Published on: November 21, 2022

ಶ್ರೀಗಂಧ ನೀತಿ-2022

ಶ್ರೀಗಂಧ ನೀತಿ-2022

ಸುದ್ದಿಯಲ್ಲಿ ಏಕಿದೆ?

ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ ಕರ್ನಾಟಕ ರಾಜ್ಯ ಶ್ರೀಗಂಧ ನೀತಿ-2022ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಮುಖ್ಯಾಂಶಗಳು

  • ಗಂಧವನ್ನು ಬೆಳೆಸುವ ರೈತರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದು.
  • ಸರ್ಕಾರವು ಶ್ರೀಗಂಧದ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಇದು ರೈತರಿಗೆ ಶ್ರೀಗಂಧವನ್ನು ಬೆಳೆಯಲು ಉತ್ತೇಜನ ನೀಡುತ್ತದೆ. ಈ ಕ್ರಮದಿಂದ ರೈತರು ಹೆಚ್ಚಿನ ಹಣವನ್ನು ಗಳಿಸಬಹುದಾಗಿದೆ.
  • ರೈತರಿಗೆ ಮುಕ್ತ ಮಾರುಕಟ್ಟೆ:ಈ ಹೊಸ ನೀತಿಯು ರೈತರಿಗೆ ಮುಕ್ತ ಮಾರುಕಟ್ಟೆಯಲ್ಲಿ ಶ್ರೀಗಂಧವನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ರೈತರು ಬೆಳೆದ ಗಂಧ ಈ ಕಾರ್ಖಾನೆಗೆ ಪೂರೈಕೆ ಮಾಡುವುದರ ಜತೆಗೆ ಖಾಸಗಿ ಸಂಸ್ಥೆಗಳಿಗೂ ಪೂರೈಕೆ ಮಾಡಬಹುದಾಗಿದೆ. ಹಿಂದೆ ಮುಕ್ತವಾಗಿ ಮಾರಾಟ ಮಾಡುವುದಕ್ಕೆ ನಿರ್ಬಂಧವಿತ್ತು.
  • ಮೈಕ್ರೋಚಿಪ್ ಅಳವಡಿಕೆ ಈ ಹೊಸ ನೀತಿಯಡಿ ಅರಣ್ಯ ಇಲಾಖೆಯಿಂದ ರೈತರನ್ನು ಕಳ್ಳಸಾಗಣೆದಾರರಿಂದ ರಕ್ಷಿಸಲಾಗುವುದು. ಯಾರಾದರೂ ಶ್ರೀಗಂಧದ ಮರಗಳನ್ನು ಕಡಿಯಲು ಪ್ರಯತ್ನಿಸಿದಾಗ ಅಧಿಕಾರಿಗಳಿಗೆ ಅಲರ್ಟ್​ ನೀಡಲು ಮರಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುವುದು.
  • ಆಮದು : ರಾಜ್ಯದಲ್ಲಿ ಮೈಸೂರ್ ಸೋಪ್ಸ್‌ಗೆ ಗಂಧದ ಮರಗಳು ಕೊರತೆ ಆಗಿರುವ ಕಾರಣ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಉದ್ದೇಶ

  • ಇದರಿಂದ ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆಯಲು ಅವಕಾಶ ಸಿಗಲಿದೆ. ದೇಶ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕೆ ವ್ಯಾಪಕ ಬೇಡಿಕೆ ಇದೆ. ಈ ಕ್ರಮದಿಂದಾಗಿ ರೈತರ ಆದಾಯವೂ ಹೆಚ್ಚಾಗಲಿದೆ.

ಪ್ರಸ್ತುತ ಇರುವ ನೀತಿ

  • ಶ್ರೀಗಂಧವನ್ನು ಬೆಳೆಯಲು, ರೈತರು ವ್ಯಾಪ್ತಿಯ ಅರಣ್ಯ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕು. ರೈತರು ತಾವು ನೆಡಲು ಉದ್ದೇಶಿಸಿರುವ ಸಸಿಗಳ ಸಂಖ್ಯೆಯ ವಿವರಗಳನ್ನು ನೀಡಬೇಕು ಮತ್ತು ಮರಗಳನ್ನು ಕಡಿಯಲು ಇಲಾಖೆಯಿಂದ ಅನುಮತಿ ಪಡೆಯಬೇಕು. ಅರಣ್ಯ ಇಲಾಖೆ ನಡೆಸುವ ಡಿಪೋಗಳಲ್ಲಿ ಮಾತ್ರ ಶ್ರೀಗಂಧದ ಮರದ ದಿಮ್ಮಿಗಳನ್ನು ಮಾರಾಟ ಮಾಡಲು ರೈತರಿಗೆ ಅವಕಾಶವಿದೆ.