿಕೊಂಡಿದ್ದಾರೆ.